ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಸಾಹಿತಿ ಡಿ.ಎಸ್.ನಾಗಭೂಷಣ ನಿಧನ 

ಅಕ್ಷರ ಗಾತ್ರ

ಶಿವಮೊಗ್ಗ: ಸಾಹಿತಿ ಡಿ.ಎಸ್.ನಾಗಭೂಷಣ ಆರೋಗ್ಯದ ಸಮಸ್ಯೆಯಿಂದ (70) ಗುರುವಾರ ನಿಧನರಾದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ತಿಮ್ಮಸಂದ್ರದ ನಾಗಭೂಷಣ ಅವರು ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಆಕಾಶವಾಣಿಯ ವಿವಿಧ ಹುದ್ದೆ ಗಳಲ್ಲಿ 30 ವರ್ಷ ಕಾರ್ಯನಿರ್ವಹಿಸಿದ್ದರು. ಸ್ವಯಂ ನಿವೃತ್ತಿ ಪಡೆದ ನಂತರ ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದರು.

ಸಾಹಿತ್ಯ ವಿಮರ್ಶೆ, ಸಮಾಜವಾದಿ ಚಿಂತನೆ ಅವರ ಆಸಕ್ತಿಯ ಕ್ಷೇತ್ರಗಳು.

ಗಮನ, ಅನೇಕ, ಈ ಭೂಮಿಯಿಂದ ಈ ಆಕಾಶದವರೆಗೆ, ಕುವೆಂಪು ಸಾಹಿತ್ಯ ದರ್ಶನ, ಲೋಹಿಯಾ ಸಮಾಜವಾದದ ದರ್ಶನ, ಬೇರು ಬಿಳಿಲು, ಇದು ಭಾರತ ಇದು ಭಾರತ, ಇಲ್ಲಿ ಯಾವುದೂ ಅಮುಖ್ಯವಲ್ಲ, ಕನ್ನಡ–ಕರ್ನಾಟಕದ ಕಥಾ ಸಂಕಲನಗಳು ಅವರ ಪ್ರಮುಖ ಕೃತಿಗಳು. ಅವರ ‘ಗಾಂಧಿ ಕಥನ’ ಕೃತಿ ಈಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪುರಸ್ಕೃತವಾಗಿತ್ತು. ಕೆ.ರಾಮದಾಸ್‌, ಕಡಿದಾಳು ಶಾಮಣ್ಣ ಸೇರಿದಂತೆ ಹಲವರ ಅಭಿನಂದನಾ ಗ್ರಂಥ ಹೊರತಂದಿದ್ದಾರೆ. ರಸಿಕ ರುದ್ರ ತಪಸ್ವಿ ಲೋಹಿಯಾ, ಸಮಾಜವಾದದ ಸಾಲುದೀಪಗಳು ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ.

ಅವರ ಸಂಪಾದಕತ್ವದಲ್ಲಿ ಸಮಾಜವಾದಿ ಮಾಸಿಕ ‘ಹೊಸ ಮನುಷ್ಯ’ ಪ್ರಕಟಗೊಳ್ಳುತ್ತಿತ್ತು. ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಸಮಾಜವಾದಿ ಚಿಂತನೆಯ ಹಲವು ಕಾರ್ಯಾಗಾರಗಳನ್ನು ಆಯೋಜಿಸಿದ್ದರು.

ಅವರಿಗೆ ಪತ್ನಿ, ಕವಯಿತ್ರಿ ಸವಿತಾ ನಾಗಭೂಷಣ ಇದ್ದಾರೆ. ಮೃತರ ಅಂತ್ಯಸಂಸ್ಕಾರ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ನೆರವೇರಿತು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT