ಕರಾರು ಉಲ್ಲಂಘಿಸಿಲ್ಲ: ವಿಜಯ ಎಂ ನಿರಾಣಿ ಸ್ಪಷ್ಟನೆ
ಮಂಡ್ಯ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಗುತ್ತಿಗೆ ಕರಾರಿನ ವಿಚಾರದಲ್ಲಿ ಯಾವುದೇ ಷರತ್ತು ಉಲ್ಲಂಘಿಸಿಲ್ಲ ಎಂದು ನಿರಾಣಿ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ವಿಜಯ ಎಂ ನಿರಾಣಿ ಶನಿವಾರ ಸ್ಪಷ್ಟನೆ ನೀಡಿದ್ದಾರೆ.
ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನು ಗ್ಲೋಬಲ್ ಟೆಂಡರ್ ಮೂಲಕ ಅತೀ ಹೆಚ್ಚು ಹಣಕ್ಕೆ ಗುತ್ತಿಗೆ ಪಡೆಯಲಾಗಿದೆ. ಶಾಸನಬದ್ಧ ಶುಲ್ಕಗಳನ್ನು ನಿಯಮಿತವಾಗಿ ಪಾವತಿಸಲಾಗಿದೆ. ₹ 20 ಕೋಟಿ ಮುಂಗಡ ಹಣ ಪಾವತಿಸಲು ಸಿದ್ಧರಿದ್ದೇವೆ, ಆದರೆ ಕಾರ್ಖಾನೆ ಮೇಲೆ ವಿವಿಧ ಹಣಕಾಸು ಸಂಸ್ಥೆಗಳಿಂದ ಋಣಭಾರವಿದ್ದು ಅವು ಮುಕ್ತರಾದ ನಂತರ ಮುಂಗಡ ಪಾವತಿಸಬೇಕು ಎಂಬ ನಿಬಂಧನೆ ಇದೆ. ಋಣಭಾರದಿಂದ ಮುಕ್ತಗೊಳಿಸುವಂತೆ ಹಲವು ಬಾರಿ ಸರ್ಕಾರವನ್ನು ಕೋರಿದ್ದೇವೆ ಎಂದು ತಿಳಿಸಿದ್ದಾರೆ.
21 ಕಾರ್ಮಿಕರನ್ನು ನಾವು ಬಿಡುಗಡೆಗೊಳಿಸಿಲ್ಲ, ಅದು ಕಾರ್ಖಾನೆಯ ಆಡಳಿತ ಮಂಡಳಿ ನಿರ್ಧಾರವಾಗಿದೆ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಮುಖಂಡ ಡಾ.ಎಚ್.ಎನ್.ರವೀಂದ್ರ ಅವರು ಎಸಿಬಿಗೆ ದೂರು ನೀಡುವ ಮುನ್ನ ಕರಾರು ಪತ್ರವನ್ನು ಒಮ್ಮೆ ಸರಿಯಾಗಿ ಓದಬೇಕಾಗಿತ್ತು. ಕ್ಷುಲ್ಲಕವಾಗಿ ಆರೋಪಿಸಿರುವ ಅವರು ಕೂಡಲೇ ಕ್ಷಮೆ ಯಾಚನೆ ಮಾಡಬೇಕು, ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.