ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌, ಐಪಿಎಸ್‌ ಕನಸು ಹಿಂದಿ ಹೇರಿಕೆಯಿಂದ ಭಗ್ನ

ಪ್ರಾಥಮಿಕ ಪರೀಕ್ಷೆ ಕನ್ನಡ ಭಾಷೆಯಲ್ಲಿಲ್ಲ ಇಂಗ್ಲಿಷ್‌–ಹಿಂದಿಯೇ ಅಗತ್ಯ
Last Updated 27 ಆಗಸ್ಟ್ 2020, 19:25 IST
ಅಕ್ಷರ ಗಾತ್ರ

ದಾವಣಗೆರೆ: ‘ಕನ್ನಡದಲ್ಲಿ ಐಎಎಸ್‌ ಮಾಡಿದ್ದೇನೆ ಎಂದು ಹೆಮ್ಮೆಪಡುವವರು ಅರ್ಧ ಸತ್ಯ ಮಾತ್ರ ಹೇಳುತ್ತಿ ದ್ದಾರೆ. ಪ್ರಾಥಮಿಕ (ಪ್ರಿಲಿಮಿನರಿ) ಪರೀಕ್ಷೆ ಬರೆಯಲು ಕನ್ನಡದಲ್ಲಿ ಅವಕಾಶವೇ ಇಲ್ಲ. ಹೀಗಾಗಿಯೇ ಲಕ್ಷಾಂತರ ಕನ್ನಡಿಗರ ಐಎಎಸ್‌, ಐಪಿಎಸ್‌ ಕನಸು ನನಸಾಗುತ್ತಿಲ್ಲ’.

ಎರಡು ಬಾರಿ ಐಎಎಸ್‌ ಪ್ರಾಥಮಿಕ ಪರೀಕ್ಷೆ ಬರೆದಿರುವ ಚನ್ನಗಿರಿಯ ದಯಾನಂದ ಅವರ ಅನುಭವ ಇದು.

ಅಂತಿಮ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ನೀಡಲಾಗಿದೆ. ಆದರೆ ಪ್ರಿಲಿಮಿನರಿ ಪರೀಕ್ಷೆಗೆ ಅವಕಾಶ ಇಲ್ಲದ ಕಾರಣ ಭಾಷೆಯ ತೊಡಕಿರುವವರು ಅಂತಿಮ ಹಂತಕ್ಕೆ ತಲುಪುವುದೇ ಇಲ್ಲ. ಹಿಂದಿಯಲ್ಲಿ ಬರೆಯಲು ಅವಕಾಶ ಇರುವುದರಿಂದ ಉತ್ತರ ಭಾರತೀಯರು ಸುಲಭದಲ್ಲಿ ಪ್ರಿಲಿಮಿನಿರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಹಾಗಾಗಿ ಹಿಂದಿ ಭಾಷಿಕರಂತೆ ದಕ್ಷಿಣ ಭಾರತೀಯರಿಗೂ ಅವರವರ ಭಾಷೆಯಲ್ಲಿ ಬರೆಯಲು ಅವಕಾಶ ನೀಡಬೇಕು ಎನ್ನುವುದು ಅವರ ಒತ್ತಾಯವಾಗಿದೆ.

ಆಗಸ್ಟ್‌ 24ರಂದು ಕೆಎಎಸ್‌ ಪ್ರಿಲಿಮಿನರಿ ಪರೀಕ್ಷೆ ನಡೆಯಿತು. ರಾಜ್ಯದ 1,65,258 ಮಂದಿ ಪರೀಕ್ಷೆ ಬರೆದಿದ್ದಾರೆ. ಅಕ್ಟೋಬರ್‌ 4ಕ್ಕೆ ಐಎಎಸ್‌ ಮತ್ತು ಐಪಿಎಸ್‌ ಪ್ರಿಲಿಮಿನರಿ ಪರೀಕ್ಷೆ ಇದೆ. ಅದರಲ್ಲಿ ಇದರ ಕಾಲುಭಾಗದಷ್ಟು ಮಂದಿ ಮಾತ್ರ ಪರೀಕ್ಷೆಗೆ ಹಾಜರಾಗುತ್ತಾರೆ. ಸಿಲೆಬಸ್‌ ಬಹುತೇಕ ಒಂದೇ ಇದ್ದರೂ, ಜ್ಞಾನ ಇದ್ದರೂ ಭಾಷೆಯ ಕಾರಣದಿಂದ ಹೊರಗುಳಿಯುತ್ತಾರೆ ಎನ್ನುವುದು ಐಎಎಸ್‌, ಕೆಎಎಸ್‌ ಪರೀಕ್ಷೆಗೆ ತಯಾರಿ ನಡೆಸಿರುವ ಶಿಕ್ಷಕ ಗಿರೀಶ್‌ ಮತ್ತೇರ ಅವರ ಅನಿಸಿಕೆ.

‘ಈ ರೀತಿ ಪ್ರಾದೇಶಿಕ ಭಾಷೆಯನ್ನು ಕಡೆಗಣಿಸಿ ಹಿಂದಿಗೆ ಯುಪಿಎಸ್‌ಸಿ ಮಾತ್ರ ಒತ್ತು ನೀಡುತ್ತಿಲ್ಲ; ಎಸ್‌ಎಸ್‌ಸಿ, ಬ್ಯಾಂಕಿಂಗ್‌ ಪರೀಕ್ಷೆಗಳು ಕೂಡ ಇದೇ ಮಾದರಿಯನ್ನು ಬಳಸುತ್ತಿವೆ. ಹಾಗಾಗಿಯೇ ಬ್ಯಾಂಕ್‌, ‍ಅಂಚೆ ಕಚೇರಿ ಮುಂತಾದ ಕಡೆ ಉದ್ಯೋಗಿಗಳಲ್ಲಿ ಹಿಂದಿ ಭಾಷಿಕರೇ ಅಧಿಕ’ ಎಂದು ಐಎಎಸ್‌ ಆಕಾಂಕ್ಷಿ, ಅತಿಥಿ ಉಪನ್ಯಾಸಕ ಶಿವಕುಮಾರ್‌ ಯರಗಟ್ಟಿಹಳ್ಳಿ ವಿವರ ನೀಡಿದರು.

ದೇಶದಾದ್ಯಂತ ಇಂಗ್ಲಿಷ್‌ನಲ್ಲಿಯೇ ಪರೀಕ್ಷೆ ಮಾಡಲಿ. ಆಗ ಎಲ್ಲರಿಗೂ ಒಂದೇ ಮಾದರಿ ಅಳವಡಿಸಿಕೊಂಡಂತಾಗುತ್ತದೆ. ಹಿಂದಿಗೆ ಅವಕಾಶ ನೀಡುವುದಿದ್ದರೆ ಆಯಾ ರಾಜ್ಯಗಳ ಭಾಷೆಗಳಲ್ಲೂ ಬರೆಯಲು ಆಯ್ಕೆ ಇರಬೇಕು. ಇಲ್ಲದೇ ಇದ್ದರೆ ಕರ್ನಾಟಕದ ಜನ ಉದ್ಯೋಗದಿಂದ ವಂಚಿತರಾಗುತ್ತಾರೆ’ ಎನ್ನುತ್ತಾರೆ ಅವರು.

***

ದೇವಸ್ಥಾನದ ಗೇಟನ್ನು ಉಕ್ಕಿನ ಬಾಗಿಲಿನಿಂದ ಬಂದ್‌ ಮಾಡಿ ಗರ್ಭಗುಡಿಗೆ ಮುಕ್ತ ಪ್ರವೇಶ ಎಂಬಂತಿರುವ ಈಗಿನ ವ್ಯವಸ್ಥೆ ಬದಲಾಯಿಸಬೇಕು.

-ಶಿವಕುಮಾರ್‌ ಯರಗಟ್ಟಿಹಳ್ಳಿ, ಐಎಎಸ್‌ ಆಕಾಂಕ್ಷಿ

***

ಹಿಂದಿ ಹೇರಿಕೆ ಕೈಬಿಟ್ಟು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಭಾಷೆಯ ಕಾರಣಕ್ಕೆ ಕನ್ನಡಿಗರು ವಂಚಿತರಾಗಬಾರದು.

-ದಯಾನಂದ ಚನ್ನಗಿರಿ, ಐಎಎಸ್‌ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT