ಗುರುವಾರ , ಏಪ್ರಿಲ್ 15, 2021
23 °C

ಕಾಂಗ್ರೆಸ್‌ ಒಂದು ‘ಕುಡುಕರ ಬಾರ್‌’ ಇದ್ದಂಗೆ: ಬಿಜೆಪಿ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ್ದೆನ್ನಲಾದ ಸಿ.ಡಿ ಪ್ರಕರಣ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಇದರ ನಡುವೆ ಕಾಂಗ್ರೆಸ್‌–ಬಿಜೆಪಿ ಟ್ವೀಟ್‌ ಸಮರ ಗುರುವಾರವೂ ಮುಂದುವರಿದಿದೆ.

‘ರಾಜ್ಯ ಬಿಜೆಪಿ ಸರ್ಕಾರ ಈಗ ‘ಹರಿದ ಬನಿಯನ್’ ಅತ್ತ ಎಳೆದರೆ ಇತ್ತ ತೋರುತ್ತದೆ, ಇತ್ತ ಎಳೆದರೆ ಅತ್ತ ತೋರುತ್ತದೆ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಇದಕ್ಕೆ ಬಿಜೆಪಿ ತಿರುಗೇಟು ಕೊಟ್ಟಿದೆ.

ಇಂದಿನ ಕಾಂಗ್ರೆಸ್‌ ಒಂದು ‘ಕುಡುಕರ ಬಾರ್’ ಇದ್ದಂಗೆ. ಇಲ್ಲಿ ನಡೆಯುವುದು ಸಿಡಿ ಅವ್ಯವಹಾರ, ನಾಯಕರ ನಡುವೆ ಕಚ್ಚಾಟ ಹಾಗೂ ಹೊಡೆದಾಟ ಮಾತ್ರ!’ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಇದನ್ನೂ ಓದಿ... ಬಿಜೆಪಿ ಸರ್ಕಾರ ಈಗ ಹರಿದ ಬಿನಿಯನ್‌: ಕಾಂಗ್ರೆಸ್‌ ವ್ಯಂಗ್ಯ

‘ದಲಿತ ಶಾಸಕ ಅಖಂಡ ಅವರು ಎಷ್ಟು ನೆರವು ಬೇಡಿದರೂ ಕಾಂಗ್ರೆಸ್‌ ಪಕ್ಷ ಅವರ ನೆರವಿಗೆ ಧಾವಿಸಲಿಲ್ಲ. ಸಿಡಿ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಕೆಪಿಸಿಸಿ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಹಣಕಾಸಿನ ನೆರವು, ಕಾನೂನು ಸಲಹೆ, ವಾಹನದ ವ್ಯವಸ್ಥೆ ಎಲ್ಲವೂ ಕೆಪಿಸಿಸಿ ಕಚೇರಿಯಿಂದಲೇ ಆಗುತ್ತಿರುವುದರ ಹಿಂದಿನ ಉದ್ದೇಶವೇನು?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ... ಈಶ್ವರಪ್ಪ ರಾಜ್ಯಪಾಲರ ಅಂಗಳಕ್ಕೆ ಹೋಗಿದ್ದು ಸರಿಯಲ್ಲ: ಬಸವರಾಜ ಬೊಮ್ಮಾಯಿ

 

ಇದನ್ನೂ ಓದಿ... ಈಶ್ವರಪ್ಪ ಲೆಟರ್‌ ಬಾಂಬ್‌: ಯಡಿಯೂರಪ್ಪ ವಿರುದ್ಧ ರಾಜ್ಯಪಾಲ, ವರಿಷ್ಠರಿಗೆ ದೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು