ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾರೋಗ್ಯವಿರುವವರಿಗೆ ಬಟ್ಟೆ ಮಾಸ್ಕ್ ಸುರಕ್ಷಿತವಲ್ಲ: ಆರೋಗ್ಯ ಇಲಾಖೆ ಎಚ್ಚರಿಕೆ

Last Updated 7 ನವೆಂಬರ್ 2020, 16:59 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯಲ್ಲಿ ತಯಾರಿಸಿದ ಬಟ್ಟೆಯ ಮುಖಗವಸು ಅನಾರೋಗ್ಯ ಸಮಸ್ಯೆ ಇರುವವರಿಗೆ ಸುರಕ್ಷಿತವಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮನೆಯಲ್ಲಿ ತಯಾರಿಸುವ ಬಟ್ಟೆಯ ಮುಖಗವಸಿನ ಬಳಕೆಯ ಬಗ್ಗೆ ಇಲಾಖೆಯು ಮಾರ್ಗಸೂಚಿ ಹೊರಡಿಸಿದ್ದು, ‘ಈ ಮಾದರಿಯ ಮುಖಗವಸನ್ನು ಆರೋಗ್ಯವಂತ ವ್ಯಕ್ತಿಗಳು ಮಾತ್ರ ಬಳಸಬಹುದಾಗಿದೆ. ಜ್ವರ, ಕೆಮ್ಮು ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಹಾಗೂ ಕೋವಿಡ್ ಪೀಡಿತರಾಗಿರುವವರು ಬಳಸಲು ಯೋಗ್ಯವಲ್ಲ. ಮುಂಚೂಣಿಯಲ್ಲಿರುವ ಆರೋಗ್ಯ ಸೇವಕರಿಗೆ ಸಹ ಇದು ಸೂಕ್ತವಲ್ಲ. ಹಾಗಾಗಿ ಅವರು ಸರ್ಜಿಕಲ್ ಮುಖಗವಸುಗಳನ್ನೇ ಧರಿಸಬೇಕು. ಆರೋಗ್ಯವಂತರು ಮನೆಯಲ್ಲಿ ತಯಾರಿಸಿದ ಬಟ್ಟೆಯ ಮುಖಗವಸುಗಳನ್ನು ಧರಿಸಿದರೂ ಪ್ರತಿನಿತ್ಯ ಸ್ವಚ್ಛಪಡಿಸಿಕೊಳ್ಳಬೇಕು’ ಎಂದು ಇಲಾಖೆ ತಿಳಿಸಿದೆ.

‘ಸೋಪಿನ ನೀರಿನಿಂದ ಸ್ಚಚ್ಛಗೊಳಿಸಿದ ಮುಖಗವಸುಗಳನ್ನು ಬಿಸಿಲಿನಲ್ಲಿ ಸಂಪೂರ್ಣವಾಗಿ ಒಣಗಿಸಬೇಕು. ಇಲ್ಲವಾದಲ್ಲಿ ಸೂಕ್ತ ರಕ್ಷಣೆ ಇರುವುದಿಲ್ಲ. ಮುಖಗವಸನ್ನು ತಯಾರಿಸುವ ಬಟ್ಟೆಯೂ ಸ್ವಚ್ಛವಾಗಿರಬೇಕು. ಮೂಗು ಮತ್ತು ಬಾಯಿಯ ಭಾಗವು ಸರಿಯಾಗಿ ಮುಚ್ಚುವ ರೀತಿಯಲ್ಲಿ ಮಾಸ್ಕ್‌ ಅನ್ನು ಸಿದ್ಧಪಡಿಸಿಕೊಳ್ಳಬೇಕು. ಬಳಸಿದ ಮುಖಗವಸನ್ನು ಯಾರೊಂದಿಗೂ ಹಂಚಿಕೊಳ್ಳಬಾರದು’ ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT