ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಸೂದೆಯಿಂದ ಮಧ್ಯವರ್ತಿಗಳಿಗೆ ನಷ್ಟ: ಸಿ.ಟಿ.ರವಿ

ರಂಗಕರ್ಮಿ ಪ್ರಸನ್ನ ಅವರನ್ನು ಉದ್ದೇಶಿಸಿ ಪತ್ರ
Last Updated 19 ಡಿಸೆಂಬರ್ 2020, 21:48 IST
ಅಕ್ಷರ ಗಾತ್ರ

ಬೆಂಗಳೂರು: ‘2020ರ ಒಳಗೆ ರೈತರ ಆದಾಯವು ದ್ವಿಗುಣವಾದಲ್ಲಿ ಅವರಿಗೆ ಯಾವ ರೀತಿಯ ಅನ್ಯಾಯವಾಗುತ್ತದೆ ಎಂದು ಹೋರಾಟಗಾರರು ಮತ್ತು ಚಿಂತಕರು ತಿಳಿಸಿಕೊಡಬಹುದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

ರಂಗಕರ್ಮಿ ಪ್ರಸನ್ನ ಅವರನ್ನು ಉದ್ದೇಶಿಸಿಬಹಿರಂಗ ಪತ್ರ ಬರೆದಿರುವ ಅವರು, ಕೃಷಿಮಸೂದೆ ವಿರೋಧಿಸುತ್ತಿರುವ ಯಾರು ಬೇಕಾದರೂ ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೋರಿದ್ದಾರೆ.

‘ಪಂಜಾಬ್ ಮತ್ತು ಹರಿಯಾಣದಲ್ಲಿ ತಪ್ಪು ಗ್ರಹಿಕೆಗೆ ಒಳಗಾದ ಕೆಲ ರೈತರು ದೆಹಲಿಯಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಇಲ್ಲಿ ಸ್ಥಳೀಯವಾಗಿ ಕೆಲವರು ಹೋರಾಟ ಮಾಡುತ್ತಿದ್ದಾರೆ. ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸುವುದು ಅವರ ಹೋರಾಟದ ಮುಖ್ಯ ಉದ್ದೇಶವಾಗಿದೆ. ಯಾವುದೇ ರೈತಪರ ಕಾಳಜಿ ಹೋರಾಟಗಾರರಲ್ಲಿ ಕಾಣಿಸುತ್ತಿಲ್ಲ. ಪ್ರಸನ್ನ ಅವರು ಯಾವ ಕಾರಣಕ್ಕೆ ಹೋರಾಟ ನಡೆಸುತ್ತಿದ್ದಾರೆ ಎಂಬುದು ಇನ್ನೂ ಸರಿಯಾಗಿ ಅರ್ಥವಾಗಿಲ್ಲ. ಅವರ ಕೆಲ ನಡೆಗಳು ಸಂಶಯವನ್ನು ಹುಟ್ಟುಹಾಕುತ್ತಿವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT