ಬೆಂಗಳೂರು: 'ಬೆಳಗಾವಿಯಲ್ಲಿ ಎಲೆಕ್ಟ್ರಿಕಲ್ ವಾಹನ ಮತ್ತು ಡ್ರೋನ್ ಉತ್ಪಾದನಾ ಕ್ಲಸ್ಟರ್‌ಗಳನ್ನು ಆರಂಭಿಸಲಾಗುವುದು’ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ್ ಕುಮಾರ್ ಗುಪ್ತ ತಿಳಿಸಿದರು.

‘ಫ್ಯೂಚರ್ ಐಸಿಟಿ ವೇದಿಕೆ’ ಸೋಮವಾರ ಹಮ್ಮಿಕೊಂಡಿದ್ದ ‘ಸುಸ್ಥಿರ ನಗರಗಳು’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಇದೇ 24ರಂದು ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಬೆಂಗಳೂರು ನಂತರ ಇತರ ನಗರಗಳಲ್ಲಿ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವಲಯಗಳನ್ನು ಸ್ಥಾಪಿಸಲು 2000 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ’ ಎಂದು ವಿವರಿಸಿದರು.

‘2030ರ ವೇಳೆಗೆ ನವೋದ್ಯಮ ವಲಯದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆಯಲಿದೆ. ಸದ್ಯ ₹82.60 ಲಕ್ಷ ಕೋಟಿ (100 ಬಿಲಿಯನ್ ಡಾಲರ್) ವಹಿವಾಟಿನಲ್ಲಿ ₹52.85 ಲಕ್ಷ ಕೋಟಿ (64 ಬಿಲಿಯನ್ ಡಾಲರ್) ಬೆಂಗಳೂರಿನ ನವೋದ್ಯಮಗಳು ವಹಿವಾಟು ನಡೆಸಿವೆ’ ಎಂದರು.

’1989ರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಚಾಲನೆ ದೊರೆಯಿತು. ನಂತರ, ವೇಗವಾಗಿ ಈ ಕ್ಷೇತ್ರ ಅಪಾರ ಬೆಳವಣಿಗೆ ಸಾಧಿಸಿತು. ಕರ್ನಾಟಕದಲ್ಲಿ 2000ರಲ್ಲಿ 368 ತಾಂತ್ರಿಕ ಸಂಸ್ಥೆಗಳಿದ್ದವು. ಈಗ 1100ಕ್ಕೂ ಹೆಚ್ಚು ತಾಂತ್ರಿಕ ಸಂಸ್ಥೆಗಳಿವೆ ಮತ್ತು 3500 ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ) ಕಂಪನಿಗಳಿವೆ. ಡಿಜಿಟಲ್ ಆರ್ಥಿಕತೆಯ ವಹಿವಾಟು ಈಗ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿಯಲ್ಲಿ ಡಿಜಿಟಲ್ ಉದ್ಯಮಕ್ಕೆ ಆದ್ಯತೆ ನೀಡಲಾಗಿದೆ’ ಎಂದು ವಿವರಿಸಿದರು.

ಇನ್ಫೊಸಿಸ್ ಸಹ ಸ್ಥಾಪಕ ನಂದನ್ ನಿಲೇಕಣಿ ಮಾತನಾಡಿ, ‘ಡಿಜಿಟಲ್ ವ್ಯವಸ್ಥೆ ಮೇಲೆ ನಮ್ಮ ಜೀವನ ಇಂದು ಅವಲಂಬಿತವಾಗಿದೆ. ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ವಲಯ ಮಹತ್ವದ ಪಾತ್ರ ವಹಿಸಿತು. ಡಿಜಿಟಲ್ ವಲಯದಲ್ಲಿ ಇನ್ನೂ ಹೆಚ್ಚು ಜನರು ಭಾಗಿಯಾಗಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.