ಶುಕ್ರವಾರ, ಅಕ್ಟೋಬರ್ 22, 2021
29 °C

ಬ್ರಿಟಿಷರ ಬೂಟಿನ ರುಚಿ ಕಂಡಿರುವ ಬಿಜೆಪಿಗರು ಅವರಿಗಿಂತ ಕ್ರೂರಿಗಳು: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಬ್ರಿಟಿಷರ ಬೂಟಿನ ರುಚಿ ಕಂಡಿರುವ ಬಿಜೆಪಿಗರು ಬ್ರಿಟಿಷರಿಗಿಂತ ಕ್ರೂರಿಗಳಾಗಿದ್ದಾರೆ' ಎಂದು ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ಹರಿಹಾಯ್ದಿದೆ.

'ಬ್ರಿಟಿಷರು ಕೂಡ ಬಹಳ ಗೌರವದಿಂದ ನೋಡಿಕೊಳ್ಳುತ್ತಿದ್ದರು' ಎಂಬ ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಹೇಳಿಕೆಯ ವಿಡಿಯೊ ತುಣುಕನ್ನು ಹಂಚಿಕೊಂಡಿರುವ ಬಿಜೆಪಿ, ದೇಶವನ್ನು ಸುದೀರ್ಘ ಕಾಲ ದಾಸ್ಯಕ್ಕೆ ತಳ್ಳಿದ ಬ್ರಿಟಿಷರ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಡಿದ ಮಾತುಗಳಿವು ಎಂದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, 'ಬ್ರಿಟಿಷರು ಅಹಿಂಸಾ ಸತ್ಯಾಗ್ರಹಕ್ಕೆ ಮಣಿದಿದ್ದರು, ಆದರೆ ಬಿಜೆಪಿಗರು ರೈತರ ಅಹಿಂಸಾ ಪ್ರತಿಭಟನೆಯಲ್ಲಿ ಮಾರಣಹೋಮ ನಡೆಸಿದರು. ಹೊರಗಿನವರ ದೌರ್ಜನ್ಯಕ್ಕಿಂತ ಒಳಗಿನವರ ದೌರ್ಜನ್ಯವೇ ಹೆಚ್ಚು ಆಘಾತಕಾರಿ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

'ತ್ಯಾಗ, ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ಒಂದೇ ಮಾತಿನಲ್ಲಿ ಕಾಂಗ್ರೆಸ್‌ ಅಧ್ಯಕ್ಷರು ನಾಶ ಮಾಡಿದ್ದಾರೆ. ಎಷ್ಟಾದರೂ ನೀವು ನಕಲಿ ಕಾಂಗ್ರೆಸ್ಸಿಗರಲ್ಲವೇ, ಇಲ್ಲಿಯವರಿಗಿಂತ ಹೊರಗಿನವರೇ ನಿಮಗೆ ಆಪ್ತರಾಗುತ್ತಾರೆ' ಎಂದು ಬಿಜೆಪಿ ಟ್ವೀಟ್‌ನಲ್ಲಿ ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡಿತ್ತು.

ಉತ್ತರ ಪ್ರದೇಶದ ಲಖಿಂಪುರ-ಖೇರಿಯಲ್ಲಿ ವಾಹನ ಹರಿಸಿ ಪ್ರತಿಭಟನಾನಿರತ ರೈತರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಭಯ ಪಕ್ಷಗಳ ನಡುವೆ ಟ್ವೀಟ್‌ ವಾಗ್ಯುದ್ಧ ನಡೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು