ಶನಿವಾರ, ಅಕ್ಟೋಬರ್ 16, 2021
29 °C

ಕೋವಿಡ್‌ ಸೇನಾನಿಗಳಿಗೆ ‘ನಮ್ಮ ಬೆಂಗಳೂರು ಪ್ರಶಸ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಬೆಂಗಳೂರು ಪ್ರಶಸ್ತಿ’ಯ 12ನೇ ಆವೃತ್ತಿಗೆ ಚಾಲನೆ ನೀಡಲಾಗಿದ್ದು, ಈ ಬಾರಿ ಕೋವಿಡ್‌ ಸೇನಾನಿಗಳಿಗೆ ಪ್ರಶಸ್ತಿ ಕೊಡಲು ನಮ್ಮ ಬೆಂಗಳೂರು ಪ್ರಶಸ್ತಿ ಟ್ರಸ್ಟ್‌ ನಿರ್ಧರಿಸಿದೆ.  

‘ವರ್ಷದ ಆರೋಗ್ಯ ವೃತ್ತಿಪರರು’, ‘ವರ್ಷದ ಮುಂಚೂಣಿ ಕಾರ್ಯಕರ್ತರು’, ‘ವರ್ಷದ ಸಾಮಾಜಿಕ ಸಂಸ್ಥೆ/ವ್ಯಕ್ತಿ’, ‘ವರ್ಷದ ಮಾಧ್ಯಮ ಚಾಂಪಿಯನ್‌’ ಹಾಗೂ ‘ವರ್ಷದ ನಮ್ಮ ಬೆಂಗಳೂರಿನವರು’ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ನಮ್ಮ ಬೆಂಗಳೂರು ಪ್ರಶಸ್ತಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ತಾವು ಗುರುತಿಸಿರುವ ‘ಹೀರೊ’ಗಳನ್ನು ಜನರೇ ನಾಮನಿರ್ದೇಶನ ಮಾಡಬಹುದು. ಇದೇ 24ಕ್ಕೆ ನಾಮನಿರ್ದೇಶನ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ’ ಎಂದು ಪ್ರಕಟಣೆ ತಿಳಿಸಿದೆ.   

‘ನಟ ರಮೇಶ್‌ ಅರವಿಂದ್‌, ಮೈಕ್ರೋಲ್ಯಾಂಡ್‌ ಅಧ್ಯಕ್ಷ ಪ್ರದೀಪ್ ಕರ್‌, ಎಚ್‌ಸಿಜಿ ಕ್ಯಾನ್ಸರ್‌ ಕೇಂದ್ರದ ಡಾ.ವಿಶಾಲ್‌ ರಾವ್‌, ಫೋರ್ಟಿಸ್‌ನ ಡಾ.ವಿವೇಕ್‌ ಪಡೆಗಲ್‌, ಮಣಿಪಾಲ್‌ ಆಸ್ಪತ್ರೆಯ ಡಾ.ಸುದರ್ಶನ ಬಲ್ಲಾಳ್‌, ಐಎಎಸ್‌ ಅಧಿಕಾರಿ ಮಣಿವಣ್ಣನ್‌, ವಕೀಲ ಸಜನ್‌ ಪೂವಯ್ಯ, ಅನಿತಾ ರೆಡ್ಡಿ ಮತ್ತು ಸಂಜಯ ಪ್ರಭು ತೀರ್ಪುಗಾರರಾಗಿರುವರು’ ಎಂದೂ ಹೇಳಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು