ಸೋಮವಾರ, ಜನವರಿ 25, 2021
21 °C

ಮಕ್ಕಳಿಗೆ ವಿಷ ಉಣಿಸಿ ದಂಪತಿ ನೇಣಿಗೆ ಶರಣು, ಒಂದೇ ಕುಟುಂಬದ ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ತಾಲ್ಲೂಕಿನ ಗಾದಿಗನೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಬುಧವಾರ ಸಾವನ್ನಪ್ಪಿದ್ದಾರೆ.
ನಂಜುಂಡೇಶ್ವರ (32), ಅವರ ಪತ್ನಿ ಪಾರ್ವತಿ (27), ಮೂರು ವರ್ಷದ ಮಗಳು ಗೌತಮಿ, ಎರಡು ವರ್ಷದ ಮಗ ಸ್ವರೂಪ್‌ ಮೃತರು.

‘ಜೆಎಸ್‌ಡಬ್ಲ್ಯೂ ಕಂಪನಿಯ ನೌಕರ ನಂಜುಂಡೇಶ್ವರ ಹಾಗೂ ಅವರ ಪತ್ನಿ ಮಕ್ಕಳಿಗೆ ವಿಷ ಕೊಟ್ಟಿದ್ದಾರೆ. ಬಳಿಕ ಇಬ್ಬರೂ ನೇಣಿಗೆ ಶರಣಾಗಿ ಜೀವ ಬಿಟ್ಟಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣರು. ಸ್ವಯಂಪ್ರೇರಿತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್‌ ನೋಟ್‌ ಬರೆದಿಟ್ಟು ಜೀವ ತ್ಯಜಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನಂಜುಂಡೇಶ್ವರ ಬಹಳ ಸಾಲ ಮಾಡಿಕೊಂಡಿದ್ದರು. ಅದನ್ನು ತೀರಿಸಲಾಗದೆ ಹೀಗೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಪೊಲೀಸರ ತನಿಖೆ ಮುಗಿದ ನಂತರ ಸತ್ಯಾಂಶ ಹೊರಬರಲಿದೆ. ಸ್ಥಳಕ್ಕೆ ಗಾದಿಗನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು