ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಅಬ್ಬರಿಸಿದ ಮಳೆ: ಮನೆಗಳಿಗೆ ನುಗ್ಗಿದ ನೀರು, ಬೆಳೆ ಹಾನಿ

Last Updated 6 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆಯವರೆಗೂ ಧಾರಾಕಾರ ಮಳೆ ಯಾಗಿದ್ದು, ಬಿತ್ತನೆ ಚಟುವಟಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹಲವೆಡೆ ಅಬ್ಬರಿಸಿದ ‘ರೋಹಿಣಿ’ ಮಳೆಗೆ ಕೆರೆಕಟ್ಟೆಗಳು ಕೋಡಿ ಬಿದ್ದಿವೆ. ಕೆಲ ಭಾಗಗಳಲ್ಲಿ ಆಲಿಕಲ್ಲು ಸುರಿದ ಪರಿಣಾಮ ಶೀಟ್‌ ಮನೆಗಳಿಗೆ ಹಾನಿಯಾಗಿದೆ.

ಹಿರಿಯೂರು ತಾಲ್ಲೂಕಿನಲ್ಲಿ ಒಂಬತ್ತು ವರ್ಷಗಳ ನಂತರ ಭಾರಿ ಮಳೆ ಸುರಿದಿದ್ದು, ಆಶ್ರಯ ಕಾಲೊನಿ, ಡಿ.ಸಿ ಕಾಲೊನಿಯ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಸಿ.ಎಂ ಬಡಾವಣೆಯಲ್ಲಿನ ಎರಡು ಅಂಗನವಾಡಿ ಕೇಂದ್ರಗಳಿಗೆ ನೀರು ನುಗ್ಗಿದ್ದು, ದವಸ– ಧಾನ್ಯ ನೀರು ಪಾಲಾಗಿವೆ. ಕೃಷಿ, ತೋಟಗಾರಿಕೆ ಭೂಮಿಗೂ ನೀರು ನುಗ್ಗಿದ್ದು, ದಾಳಿಂಬೆ, ಬಾಳೆ ಬೆಳೆಗೆ ಹಾನಿಯಾಗಿದೆ.

ಮಂಡ್ಯ ಹೊರವಲಯದ ಹೊಳಲು ರಸ್ತೆ ಸಮೀಪದ ಕಾಲುವೆ ಉಕ್ಕಿ ಹರಿದು ಗದ್ದೆಗೆ ನೀರು ನುಗ್ಗಿ 50 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಕಾಯಿಕಟ್ಟುವ ಹಂತದಲ್ಲಿದ್ದ ಭತ್ತದ ಪೈರು ಕೊಚ್ಚಿ ಹೋಯಿತು. ಮೈಸೂರಿನ ಕೆ.ಆರ್‌.ನಗರ ಪಟ್ಟಣದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT