ಗುರುವಾರ , ಜುಲೈ 7, 2022
23 °C

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಸೋತೆನೆಂದು ಕಾರು ಹತ್ತಿ ನಿರ್ಗಮಿಸಿದ್ದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆ ಮತ ಎಣಿಕೆಯ ಪ್ರತಿ ಹಂತವೂ ಕುತೂಹಲಕಾರಿಯಾಗಿತ್ತು. ಗೆಲುವು ಪರಸ್ಪರ ಹೊಯ್ದಾಡುತ್ತಿತ್ತು.

ಮೂರನೇ ಬಾರಿ ಕಣಕ್ಕಿಳಿದಿದ್ದ ಲಿಂಗರಾಜ ಅಂಗಡಿ ಹಾಗೂ ಮೊದಲ ಬಾರಿಗೆ ಸ್ಪರ್ಧಿಸಿದ ರಾಮು ಮೂಲಗಿ ಅವರ ನಡುವೆ ಭಾರಿ ಪೈಪೋಟಿ ಇತ್ತು.

ಒಂದು ಹಂತದಲ್ಲಿ ರಾಮು ಮೂಲಗಿ ಅವರು ಲಿಂಗರಾಜ ಅಂಗಡಿ ಅವರಿಗಿಂತ 70 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಆ ಸಂದರ್ಭದಲ್ಲಿ ಮತ ಎಣಿಕೆ ಕೇಂದ್ರದಿಂದ ಹೊರಬಂದ ಅಂಗಡಿ ಕಾರು ಹತ್ತಿ ಸ್ಥಳದಿಂದ ನಿರ್ಗಮಿಸಿದರು.

ಅಂತಿಮವಾಗಿ ಹುಬ್ಬಳ್ಳಿ ನಗರದ ಎರಡು ಮತಗಟ್ಟೆಗಳು ಲಿಂಗರಾಜ ಅಂಗಡಿ ಅವರ ಕೈಹಿಡಿದವು. ಕೇವಲ 24 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಲಿಂಗರಾಜ ಅಂಗಡಿ 1244, ರಾಮು ಮೂಲಗಿ 1220 ಮತಗಳನ್ನು ಪಡೆದರು. ಗೆಲುವು ಖಚಿತವಾದ ಮೇಲೆ ತಹಶೀಲ್ದಾರ್ ಕಚೇರಿಗೆ ಬಂದ ಅಂಗಡಿ ಗೆಲುವಿನ ನಗೆ ಬೀರಿದರು. ಸಪ್ಪೆ ಮುಖ ಹಾಕಿಕೊಂಡಿದ್ದ ಅವರ ಬೆಂಬಲಿಗರು ನಂತರ ಗೆಲುವಿನ ಕೇಕೆ ಹಾಕಿ ಸಂಭ್ರಮಿಸಿದರು.

ರೋಣ (ಗದಗ ಜಿಲ್ಲೆ): ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾ
ವಣೆಗೆ  ಅನೇಕ ಕಸಾಪ ಸದಸ್ಯರು ಮತ ಹಾಕಲು ಅಲೆದಾಡಿದರು.

ಯಾವಗಲ್ಲ ಗ್ರಾಮದ ಸದಸ್ಯರನ್ನು ಗಜೇಂದ್ರಗಡಕ್ಕೆ, ಅಲ್ಲಿನವರ ಹೆಸರನ್ನು ರೋಣ, ನರೇಗಲ್‌ಗೆ ಸೇರಿಸಲಾಗಿತ್ತು. ಮತದಾನಕ್ಕೆ ಅಲೆದಾಡಿದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು