ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂತ್‌ಪೇಸ್ಟ್‌ ಪೊಟ್ಟಣದಲ್ಲಿ ಡ್ರಗ್ಸ್‌ ಸಾಗಿಸು‌ತ್ತಿದ್ದವ ಸೆರೆ

Last Updated 5 ಸೆಪ್ಟೆಂಬರ್ 2021, 16:37 IST
ಅಕ್ಷರ ಗಾತ್ರ

ಬೆಂಗಳೂರು: ತನಿಖಾ ಸಂಸ್ಥೆಗಳ ದಾರಿ ತಪ್ಪಿಸುವ ಸಲುವಾಗಿ ಟೂತ್‌ಪೇಸ್ಟ್‌ ಪೊಟ್ಟಣ ಹಾಗೂ ಸೌಂದರ್ಯ ವರ್ಧಕ ಜೆಲ್‌ನ ಡಬ್ಬಿಗಳಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಪೆಡ್ಲರ್‌ನನ್ನು ಸಿಸಿಬಿ ಹಾಗೂ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಯು ನೈಜೀರಿಯಾ ಪ್ರಜೆ ಎಂಬುದು ಗೊತ್ತಾಗಿದೆ. ಆತನಿಂದ ₹1 ಕೋಟಿ ಮೌಲ್ಯದ 500 ಗ್ರಾಂ ಎಂ.ಡಿ.ಎಂ.ಎ.ಕ್ರಿಸ್ಟೆಲ್‌ ಹಾಗೂ 400 ಎಂ.ಡಿ.ಎಂ.ಎ.ಎಕ್ಸ್‌ಟೆಸಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್‌ ಹಾಗೂ ತೂಕದ ಯಂತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.

‘ಪ್ರವಾಸಿ ವೀಸಾ ಅಡಿಯಲ್ಲಿ ಭಾರತಕ್ಕೆ ಬಂದಿರುವ ಆರೋಪಿಯು ಕಮ್ಮನಹಳ್ಳಿಯ ಸೇಂಟ್‌ ಥಾಮಸ್‌ ಟೌನ್‌ನ 3ನೇ ತಿರುವಿನಲ್ಲಿರುವ ಕಟ್ಟಡವೊಂದರಲ್ಲಿ ವಾಸವಿದ್ದ. ಈತ ಮಾದಕ ವಸ್ತು ಮಾರಾಟ ಜಾಲದಲ್ಲಿ ಸಕ್ರಿಯವಾಗಿರುವ ಕುರಿತು ಖಚಿತ ಮಾಹಿತಿ ಲಭಿಸಿತ್ತು. ಇದರ ಆಧಾರದಲ್ಲಿ ಅಧಿಕಾರಿಗಳ ತಂಡವುಕಾನ್ವೆಂಟ್‌ ಅಡ್ಡರಸ್ತೆಯಲ್ಲಿರುವ ಕಟ್ಟಡದ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿತ್ತು’.

‘ಮುಂಬೈನಲ್ಲಿರುವ ತನ್ನ ಸ್ನೇಹಿತನಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸುತ್ತಿದ್ದ ಆರೋಪಿ, ಅವುಗಳನ್ನು ಟೂತ್‌ಪೇಸ್ಟ್‌ ಪೊಟ್ಟಣ ಹಾಗೂ ಸೌಂದರ್ಯವರ್ಧಕ ಜೆಲ್‌ನ ಡಬ್ಬಿಗಳಲ್ಲಿ ತುಂಬಿಕೊಂಡು ನಗರಕ್ಕೆ ತರುತ್ತಿದ್ದ. ಅದನ್ನು ಕಾಲೇಜು ವಿದ್ಯಾರ್ಥಿಗಳು ಹಾಗೂ ಐ.ಟಿ.ಕಂಪನಿಯ ಉದ್ಯೋಗಿಗಳಿಗೆ ಮಾರುತ್ತಿದ್ದ. ಈತನ ವಿರುದ್ಧ ಮುಂಬೈನ ಸಾಂತಾಕ್ರೂಸ್‌ ಪೊಲೀಸ್‌ ಠಾಣೆಯಲ್ಲೂ ಪ್ರಕರಣ ದಾಖಲಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಆರೋಪಿಯ ವಿರುದ್ಧ ಎನ್‌.ಡಿ.‍ಪಿ.ಎಸ್‌ ಕಾಯ್ದೆಯ ಅಡಿಯಲ್ಲಿ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿಸಿ ಆತನಿಂದ ಮತ್ತಷ್ಟು ಮಾಹಿತಿಗಳನ್ನು ಕಲೆಹಾಕಲಾಗುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT