ಸೋಮವಾರ, ಆಗಸ್ಟ್ 8, 2022
23 °C
ಡ್ರಗ್ಸ್‌ ಜಾಲ: ಮೂವರು ಆರೋಪಿಗಳು ಸಿಸಿಬಿ ಕಸ್ಟಡಿಗೆ

ಪಾರ್ಟಿ ಪ್ರಚಾರಕ್ಕೆ ವಾಟ್ಸ್‌ಆ್ಯಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡ್ರಗ್ಸ್ ಜಾಲವನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದ ಆರೋಪಿಗಳು, ತಾವು ಆಯೋಜಿಸುತ್ತಿದ್ದ ಡ್ರಗ್ಸ್ ಪಾರ್ಟಿ ಗಳ ಪ್ರಚಾರಕ್ಕಾಗಿ ವಾಟ್ಸ್‌ಆ್ಯಪ್ ಹಾಗೂ ಟೆಲಿಗ್ರಾಂ ಆ್ಯಪ್ ಬಳಸುತ್ತಿದ್ದರೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಪ್ರಕರಣದಡಿ ಶುಕ್ರವಾರ ಬಂಧಿಸಿದ್ದ ಪ್ರತೀಕ್ ಶೆಟ್ಟಿ ಹಾಗೂ ಆದಿತ್ಯ ಅಗರವಾಲ್‌‌ನನ್ನು ವಿಚಾರಣೆಗಾಗಿ ಏಳು ದಿನ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ಜಾಲದ ಬಗ್ಗೆ ಅವರಿಬ್ಬರು ಮಾಹಿತಿ ಬಾಯ್ಬಿಟ್ಟಿದ್ದಾರೆ.

‘ಜಾಲದ ಆರೋಪಿಗಳು, ಬೇರೆ ಬೇರೆ ಕ್ಷೇತ್ರದವರು. ಆದರೆ, ಎಲ್ಲರೂ ಪಾರ್ಟಿಯಲ್ಲೇ ಪರಿಚಯ ಆದವರು. ದೆಹಲಿಯ ವಿರೇನ್ ಖನ್ನಾ ಹಾಗೂ ಇತರರು, ಕಾರ್ಯಕ್ರಮ ಸಂಘಟನೆ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ಪಾರ್ಟಿಗಳನ್ನು ಆಯೋಜಿಸಿ ಮದ್ಯವನ್ನು ಮಾತ್ರ ಪೂರೈಸುತ್ತಿದ್ದರು. ಇದರ ನಡುವೆಯೇ ಅಕ್ರಮವಾಗಿ ಡ್ರಗ್ಸ್ ಸರಬ
ರಾಜು ಮಾಡಲಾರಂಭಿಸಿದ್ದರು. ಇದರಿಂದಾಗಿ ಪಾರ್ಟಿಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಯಿತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಬೆಂಗಳೂರಿನಲ್ಲಿ ಪಾರ್ಟಿ ಆಯೋಜಿಸುವ ಹಾಗೂ ಅದಕ್ಕೆ ಗ್ರಾಹಕರನ್ನು ಕರೆ ತರುವ ಜವಾಬ್ದಾರಿಯನ್ನು ವಿರೇನ್ ಖನ್ನಾ, ತನ್ನ ಸಹಚರ ಆದಿತ್ಯ ಅಗರವಾಲ್‌ನಿಗೆ ನೀಡಿದ್ದ. ಇನ್ನೊಬ್ಬ ಆರೋಪಿ ವೈಭವ್ ಜೈನ್, ಡ್ರಗ್ಸ್‌ ಸರಬರಾಜು ಜೊತೆಯಲ್ಲೇ ಪಾರ್ಟಿ ಆಯೋಜನೆಗೂ ಸಹಕಾರ ನೀಡುತ್ತಿದ್ದ.’

‘ಹೊಸ ವರ್ಷ, ಹಬ್ಬ, ವಿಶೇಷ ದಿನಗಳ ಸಮಯದಲ್ಲೇ ಆರೋಪಿಗಳು ಪಾರ್ಟಿ ಆಯೋಜಿಸುತ್ತಿದ್ದರು. ಅದರ ಪ್ರಚಾರಕ್ಕಾಗಿ ವಾಟ್ಸ್ಆ್ಯಪ್‌ ಹಾಗೂ ಟೆಲಿಗ್ರಾಂ ಗುಂಪುಗಳನ್ನು ಮಾಡಿದ್ದರು. ಅದರಲ್ಲೇ ಕೆಲ ಗ್ರಾಹಕರು, ಡ್ರಗ್ಸ್‌ಗೆ ಬೇಡಿಕೆ ಇಡುತ್ತಿದ್ದರು’ ಎಂದು ಅಧಿಕಾರಿ ತಿಳಿಸಿದರು.

‘ಆರೋಪಿಗಳ ಮೊಬೈಲ್ ಜಪ್ತಿ ಮಾಡಿ ತಾಂತ್ರಿಕ ತಂಡದಿಂದ ಪರಿಶೀಲನೆ ನಡೆಸಲಾಗಿದೆ. ಅದರಿಂದ ಸಾಕಷ್ಟು ಮಾಹಿತಿ ಸಿಕ್ಕಿದ್ದು, ಅದನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದರು.

ಸಾಂತ್ವನ ಕೇಂದ್ರದಲ್ಲಿ ನಟಿಯರು: ಸಿಸಿಬಿ ಕಸ್ಟಡಿಯಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ಸಾಂತ್ವನ ಕೇಂದ್ರದಲ್ಲಿದ್ದಾರೆ. ಶನಿವಾರವೂ ಪೊಲೀಸರು ಅವರನ್ನು ವಿಚಾರಣೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು