ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ಟ್‌ನ್ಯೂಸ್ ಮೊಹಮ್ಮದ್ ಜುಬೈರ್ ಬೆಂಗಳೂರಿನ ಮನೆಯಲ್ಲಿ ಮೂರು ಗಂಟೆ ಶೋಧ

Last Updated 30 ಜೂನ್ 2022, 12:52 IST
ಅಕ್ಷರ ಗಾತ್ರ

ಬೆಂಗಳೂರು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಬಂಧಿಸಲಾಗಿರುವ ಮೊಹಮ್ಮದ್ ಜುಬೈರ್ ಅವರನ್ನು ಬೆಂಗಳೂರಿಗೆ ಗುರುವಾರ ಕರೆತಂದಿರುವ ದೆಹಲಿ ಪೊಲೀಸರು, ಕಾವಲ್‌ಭೈರಸಂದ್ರದಲ್ಲಿರುವ ಮನೆಯಲ್ಲಿ ಮೂರು ಗಂಟೆ ಶೋಧ ನಡೆಸಿದರು.

ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಸಂಸ್ಥೆಯ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರನ್ನು ಇತ್ತೀಚೆಗೆ ದೆಹಲಿ ಪೊಲೀಸರು ಬಂಧಿಸಿದ್ದರು.

ಜುಬೈರ್ ಅವರು ಡಿ.ಜೆ. ಹಳ್ಳಿ ಠಾಣೆ ವ್ಯಾಪ್ತಿಯ ಕಾವಲ್ ಭೈರಸಂದ್ರ ನಿವಾಸಿ. ಹೀಗಾಗಿ, ಪುರಾವೆಗಳನ್ನು ಕಲೆಹಾಕಲು ಜುಬೈರ್ ಅವರನ್ನು ದೆಹಲಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

ಜುಬೈರ್ ಕರೆದುಕೊಂಡು ಗುರುವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿದ್ದ ದೆಹಲಿ ಪೊಲೀಸರು, ಡಿ.ಜೆ. ಹಳ್ಳಿ ಠಾಣೆಯಲ್ಲಿ ಕೆಲ ಹೊತ್ತು ಕೂರಿಸಿದ್ದರು. ನಂತರ, ಬಿಗಿ ಭದ್ರತೆಯಲ್ಲಿ ಮನೆಗೆ ಕರೆದೊಯ್ದು ಶೋಧ ನಡೆಸಿದರು.

ಮೂರು ಗಂಟೆ ಮನೆಯಲ್ಲಿದ್ದ ಪೊಲೀಸರು, ಕೆಲ ದಾಖಲೆಗಳನ್ನು ಸಂಗ್ರಹಿಸಿದರು. ನಂತರ, ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಮಹಜರು ಮಾಡಿಕೊಂಡರು. ನಂತರ, ಬಿಗಿ ಭದ್ರತೆಯಲ್ಲೇ ಜುಬೇರ್‌ನನ್ನು ಸ್ಥಳದಿಂದ ಕರೆದೊಯ್ದರು.

‘ಆರೋಪಿ ಜುಬೈರ್ ಮೇಲಿನ ಆರೋಪಗಳಿಗೆ ಸಂಬಂಧಪಟ್ಟಂತೆ ಪುರಾವೆಗಳನ್ನು ದೆಹಲಿ ಪೊಲೀಸರು ಕಲೆಹಾಕಿದ್ದಾರೆ. ಜುಬೈರ್ ಓಡಾಡಿದ್ದ ಸ್ಥಳದಲ್ಲಿ ಮಹಜರು ಮಾಡಿಕೊಂಡು ಹೋಗಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT