ಭಾನುವಾರ, ಜುಲೈ 3, 2022
26 °C

ಗಾಜಿನ ಮನೆಯಲ್ಲಿ ಕುಳಿತ ಗುಲಾಮರಿಗೆ ಮರೆವಿನ ಕಾಯಿಲೆ ಒಳ್ಳೆಯದಲ್ಲ: ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ಪರ ವಕಾಲತು ಮಾಡಿದ ಕೂಡಲೇ ರಾಜ್ಯದ ಬಿಜೆಪಿ ನಾಯಕರು ಅವರನ್ನು ಓಲೈಸಲು ಸಾಲಲ್ಲಿ ನಿಂತಿದ್ದಾರೆ. ಬಿಜೆಪಿ ನಾಯಕರೇ, ಅಮಿತ್ ಶಾ ಅವರ ಗುಲಾಮರಾಗಬೇಡಿ, ಕನ್ನಡ ತಾಯಿಯ‌ ಸ್ವಾಭಿಮಾನಿ ಮಕ್ಕಳಾಗಿ ಎಂದಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕನ್ನಡವೂ ಸೇರಿದಂತೆ ಎಲ್ಲ ರಾಜ್ಯ ಭಾಷೆಗಳ ಮೇಲೆ ಹಿಂದಿ ಹೇರಿಕೆ ಆರಂಭಿಸಿದ್ದು ಯಾರು? ಯಾರು ಅಧಿಕಾರದಲ್ಲಿದ್ದಾಗ ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟ ಆರಂಭವಾಯ್ತು? ಗಾಜಿನ ಮನೆಯಲ್ಲಿ ಕುಳಿತ ಗುಲಾಮರಿಗೆ ಮರೆವಿನ ಕಾಯಿಲೆ ಒಳ್ಳೆಯದಲ್ಲ ಎಂದಿದೆ.

#ನಾಡದ್ರೋಹಿಕಾಂಗ್ರೆಸ್ ಎಂದು ದೂರಿದ್ದು, ಮಾನ್ಯ ಸಿದ್ದರಾಮಯ್ಯ, ಅವರೇ ಸುಳ್ಳೇ ನಿಮ್ಮ‌‌ ಮನೆ ದೇವರು ಎಂಬುದನ್ನು ಪದೇ ಪದೇ ನಿರೂಪಿಸುತ್ತಿದ್ದೀರಿ. ರಾಹುಲ್ ಗಾಂಧಿ ಅವರ ಗುಲಾಮಗಿರಿ ಮಾಡುವುದಕ್ಕಾಗಿ ಈ ಮಟ್ಟದಲ್ಲಿ ಅಸತ್ಯದ ಪರ ವಕಾಲತ್ತು ವಹಿಸಬೇಡಿ. ರಾಜ್ಯ ರಾಜ್ಯಗಳ‌ ನಡುವೆ ಭಾಷಾ ದ್ವೇಷ ಹಚ್ಚುವುದು ಸ್ವಾಭಿಮಾನವೇ? ಎಂದು ಪ್ರಶ್ನಿಸಿದೆ. 

ಇದನ್ನೂ ಓದಿ: 

ಅಮಿತ್ ಶಾ ಅವರ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಲು ವಿಫಲರಾದ #ಬುರುಡೆರಾಮಯ್ಯ ಅವರೇ, ನಿಮ್ಮ ಗುಲಾಮಿ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ. ಶಿಕ್ಷಣ ಸೇರಿದಂತೆ ಯಾವುದೇ ವಿಚಾರದಲ್ಲೂ ಹಿಂದಿ ಹೇರಿಕೆ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿರುವ ಹೇಳಿಕೆ ನಿಮ್ಮ ಕಿವಿಗಿನ್ನೂ ಬಿದ್ದಿಲ್ಲವೇ? ಎಂದು ಹೇಳಿದೆ.

ಇದನ್ನೂ ಓದಿ: 

ಸಿದ್ದರಾಮಯ್ಯ ಅವರೇ, ಹಿಂದಿ ನಟನೊಬ್ಬ ನೀಡಿದ ಹೇಳಿಕೆಯನ್ನು ಬಿಜೆಪಿ ಪಕ್ಷದ ತಲೆಗೆ ಕಟ್ಟುವ ಹುನ್ನಾರವೇಕೆ? ಭಾಷಾಭಿಮಾನ ಹುಟ್ಟಿಕೊಳ್ಳುವಲ್ಲಿ ರಾಜಕೀಯ ಲೆಕ್ಕಾಚಾರವಿದೆಯೇ? ನಿಮ್ಮ ಅಧಿನಾಯಕಿ ಮತ್ತು ಯುವರಾಜ ಕನ್ನಡ ಮಾತನಾಡುತ್ತಾರೆಯೇ? ಹೈಕಮಾಂಡ್ ಜೊತೆಗೆ ಕನ್ನಡ ಪ್ರೇಮ ಏಕೆ ತೋರಿಸುವುದಿಲ್ಲ? ಎಂದು ಕಿಡಿಕಾರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು