ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ತಂದೆ ಸಮಾನ, ಪಕ್ಷ ತಾಯಿ ಸಮಾನ; ಯತ್ನಾಳ ವಿರುದ್ಧ ರೇಣುಕಾಚಾರ್ಯ ಗರಂ

Last Updated 5 ಜನವರಿ 2021, 12:03 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸೋಮವಾರ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದ ಘಟನೆ ಬಗ್ಗೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.‍ಪಿ.ರೇಣುಕಾಚಾರ್ಯ ಗರಂ ಆಗಿದ್ದು, ಯತ್ನಾಳ ಮತ್ತು ಕೆಲವು ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

ಯತ್ನಾಳ ಅವರು ಮುಖ್ಯಮಂತ್ರಿ ವಿರುದ್ಧ ಟೀಕಾ ಪ್ರಹಾರ ನಡೆಸುವಾಗ ಮೌನವಾಗಿ ಕುಳಿತದ್ದು ಏಕೆ ಎಂದು ಅವರು ಸುದ್ದಿಗಾರರ ಜತೆ ಮಾತನಾಡುವಾಗ ಪ್ರಶ್ನಿಸಿದರು.

ಪಕ್ಷ ಯತ್ನಾಳ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕೆಲವರು ಮುಖ್ಯಮಂತ್ರಿಯವರ ಆರೋಗ್ಯದ ಕುರಿತಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ನಿರಂತರ ನೋವು ಉಂಟು ಮಾಡುತ್ತಿರುವ ಯತ್ನಾಳ ಅವರನ್ನು ಯಡಿಯೂರಪ್ಪ ಸಹಿಸಿಕೊಳ್ಳಬಹುದು. ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಕೆಲವು ಸಚಿವರು ಕಾರಣ ಎಂದು ಅವರು ದೂರಿದರು.

ಶಾಸಕರು ಸಚಿವರ ಬಳಿ ಹೋದಾಗ ನಮ್ಮ ಬಳಿ ಏನೂ ಇಲ್ಲ, ಮುಖ್ಯಮಂತ್ರಿಯವರ ಬಳಿ ಹೋಗಿ ಎನ್ನುತ್ತಾರೆ. ಹಾಗಿದ್ದರೆ ಇವರಿಗೆ ಮತ್ತು ಮುಖ್ಯಮಂತ್ರಿಯವರಿಗೆ ಸಂಬಂಧವಿಲ್ಲವೇ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ತಂದೆ ಸಮಾನ, ಪಕ್ಷ ತಾಯಿ ಸಮಾನ ಎಂದು ಹೇಳಿದರು.

ಯಡಿಯೂರಪ್ಪ ಅವರು 150 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದು ಅವರಿಗಾಗಿ ಅಲ್ಲ, ನಮ್ಮೆಲ್ಲರಿಗಾಗಿ. ಆದ್ದರಿಂದ ಅವರ ಜತೆ ನಾವೆಲ್ಲ ಅವರ ಜತೆಗಿರಬೇಕು. ಕೆಲವರು ವಿಧಾನಸೌಧದಲ್ಲೇ ಕುಳಿತುಕೊಂಡು ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಪ್ರತಿ ಪಕ್ಷದವರಿಗೂ ಇವರೇ ಹೇಳಿಕೊಡುತ್ತಾರೆ. ಇವರ ಹೆಂಡ್ತಿ ಮಕ್ಕಳು ಚೆನ್ನಾಗಿರಬೇಕು. ಯಡಿಯೂರಪ್ಪ ಅವರ ಮನೆಗೆ ಅವರ ಮಗ ಬರಬಾರದಾ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT