ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯಕರ್ತೆಯರು ರಸ್ತೆಯಲ್ಲೇ ಅಡುಗೆ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ರಾಮಲಿಂಗಾರೆಡ್ಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಬಳಿಕ ರಾಜಭವನ ಮುತ್ತಿಗೆಗೆ ಮುಂದಾದರು.

ಈ ವೇಳೆ ತಡೆದ ಪೊಲೀಸರು, ರಾಮಲಿಂಗಾರೆಡ್ಡಿ, ಶಾಸಕರಾದ ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಷದ್, ಪುಷ್ಪಾ ಅಮರನಾಥ್ ಸೇರಿದಂತೆ ನೂರಾರು ಕಾರ್ಯಕರ್ತರನ್ನು ರಾಜಭವನಕ್ಕೆ ತೆರಳುವ ಮಾರ್ಗ ಮಧ್ಯೆ ರೇಸ್ ಕೋರ್ಸ್ ರಸ್ತೆಯ ಬಳಿ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಬಂಧಿಸಿದರು.

ಅದಕ್ಕೂ ಮೊದಲು ಮಾತನಾಡಿದ ಪುಷ್ಪಾ ಅಮರನಾಥ್, ‘ದೇಶವು ಇಂದು ಕಾಣುತ್ತಿರುವುದು ಅಚ್ಚೇ ದಿನ್ ಅಲ್ಲ, ಬೂರೇ ದಿನ್. ಮಹಿಳೆಯರು ಹೆಣ್ಣು ಮಕ್ಕಳನ್ನು ಬಿಜೆಪಿ ಸರ್ಕಾರ ರಕ್ಷಣೆ ಮಾಡುತ್ತಿಲ್ಲ. ಅಡುಗೆ ಅನಿಲ ಬೆಲೆ ಇಳಿಸಿಲ್ಲ, ಇಂಥ ಅಚ್ಚೇ ದಿನ್ ನಮಗೆ ಬೇಕಾಗಿಲ್ಲ. ಈ ಹೋರಾಟವನ್ನು ಪಂಚಾಯಿತಿ ಮಟ್ಟದವರೆಗೂ ಕೊಂಡೊಯ್ಯುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಲ್ಲಿ ಆರಂಭವಾದ ಹೋರಾಟ ಹಳ್ಳಿ ಹಳ್ಳಿ ತಲುಪಲಿದೆ. ಬೆಲೆ ಏರಿಕೆಯಿಂದ ಜನ ಸಾಯುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಅವರೇ ಮಧ್ಯಪ್ರವೇಶಿಸಬೇಕು. ಮಹಿಳಾಪರ ಹಾಗೂ ಜನಪರ ದನಿ ಎತ್ತಬೇಕು’ ಎಂದು ಮನವಿ ಮಾಡಿದರು.

ಕೃಷ್ಣ ಬೈರೇಗೌಡ ಮಾತನಾಡಿ, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಜಾಸ್ತಿ ಆಗಿದ್ದರಿಂದ ಇಲ್ಲಿಯೂ ದರ ಏರಿಕೆ ಆಗುತ್ತಿದೆ ಎಂದು ಹೇಳುತ್ತಾರೆ. ಶ್ರೀಲಂಕಾದಲ್ಲಿ ಪೆಟ್ರೋಲ್ ದರ ಲೀಟರ್ಗೆ ₹ 75 , ನಮ್ಮಲ್ಲಿ ₹ 106 ಇದೆ. ರಾವಣ ಹಾಗೂ ರಾಮನ ರಾಜ್ಯದಲ್ಲಿ ದರ ಏರಿಕೆ, ಇಳಿಕೆ ಆಗಿದೆ’ ಎಂದರು.

ರಿಜ್ವಾನ್ ಅರ್ಷದ್ ಮಾತನಾಡಿ, ‘ನರೇಂದ್ರ ಮೋದಿ ಅವರು ವ್ಯವಸ್ಥಿತವಾಗಿ ಹಾಗೂ ಹಾಗೂ ಅಂಬಾನಿಗೆ ದೇಶದ ಆಸ್ತಿಯನ್ನು ಹಂಚಿದ್ದಾರೆ. ಅಂಬಾನಿ, ಅದಾನಿ ಹಿಡಿತದಲ್ಲಿರುವ ಸರ್ಕಾರದ ವಿರುದ್ಧ ನಾವಿಲ್ಲಿ ಸೇರಿದ್ದೇವೆ. ಮೋದಿ ಬಹಳ ಶಕ್ತಿಶಾಲಿ ಪ್ರಧಾನಿ ಎಂಬ ಭ್ರಮೆ ಇತ್ತು. ಆದರೆ, ಅವರು ಅಂಬಾನಿ, ಅದಾನಿಯ ಮ್ಯಾನೇಜರ್’ ಎಂದು ವ್ಯಂಗ್ಯವಾಡಿದರು.

‘ನೇಪಾಳ, ಭೂತಾನ್ ದೇಶದವರು ನಮ್ಮಿಂದಲೇ ಪೆಟ್ರೋಲ್ ಕೊಂಡುಕೊಳ್ಳುತ್ತಾರೆ. ನಮ್ಮಿಂದ ಪಡೆದ ಅವರು ಲೀಟರ್ಗೆ ₹ 80ಕ್ಕೆ ಮಾರುತ್ತಾರೆ. ಪಾಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹ 65 ಇದೆ. ಇದು ದೇಶದ್ರೋಹದ ಸರ್ಕಾರ. ಆದರೂ ಜನ ಮರಳೋ ಜಾತ್ರೆ ಮರಳೋ ಎಂಬಂತೆ ದೇಶದ ಜನತೆ ಬಿಜೆಪಿಗೆ ಮತ ಹಾಕುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.