ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರೋರ್‌ ಕಾಬ್‌’ ಸಂಶೋಧನೆಗೆ ₹10 ಲಕ್ಷ ಬಹುಮಾನ

ಎಫ್‌ಕೆಸಿಸಿಐ ಮಂಥನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಡ ಹೊಸ ಸಂಶೋಧನೆಗಳು
Last Updated 19 ಸೆಪ್ಟೆಂಬರ್ 2022, 2:22 IST
ಅಕ್ಷರ ಗಾತ್ರ

ಬೆಂಗಳೂರು: ಹಾವೇರಿ ಜಿಲ್ಲೆಯ ಹನುಮನಮಟ್ಟಿ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಸಂಶೋಧಿಸಿದ ‘ಕ್ರೋರ್ ಕಾಬ್‌’ (ಕೋಕೊ ಪೀಟ್ ಮಾದರಿಯ ಪ್ಲಾಂಟಿಂಗ್ ಮೀಡಿಯಾ) ಯೋಜನೆಗೆ ಪ್ರಥಮ ಸ್ಥಾನ ಸಂದಿತು. ಅದನ್ನು ರೂಪಿಸಿದ ವಿದ್ಯಾರ್ಥಿಗಳು ₹10 ಲಕ್ಷ ನಗದು ಮತ್ತು ಟ್ರೋಫಿ ಪಡೆದರು. ಕೋಕೊ ಪೀಟ್‌ ತಯಾರಿಸಲು ಬೇಕಾಗುವ ದೀರ್ಘಾವಧಿಯನ್ನು ಕಡಿಮೆ ಮಾಡುವಂತಹ ಸಂಶೋಧನೆ ಇದು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಭಾನುವಾರ ಹಮ್ಮಿಕೊಂಡಿದ್ದ ‘ಮಂಥನ್-2022 ಬ್ಯುಸಿನೆಸ್ ಪ್ಲ್ಯಾನ್ ಪ್ರೆಸೆಂಟೇಷನ್ ಸ್ಪರ್ಧೆ’ಯಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಐ.ಎಸ್. ಪ್ರಸಾದ್ ಪ್ರಶಸ್ತಿ ಪ್ರದಾನ ಮಾಡಿದರು.

ಸೇಲಂನ ಸೋನಾ ಕಾಲೇಜ್‌ ಆಫ್‌ ಟೆಕ್ನಾಲಜಿ ವಿದ್ಯಾರ್ಥಿಗಳು ಸಂಶೋಧಿಸಿದ ‘ಎಲೆಕ್ಟ್ರಿಕ್ ಸಿಲಿಂಡರ್ ಫಾರ್ ಜ್ಯಾಕ್ವಾರ್ಡ್‌ ಮಷಿನ್’ ಎರಡನೇ ಸ್ಥಾನ ಪಡೆಯಿತು. ₹5 ಲಕ್ಷ ನಗದು ಮತ್ತು ಟ್ರೋಫಿ ಬಹುಮಾನ ಸಂದಿತು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಂಶೋಧನೆ ಮಾಡಿ ತಯಾರಿಸಿದ ‘ಪ್ಯೂಪ್‌ಬಿತೆ’ (ಕುಡು ಫೀಡ್) ಮೂರನೇ ಸ್ಥಾನ ಪಡೆಯಿತು. ₹4 ಲಕ್ಷ ನಗದು ಮತ್ತು ಟ್ರೋಫಿಯನ್ನು ತಂಡಕ್ಕೆ ಬಹುಮಾನವಾಗಿ ನೀಡಲಾಯಿತು. ರೇಷ್ಮೆ ಹುಳುಗಳನ್ನು ಕೋಳಿಗಳಿಗೆ ಪ್ರೋಟೀನ್‌ಯುಕ್ತ ಆಹಾರವನ್ನಾಗಿಸುವ ಸಂಶೋಧನೆ ಇದು.

ಸೋನಾ ಕಾಲೇಜ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಸಂಶೋಧಿಸಿದ ‘ಪ್ರೊಡಕ್ಷನ್ ಆಫ್ ಎಕೋ ಫ್ರೆಂಡ್ಲಿ ವೆಗಾನ್ ಲೆದರ್ ಯೂಸಿಂಗ್ ಡಿಗ್ರೇಡಬಲ್ ಬಯೋ ವೇಸ್ಟ್‌’ಗೆ ನಾಲ್ಕನೆ ಸ್ಥಾನ ದೊರೆಯಿತು. ₹3 ಲಕ್ಷ ನಗದು ಸಂದಿತು. ಎಸ್‌ಡಿಎಂ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ವಿದ್ಯಾರ್ಥಿಗಳು ಸಂಶೋಧಿಸಿದ ‘ಡಿಸೈನ್ ಆ್ಯಂಡ್ ಫ್ಯಾಬ್ರಿಕೇಷನ್ ಆಫ್ ಎ ಸಿಸ್ಟಮ್ ಟು ಕ್ಯಾಪ್ಚರ್ ಆಂಬಿಯೆಂಟ್ CO2’ಗೆ ಐದನೇ ಸ್ಥಾನ ಸಂದಿದ್ದು, ₹2 ಲಕ್ಷ ನಗದು ಬಹುಮಾನ ಲಭಿಸಿತು.

ಸರ್ಕಾರಿ ರಾಮನಾರಾಯಣ ಚೆಲ್ಲಾರಾಮ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮಾನೇಜ್‌ಮೆಂಟ್‌ ವಿದ್ಯಾರ್ಥಿಗಳು ಸಂಶೋಧಿಸಿದ ‘ಕ್ರಿಡ್ಜನ್‌’ಗೆ ಆರನೇ ಸ್ಥಾನ ಲಭಿಸಿದ್ದು, ₹1 ಲಕ್ಷ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಸಂಸದ ತೇಜಸ್ವಿ ಸೂರ್ಯ ಮುಖ್ಯ ಅತಿಥಿಯಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT