ಭಾನುವಾರ, ಜುಲೈ 3, 2022
21 °C
ಮಂಗಳವಾರ ಸಂಜೆಯಿಂದಲೇ ಬಸ್‌ ವಿರಳ

ಮುಷ್ಕರ: ಬಸ್‌ ಓಡಾಟಕ್ಕೆ ಸಂಚಕಾರ, ಸರ್ಕಾರದ ಎಚ್ಚರಿಕೆಗೆ ಬಗ್ಗದ ಸಾರಿಗೆ ನೌಕರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಆಗಲೇಬೇಕು ಎಂದು ಸಾರಿಗೆ ನೌಕರರ ಕೂಟ ಪಟ್ಟು ಹಿಡಿದಿದ್ದರೆ, ಸದ್ಯಕ್ಕೆ ಈ ಬೇಡಿಕೆ ಈಡೇರಿಸಲು ಸಾಧ್ಯವೇ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಜಟಾಪಟಿಯಿಂದಾಗಿ ಓಡಾಟಕ್ಕೆ ಬಸ್ಸನ್ನೇ ನೆಚ್ಚಿಕೊಂಡಿರುವ ನಾಗರಿಕರು ಪರದಾಡಬೇಕಾದ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.

‘ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಲಾಗಿದೆ. ಶೇ 8ರಷ್ಟು ವೇತನ ಹೆಚ್ಚಿಸಲು ನಿರ್ಧರಿಸಲಾಗಿದ್ದು, 6ನೇ ವೇತನ ಆಯೋಗದ ಶಿಫಾರಸು ಜಾರಿ ಸದ್ಯಕ್ಕೆ ಸಾಧ್ಯವೇ ಇಲ್ಲ. ಮತ್ತೆ ಸಂಧಾನದ ಪ್ರಶ್ನೆಯೇ ಇಲ್ಲ. ಮುಷ್ಕರ ನಡೆಸಿದರೆ ಎಸ್ಮಾ ಕಾಯ್ದೆ ಹೇರಲು ಹಿಂಜರಿಯುವುದಿಲ್ಲ’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

‘ಎಂಟು ಬೇಡಿಕೆಗಳ ಈಡೇರಿಕೆಯಿಂದ ಯಾವುದೇ ಉಪಯೋಗವಾಗಿಲ್ಲ. ಪ್ರಮುಖ ಬೇಡಿಕೆಯನ್ನೇ ಕೈಬಿಟ್ಟಿರುವ ಕಾರಣ ಮುಷ್ಕರಕ್ಕೆ ಕರೆ ನೀಡಲಾಗಿದೆ. ಎಸ್ಮಾ ಕಾಯ್ದೆಯಾದರೂ ಜಾರಿಯಾಗಲಿ, ಸರ್ಕಾರ ನಮ್ಮನ್ನು ಜೈಲಿಗೆ ತಳ್ಳಿದರೂ ಹೆದರುವುದಿಲ್ಲ. ಈ ಬೇಡಿಕೆ ಈಡೇರದೇ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ನೌಕರರ ಕೂಟ ತಿರುಗೇಟು ನೀಡಿದೆ.

‌ಈ ಬೆಳವಣಿಗೆಯಿಂದಾಗಿಸರ್ಕಾರ ಮತ್ತು ನೌಕರರ ಮಧ್ಯೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಅಧಿಕೃತವಾಗಿ ಮುಷ್ಕರ ಬುಧವಾರ ನಡೆಯಬೇಕಿದ್ದರೂ ಬೆಂಗಳೂರು ಸೇರಿ ರಾಜ್ಯದಲ್ಲೆಡೆ ಮಂಗಳವಾರ ಮಧ್ಯಾಹ್ನವೇ ಮುಷ್ಕರದ ಕಾವು ಏರತೊಡಗಿತ್ತು. ಇದರಿಂದಾಗಿ ಬಸ್‌ ಸಂಚಾರ ವಿರಳವಾಯಿತು.

ರಾತ್ರಿ ತಂಗುವ ಕರ್ತವ್ಯಕ್ಕೆ ಹಾಜರಾಗಬೇಕಾದ ಸಿಬ್ಬಂದಿ ಡಿಪೊಗಳಿಗೆ ಬರಲೇ ಇಲ್ಲ. ಬಸ್‌ಗಳು ಡಿಪೊಗಳಲ್ಲೇ ಉಳಿದವು. ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು. ನಾಲ್ಕೂ ನಿಗಮಗಳಿಂದ 20 ಸಾವಿರ ಬಸ್‌ಗಳಿದ್ದು, ಮಂಗಳವಾರದ ಬೆಳವಣಿಗೆ ಗಮನಿಸಿದರೆ ಬುಧವಾರ ಬಸ್‌ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಬೆಂಗಳೂರು ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಬಸ್‌ಗಳನ್ನೇ ನಂಬಿಕೊಂಡಿದ್ದಾರೆ. ಸರ್ಕಾರಿ ಮತ್ತು ಖಾಸಗಿ ನೌಕರರು, ಸಾಮಾನ್ಯ ಪ್ರಯಾಣಿಕರು ಬುಧವಾರ ಬಸ್‌ಗಳಿಗಾಗಿ ಪರದಾಡಬೇಕಾದ ಸ್ಥಿತಿ ಇದೆ. ಬೆಂಗಳೂರಿನಲ್ಲಿ 30 ಲಕ್ಷ ಪ್ರಯಾಣಿಕರು ಬಿಎಂಟಿಸಿ ನೆಚ್ಚಿಕೊಂಡಿದ್ದರೆ, ಕೆಎಸ್‌ಆರ್‌ಟಿಸಿ, ಎನ್‌ಇಕೆಆರ್‌ಟಿಸಿ, ಎನ್‌ಡಬ್ಲ್ಯೂಆರ್‌ಟಿಸಿ ಬಸ್‌ಗಳು ಸೇರಿ 70 ಲಕ್ಷದಿಂದ 80 ಲಕ್ಷ ಪ್ರಯಾಣಿಕರು ಬುಧವಾರದಿಂದ ತೊಂದರೆ ಅನುಭವಿಸಬೇಕಾಗುತ್ತದೆ.

ಮುಷ್ಕರ ನಡೆಸಿದರೆ ಎಸ್ಮಾ–ಸಿ.ಎಸ್‌.: ‘ಸಾರಿಗೆ ನೌಕರರು ಮುಷ್ಕರ ಕೈಬಿಡಬೇಕು. ಮುಷ್ಕರ ನಡೆಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ, ಪೊಲೀಸ್‌ ಕಾಯ್ದೆ, ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸ್ಮಾ) ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಖಚಿತ’ ಎಂದು ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಮ್ಮುಖದಲ್ಲಿ  ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಂಗಳವಾರ ನಡೆದ ಸಭೆಯ ಬಳಿಕ ಮಾತನಾಡಿದ ಪಿ. ರವಿಕುಮಾರ್‌, ‘ಸಾರಿಗೆ ನೌಕರರ ವೇತನವನ್ನು ಶೇ 8ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಸದ್ಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಹೀಗಾಗಿ, ವೇತನ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸೋಮವಾರವೇ (ಏ. 5) ಪತ್ರ ಬರೆಯಲಾಗಿದೆ’ ಎಂದರು.

‘ಸಾರಿಗೆ ನಿಗಮಗಳಿಗೆ ನಿತ್ಯ ₹ 4 ಕೋಟಿ ನಷ್ಟವಾಗುತ್ತಿದ್ದರೂ ನೌಕರರ ವೇತನವನ್ನು ಸರ್ಕಾರ ಕಡಿತ ಮಾಡಿಲ್ಲ. ಕಳೆದ ವರ್ಷ ಆದಾಯ ಇಲ್ಲದಿದ್ದರೂ ಸಾರಿಗೆ ನೌಕರರ ಸಂಬಳಕ್ಕೆ ₹ 2,100 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.

‘ಪ್ರತಿದಿನ 45 ಲಕ್ಷ ಜನರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಕೋವಿಡ್‌ ಕಾರಣದಿಂದ ಆ ಸಂಖ್ಯೆ 20 ಲಕ್ಷಕ್ಕೆ ಇಳಿದಿದೆ. ಈ ಸಂಖ್ಯೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ. ಸಾರಿಗೆ ಬಸ್ಸುಗಳು ಸಾರ್ವಜನಿಕ ಆಸ್ತಿ. ಮುಷ್ಕರ ನಿರತರು ಬಸ್ಸುಗಳಿಗೆ ಹಾನಿ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ಮುಷ್ಕರ ನಡೆಸಿದರೆ ಎಸ್ಮಾ: ಸಿ.ಎಸ್‌.: ‘ಸಾರಿಗೆ ನೌಕರರು ಮುಷ್ಕರ ಕೈಬಿಡಬೇಕು. ಮುಷ್ಕರ ನಡೆಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ, ಪೊಲೀಸ್‌ ಕಾಯ್ದೆ, ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸ್ಮಾ) ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಖಚಿತ’ ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಮ್ಮುಖದಲ್ಲಿ  ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಂಗಳವಾರ ನಡೆದ ಸಭೆಯ ಬಳಿಕ ಮಾತನಾಡಿದ ಪಿ. ರವಿಕುಮಾರ್‌, ‘ಸಾರಿಗೆ ನೌಕರರ ವೇತನವನ್ನು ಶೇ 8ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಸದ್ಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಹೀಗಾಗಿ, ವೇತನ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸೋಮವಾರವೇ (ಏ. 5) ಪತ್ರ ಬರೆಯಲಾಗಿದೆ’ ಎಂದರು.

‘ಸಾರಿಗೆ ನಿಗಮಗಳಿಗೆ ನಿತ್ಯ ₹ 4 ಕೋಟಿ ನಷ್ಟವಾಗುತ್ತಿದ್ದರೂ ನೌಕರರ ವೇತನವನ್ನು ಸರ್ಕಾರ ಕಡಿತ ಮಾಡಿಲ್ಲ. ಕಳೆದ ವರ್ಷ ಆದಾಯ ಇಲ್ಲದಿದ್ದರೂ ಸಾರಿಗೆ ನೌಕರರ ಸಂಬಳಕ್ಕೆ ₹ 2,100 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.

‘ಪ್ರತಿದಿನ 45 ಲಕ್ಷ ಜನರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಕೋವಿಡ್‌ ಕಾರಣದಿಂದ ಆ ಸಂಖ್ಯೆ 20 ಲಕ್ಷಕ್ಕೆ ಇಳಿದಿದೆ. ಈ ಸಂಖ್ಯೆ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ. ಸಾರಿಗೆ ಬಸ್ಸುಗಳು ಸಾರ್ವಜನಿಕ ಆಸ್ತಿ. ಮುಷ್ಕರ ನಿರತರು ಬಸ್ಸುಗಳಿಗೆ ಹಾನಿ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ಸರ್ಕಾರದ ಸಿದ್ಧತೆಗಳೇನು?: ಬೇಡಿಕೆ ಈಡೇರಿಕೆಯ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ, ಪ್ರಯಾಣಿಕರಿಗೆ ಆಗಲಿರುವ ತೊಂದರೆ ತಪ್ಪಿಸಲು ಬೇಕಿರುವ ಕ್ರಮಗಳತ್ತ ಹೆಚ್ಚು ಗಮನ ಹರಿಸಿದೆ. ಮುಷ್ಕರದ ಸಂದರ್ಭದಲ್ಲಿ ಅನಗತ್ಯ ರಜೆಗೆ ಅವಕಾಶ ಇಲ್ಲ. ಕರ್ತವ್ಯಕ್ಕೆ ಹಾಜರಾಗದಿದ್ದರೆ ವೇತನ ಕಡಿತ ಮಾಡಲು ನಾಲ್ಕೂ ನಿಗಮಗಳು ನಿರ್ಧರಿಸಿವೆ.

ಬೆಂಗಳೂರಿನಲ್ಲೇ ಮೂರು ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನು ಓಡಿಸಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಬೇರೆ ಜಿಲ್ಲೆಗಳಲ್ಲೂ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್‌ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಸಾರಿಗೆ ಇಲಾಖೆ ಅನುಮತಿ ನೀಡಿದೆ. ಮುಷ್ಕರ ಇದೆ ಎಂಬ ಕಾರಣಕ್ಕೆ ಪ್ರಯಾಣ ದರ ಹೆಚ್ಚಳ ಮಾಡಬಾರದು ಎಂಬ ಎಚ್ಚರಿಕೆಯನ್ನೂ ನೀಡಿದೆ.

ಖಾಸಗಿ ಬಸ್‌ಗಳು ಸರ್ಕಾರಿ ಬಸ್‌ ನಿಲ್ದಾಣಗಳಿಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶವನ್ನೂ ನೀಡಲಾಗಿದೆ. ಮುಷ್ಕರಕ್ಕೆ ಹೆದರದೆ ಕರ್ತವ್ಯಕ್ಕೆ ಬರುವ ಸಿಬ್ಬಂದಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ. ಹೆಚ್ಚುವರಿಯಾಗಿ ರೈಲುಗಳ ಸೇವೆ ಮತ್ತು ಬೆಂಗಳೂರಿನಲ್ಲಿ ಮೆಟ್ರೊ ರೈಲು ಸೇವೆಯನ್ನೂ ಹೆಚ್ಚಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.

ನೌಕರರ ನಿಲುವುಗಳೇನು?: ಯಾವುದೇ ಕಾರಣಕ್ಕೂ ಮುಷ್ಕರದ ನಿರ್ಧಾರ ಬದಲಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ, ಮೆರವಣಿಗೆ, ಧರಣಿ ನಡೆಸದೇ  ಕರ್ತವ್ಯದಿಂದ ದೂರ ಇರಲು ನೌಕರರಿಗೆ ಕರೆ ನೀಡಿದೆ.

‘ಆರನೇ ವೇತನ ಆಯೋಗದ ಶಿಫಾರಸುಗಳು ಸಾರಿಗೆ ನೌಕರರಿಗೂ ಅನ್ವಯಿಸುವವರೆಗೂ ಈ ಹೋರಾಟ ಕೈಬಿಡುವುದಿಲ್ಲ.
ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಸರ್ಕಾರವೇ ಹೊಣೆ’ ಎಂದು ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಈ ನಡುವೆ ನೌಕರರ ಕೂಟ ನೀಡಿರುವ ಬಂದ್ ಕರೆಗೆ ಎಚ್.ವಿ. ಅನಂತಸುಬ್ಬರಾವ್ ನೇತೃತ್ವದ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಮತ್ತು ಕರಾರಸಾ ನಿಗಮಗಳ ನೌಕರರ ಫೆಡರೇಶನ್ (ಸಿಐಟಿಯು) ನೈತಿಕ ಬೆಂಬಲ ಸೂಚಿಸಿವೆ.

‘ಶೇ 8ರಷ್ಟು ವೇತನ ಹೆಚ್ಚಳ ಸರ್ಕಾರದ ಏಕಪಕ್ಷೀಯ ನಿರ್ಧಾರ. ಹೋರಾಟ ಮುರಿಯಲು ದಾರಿಗಳನ್ನು ಹುಡುಕುತ್ತಿರುವುದು ದುರದೃಷ್ಟಕರ. ವೇತನ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಬೇಕುಲ’ ಎಂದು ಫೆಡರೇಷನ್‌ ಪ್ರತಿಪಾದಿಸಿದೆ.

‘6ನೇ ವೇತನ ಆಯೋಗದ ಶಿಫಾರಸು ಅನ್ವಯಗೊಳಿಸುವ ಬೇಡಿಕೆ ಮತ್ತು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಗಳು ಹುಟ್ಟಿದ್ದೇ ಸರ್ಕಾರ ಕಡೆಯಿಂದ. ಡಿಸೆಂಬರ್‌ನಲ್ಲಿ ನಡೆದ ಸಂಧಾನ ಸಭೆಯಲ್ಲೇ ಸ್ಪಷ್ಟವಾಗಿ ಹೇಳಿದ್ದರೆ, ಈಗ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಖಾಸಗಿ ಬಸ್‌ಗಳನ್ನು ನಿಗಮದ ಬಸ್‌ ನಿಲ್ದಾಣಗಳಿಗೆ ಬರಲು ಅವಕಾಶ ನೀಡದೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು’ ಎಂದು ಕರಾರಸಾ ನಿಗಮಗಳ ನೌಕರರ ಫೆಡರೇಶನ್ (ಸಿಐಟಿಯು)  ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಒತ್ತಾಯಿಸಿದರು.

ನೌಕರರ ನಿಲುವುಗಳೇನು?

*
ನಮ್ಮ ಮಾತಿಗೆ ಬೆಲೆ ಕೊಟ್ಟು ಮುಷ್ಕರ ವಾಪಸ್ ಪಡೆಯುತ್ತಾರೆಯೇ ಕಾದು ನೋಡುತ್ತೇವೆ. ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ದಾರಿ ಮಾಡಿಕೊಡಬೇಡಿ.
-ಬಿ.ಎಸ್‌. ಯಡಿಯೂರಪ್ಪ, ಪಮುಖ್ಯಮಂತ್ರಿ

*
ಕೋಡಿಹಳ್ಳಿ ಚಂದ್ರಶೇಖರ್ ಅವರು ಅನವಶ್ಯಕವಾಗಿ ಸರ್ಕಾರ ಮತ್ತು ನೌಕರರ ಮಧ್ಯೆ ಗೊಂದಲ ಸೃಷ್ಟಿಸುವುದಕ್ಕೆ ಮುಂದಾಗಿದ್ದಾರೆ.
–ಲಕ್ಷ್ಮಣ ಸವದಿ, ಸಾರಿಗೆ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು