ಸೋಮವಾರ, ಸೆಪ್ಟೆಂಬರ್ 26, 2022
22 °C

ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ನಿದ್ದೆ ಈ ಮಾತು ಅಶೋಕ್‌ಗೆ ಹೇಳಿರಬೇಕು: ಕಾಂಗ್ರೆಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ನಿದ್ದೆ’ ಎಂಬ ಗಾದೆ ಮಾತನ್ನು ಕಂದಾಯ ಸಚಿವ ಆರ್‌.ಅಶೋಕ್‌ ಅವರಿಗಾಗಿಯೇ ಹೇಳಿರಬೇಕು ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಪ್ರವಾಹ ಪರಿಶೀಲನೆಯ ವಿಡಿಯೊ ಕಾನ್ಫರೆನ್ಸ್‌ ಸಂದರ್ಭದಲ್ಲಿ ಸಚಿವ ಅಶೋಕ್‌ ಅವರು ನಿದ್ದೆಗೆ ಜಾರಿದ್ದರು ಎಂದು ಆರೋಪಿಸಲಾಗಿತ್ತು. ಈ ಫೋಟೊ‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌, ಸಚಿವರ ವಿರುದ್ಧ ವಾಗ್ದಾಳಿ ನಡೆಸಿದೆ. 

‘ಮುಳುಗುವುದರಲ್ಲಿ ಹಲವು ವಿಧಗಳಿವೆ. ರಾಜ್ಯದ ಜನ ಮಳೆ ನೀರಿನಲ್ಲಿ ಮುಳುಗಿದ್ದಾರೆ. ಇತ್ತ ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ’ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ. 

‘ಹಲಾಲ್ ಕಟ್’ ಎಂದರೆ ಥಟ್ಟನೇ ಎಚ್ಚರವಾಗುವ ಸಚಿವರು ಪ್ರವಾಹ ಪರಿಶೀಲನೆ ವೇಳೆ ನಿದ್ದೆಗೆ ಜಾರಿದ್ದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಕಿಡಿಕಾರಿದೆ. 

‘ಬಿಜೆಪಿ ಪ್ರಣಾಳಿಕೆಯ ಭರವಸೆಗಳು ಆಕರ್ಷಕ, ಮನಮೋಹಕ. ಆಡಳಿತ ಮಾತ್ರ ಜನತೆಗೆ ಯಾತನಾದಾಯಕ, ಭ್ರಷ್ಟಾಚಾರವೇ ಕಾಯಕ! ಬೆಂಗಳೂರನ್ನು ವಿಶ್ವದರ್ಜೆಯ ನಗರ ಮಾಡುವೆವು ಎಂದ ಬಿಜೆಪಿ ಈಗ ರಸ್ತೆಗುಂಡಿಗಳ ನಗರ, ಮುಳುಗುವ ನಗರವನ್ನಾಗಿ ಮಾಡಿದೆ. ಐಟಿ ಕಂಪೆನಿಗಳು ಗುಳೆ ಹೊರಟರೂ ಕೊಟ್ಟ ಭರವಸೆ ಬಿಜೆಪಿಗರಿಗೆ ನೆನಪಾಗಲಿಲ್ಲವೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು