ಗುರುವಾರ , ಮಾರ್ಚ್ 4, 2021
23 °C
₹5 ಸಾವಿರ ಲಂಚ ಪಡೆಯುವಾಗ ಕಚೇರಿ ಮೇಲೆ ದಾಳಿ

ಜಮೀನಿನ ಮ್ಯುಟೇಷನ್‌ಗೆ ಲಂಚ: ಗುರುಮಠಕಲ್‌ ತಹಶೀಲ್ದಾರ್ ಎಸಿಬಿ ಬಲೆಗೆ, ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಗುರುಮಠಕಲ್‌ ತಹಶೀಲ್ದಾರ್ ಸಂಗಮೇಶ ಜಿಡಗಿ ಅವರನ್ನು ಜಮೀನಿನ ಮ್ಯುಟೇಷನ್‌ ಬದಲಾವಣೆಗಾಗಿ ₹5 ಸಾವಿರ ಲಂಚ ಪಡೆಯುವಾಗ ಬಂಧಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎಸ್‌ಪಿ ಮಹೇಶ ಮೇಘಣ್ಣನವರು ತಿಳಿಸಿದ್ದಾರೆ.

ಅಜಲಾಪುರ ಗ್ರಾಮದ ದೊಡ್ಡಬನ್ನಪ್ಪ ದೂರು ನೀಡಿದ್ದರು. ‘ತಂದೆ ಹೆಸರಿನಲ್ಲಿದ್ದ ಹೊಲವನ್ನು ದೊಡ್ಡಬನ್ನಪ್ಪ ಹೆಸರಿಗೆ ವರ್ಗಾಯಿಸಲು ತಹಶೀಲ್ದಾರ್‌ ಮೊದಲು ₹15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ₹10 ಸಾವಿರಕ್ಕೆ ಒಪ್ಪಿದ್ದರು. ಸೋಮವಾರ ₹5 ಸಾವಿರ ಪಡೆಯುವಾಗ ಸಿಕ್ಕಿಬಿದ್ದರು‘ ಎಂದು ಹೇಳಿದರು.

‘2020ರ ಫೆಬ್ರುವರಿಯಲ್ಲಿ ಜಮೀನಿನ ಮ್ಯುಟೇಷನ್‌ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ್ದೆ. ಅಂದಿನಿಂದಲೂ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದರು. ಹೀಗಾಗಿ ಎಸಿಬಿಗೆ ದೂರು ನೀಡಿದೆ’ ಎಂದು ದೂರುದಾರ ದೊಡ್ಡಬನ್ನಪ್ಪ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು