ಶನಿವಾರ, ಸೆಪ್ಟೆಂಬರ್ 25, 2021
29 °C
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್

ಸಿದ್ದರಾಮಯ್ಯ ಕೈಯಲ್ಲಿ ಕಾಂಗ್ರೆಸ್‌: ನಳಿನ್‌ ಕುಮಾರ್ ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ‘ಕಾಂಗ್ರೆಸ್‌ ಇಂದು ಸಿದ್ದರಾಮಯ್ಯ ಅವರ ಕೈಯಲ್ಲಿದೆ. ಡಿ.ಕೆ. ಶಿವಕುಮಾರ್ ಕೈಯಲ್ಲಿ ಬೆತ್ತ ಮಾತ್ರ ಇದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಲೇವಡಿ ಮಾಡಿದರು. 

ಬಿಜೆಪಿಯ ಮಂಗಳೂರು ಮಂಡಲದ ಮಂಜನಾಡಿ ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಬೆಂಗಳೂರಿನಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಎತ್ತಿನ ಬಂಡಿಯನ್ನು ನಿಯಂತ್ರಿಸುವ ಹಗ್ಗ ಸಿದ್ದರಾಮಯ್ಯ ಕೈಯಲ್ಲಿತ್ತು. ಪಕ್ಷದ ಅಧಿಕಾರ ಅವರ ಕೈಯಲ್ಲಿಯೇ ಇದೆ ಎಂಬುದರ ಸೂಚನೆ ಇದು. ಬೆಲೆಯೇರಿಕೆ ವಿಚಾರವನ್ನು ಬದಿಗಿಡಿ, ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತಿದ್ದರೆ, ಬಂಡಿ ಓಡಿಸಲು ಎತ್ತು ಕೂಡಾ ಇರುತ್ತಿರಲಿಲ್ಲ. ಎಲ್ಲವೂ ಕಸಾಯಿಖಾನೆಯಲ್ಲಿ ಇರುತ್ತಿದ್ದವು’ ಎಂದರು.

‘ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಇನ್ನು 20 ವರ್ಷ ಸಿದ್ರಾಮಣ್ಣ ಮತ್ತು ಡಿಕೆಶಿ ನಿರುದ್ಯೋಗಿಗಳು. ಏಕೆಂದರೆ, ಬಿಜೆಪಿಯೇ ಮುಂದಿನ ಚುನಾವಣೆಯಲ್ಲಿಯೂ ಗೆದ್ದು ಅಧಿಕಾರದಲ್ಲಿ ಇರುತ್ತದೆ. ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ, ದೊಡ್ಡಬಳ್ಳಾಪುರ ಚುನಾವಣೆಗಳು ಇದಕ್ಕೆ ನಿದರ್ಶನ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು