ಶನಿವಾರ, ಏಪ್ರಿಲ್ 1, 2023
28 °C

ಸಂಸದ ಜಿಗಜಿಣಗಿ ಮಾಜಿ ಕಾರು ಚಾಲಕನ ಬರ್ಬರ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಅವರಿಗೆ ಮೂರು ವರ್ಷಗಳ ಹಿಂದೆ ಕಾರು ಚಾಲಕನಾಗಿದ್ದ ಮಲ್ಲಿಕಾರ್ಜುನ ದೊಡಮನಿ (43) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ಇಲ್ಲಿನ ಅಲಕುಂಟೆ ‌ನಗರದಲ್ಲಿ ಬುಧವಾರ ತಡ ರಾತ್ರಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ  ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಸಂಸದ ರಮೇಶ ಜಿಗಜಿಣಗಿ ಅವರ ಕಾರು ಚಾಲಕನಾಗಿ ಕೆಲಸ ಮಾಡಿದ್ದ ದೊಡಮನಿ,  ಕಳೆದ ಮೂರು ವರ್ಷದ ಹಿಂದೆ  ಕೆಲಸ ಬಿಟ್ಟು, ಅಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ಹಣಕಾಸಿನ‌ ವ್ಯವಹಾರವೇ ಮಲ್ಲಿಕಾರ್ಜುನ ಕೊಲೆಗೆ ಕಾರಣ ಎನ್ನುವ ಸಂಶಯ ವ್ಯಕ್ತವಾಗಿದೆ. ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗದೇ ಅಲಾದಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‌ನಗರದ ಬಾಡರ ಓಣಿಯ ನಿವಾಸಿಯಾಗಿದ್ದ ದೊಡಮನಿ ನಿನ್ನೆ ರಾತ್ರಿ  ಸಹೋದರಿಯನ್ನು ಅವರ ಮನೆಗೆ ಬಿಟ್ಟು, ಮರಳಿ ಬರುವಾಗ ಕೊಲೆಯಾಗಿದೆ.
ಸ್ಥಳಕ್ಕೆ ‌ಎಎಸ್ಪಿ ಶಂಕರ ಮಾರಿಹಾಳ, ಆದರ್ಶನಗರ ಪಿಎಸೈ ಯತೀಶ್, ಶ್ವಾನದಳದೊಂದಿಗೆ ಭೇಟಿ ಪರಿಶೀಲನೆ ನಡೆಸಿದರು. ಆದರ್ಶ ನಗರ ಪೊಲೀಸ್ ಠಾಣಾ‌ ವ್ಯಾಪ್ತಿ ಘಟನೆ ನಡೆದಿದೆ. ಸ್ಥಳಗಳಲ್ಲಿ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು