ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿಯ ಮೂಲಕ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲಾಯಿತು: ಬಿಜೆಪಿ

ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ 25 ಜೂನ್ 1975 ರಂದು ತುರ್ತುಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಮೇಲೆ ದೊಡ್ಡ ದಾಳಿ ನಡೆಸಲಾಯಿತು ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ತುರ್ತುಪರಿಸ್ಥಿತಿ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯು, 'ಕೇಂದ್ರದ ಅಂದಿನ ಇಂದಿರಾಗಾಂಧಿ ಸರ್ಕಾರವು ತುರ್ತುಪರಿಸ್ಥಿತಿಯ ಮೂಲಕ ಅರ್ಥ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಷ್ಟಕ್ಕೀಡು ಮಾಡಿತ್ತು. ಗರೀಬಿ ಹಟಾವೋ ಚುನಾವಣಾ ಘೋಷವನ್ನು ಹಿಂತೆಗೆದುಕೊಂಡಿತು' ಎಂದು ಟೀಕಾಪ್ರಹಾರ ನಡೆಸಿದೆ.

'ಮಧ್ಯರಾತ್ರಿಯಲ್ಲಿ ಎಲ್ಲಾ ಪ್ರಮುಖ ದಿನಪತ್ರಿಕೆಗಳ ಕಾರ್ಯಾಲಯಗಳ ವಿದ್ಯುತ್ತನ್ನು ಕಡಿತಗೊಳಿಸಲಾಗಿತ್ತು. ಪ್ರಾಮಾಣಿಕ ಪತ್ರಕರ್ತರನ್ನು ಜೈಲಿಗಟ್ಟಿ, ಅವರ ಕುಟುಂಬ ಸದಸ್ಯರನ್ನು ಪೀಡಿಸುವ ಕೃತ್ಯ ನಡೆಸಲಾಯಿತು' ಎಂದು ತುರ್ತುಪರಿಸ್ಥಿತಿಯ ಬಗ್ಗೆ ಬಿಜೆಪಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT