ಸೋಮವಾರ, ಸೆಪ್ಟೆಂಬರ್ 27, 2021
25 °C

ಬಿಎಸ್‌ವೈಗೆ ಐಟಿ, ಇಡಿ ಬೆದರಿಕೆಯೊಡ್ಡಿ ರಾಜೀನಾಮೆ ಕೊಡಿಸಲಾಗಿದೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಐಟಿ, ಇಡಿ, ಸಿಬಿಐ ಸಂಸ್ಥೆಗಳಿಂದ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿ ಹೈಕಮಾಂಡ್‌ ರಾಜೀನಾಮೆ ಕೊಡಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದೇ ವಿಚಾರವಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಹೈಕಮಾಂಡ್‌, ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರನ್ನು ಜೈಲಿಗೆ ಕಳಿಸುತ್ತೇವೆ ಎಂದೂ ಸಹ ಬೆದರಿಸಿದೆ. ಕಣ್ಣೀರಿಟ್ಟ ಯಡಿಯೂರಪ್ಪ ಅವರೂ ಸಹ ರಾಜ್ಯದಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡುವ ಬೆದರಿಕೆಯೊಡ್ಡಿ ಹೈಕಮಾಂಡ್‌ ಅನ್ನು ಮಣಿಸಿದ್ದಾರೆ’ ಎಂದು ಹೇಳಲಾಗಿದೆ.

ಮತ್ತೊಂದು ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ಇಂದಿರಾ ಕ್ಯಾಂಟೀನ್‌ಗೆ ಅನ್ನಪೂರ್ಣೇಶ್ವರಿ ಹೆಸರಿಟ್ಟರೆ ತಪ್ಪೇನು ಎಂದು ಕೇಳಿದ ಸಚಿವ ಸುಧಾಕರ್‌ ಅವರೇ, ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವಾಗ ತಾವು ಕಾಂಗ್ರೆಸ್‌ನಲ್ಲಿಯೇ ಇದ್ದಿರಿ, ಆಗ ತಾವೇಕೆ ಈ ಪ್ರಶ್ನೆ ಕೇಳಲಿಲ್ಲ? ಗೋಸುಂಬೆಗಳು ವೇಗವಾಗಿ ಬಣ್ಣ ಬದಲಿಸುತ್ತವೆ, ತಾವು ಅದಕ್ಕಿಂತಲೂ ಅತಿ ವೇಗವಾಗಿ ಬಣ್ಣ ಬದಲಿಸುತ್ತೀರಿ ಅಲ್ಲವೇ ಸುಧಾಕರ್?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ... ‘ಎ’ ಗ್ರೇಡ್‌ನಿಂದ ‘ಬಿ’ ಗ್ರೇಡ್‌ಗೆ ಹಿಂಬಡ್ತಿ ನೀಡಿದಂತಾಗಿದೆ: ಎಂಟಿಬಿ ನಾಗರಾಜ್‌

ಇದನ್ನೂ ಓದಿ... ‘ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ತಪ್ಪೇನಿಲ್ಲ’; ಡಾ.ಕೆ.ಸುಧಾಕರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು