ಮಂಗಳವಾರ, ಜನವರಿ 26, 2021
28 °C
ಅವಿರೋಧ ಆಯ್ಕೆಗೆ ಹೆಸರುವಾಸಿ ಕಡಬನಕಟ್ಟೆ

ಚಿತ್ರದುರ್ಗ: ಇಲ್ಲಿ ಗ್ರಾ.ಪಂ. ಚುನಾವಣೆಯೇ ನಡೆದಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಇಲ್ಲಿ ಹಣದ ಹೊಳೆ ಹರಿಯುವುದಿಲ್ಲ. ಮದ್ಯ ಸೇರಿ ಇತರೆ ವಸ್ತುಗಳ ಆಮಿಷಕ್ಕೂ ಜನ ಒಳಗಾಗುವುದಿಲ್ಲ. ಮುಖ್ಯವಾಗಿ ಇಲ್ಲಿ ಮತದಾನವೇ ನಡೆದಿಲ್ಲ. ಮೊದಲಿನಿಂದಲೂ ಅವಿರೋಧ ಆಯ್ಕೆಗೆ ಆದ್ಯತೆ ನೀಡಲಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಕಡಬನಕಟ್ಟೆ ಗ್ರಾಮ ಪಂಚಾ ಯಿತಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾದಾಗಿನಿಂದಲೂ ಈ ವ್ಯವಸ್ಥೆ ಇದೆ. ಮಂಡಲ ಪಂಚಾಯಿತಿ ವ್ಯವಸ್ಥೆ ಇದ್ದಾಗಲೂ ಅವಿರೋಧ ಆಯ್ಕೆ ನಡೆಯುತ್ತಿತ್ತು. ಇಲ್ಲಿ 6 ಸದಸ್ಯ ಸ್ಥಾನಗಳಿದ್ದು, ನಾಮಪತ್ರ ಸಲ್ಲಿಸುವಾಗ ಪ್ರತಿ ಸ್ಥಾನಕ್ಕೂ ಒಬ್ಬರೇ ಉಮೇದು ವಾರಿಕೆ ಸಲ್ಲಿಸುತ್ತಾರೆ. ಹೀಗಾಗಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು