ಶನಿವಾರ, ಮೇ 21, 2022
25 °C

‘ಭಾವನೆಗಳನ್ನು ಮೀಟುವ ಕವನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶಾಂತಲಾ ಅವರು ರಚಿಸಿರುವ ಕವನಗಳು ಮನ ಮಿಡಿಯುವಂತಿವೆ. ಓದುಗರ ಭಾವನೆಗಳನ್ನು ಮೀಟುವಂತಿವೆ’ ಎಂದು ಸಂಗೀತ ನಿರ್ದೇಶಕ ವಿ.ಮನೋಹರ್‌ ಅಭಿಪ್ರಾಯಪಟ್ಟರು.

ಸ್ನೇಹ ಕೃಪಾ ಮೂವೀಸ್‌ ಆಯೋಜಿಸಿದ್ದ ಶಾಂತಲಾ ಪಾಟೀಲ್‌ ಅವರ ‘ಪ್ರೇಮ ತರಂಗ’ ಕವನ ಸಂಕಲನ ಬಿಡುಗಡೆ ಮಾಡಿ ಶನಿವಾರ ಮಾತನಾಡಿದರು.

‘ಶಾಂತಲಾ ಅವರ ಬರಹಗಳಲ್ಲಿ ಹೊಸತನವಿದೆ. ಅವರಿಗೆ ಉತ್ತಮ ಭವಿಷ್ಯವಿದೆ’ ಎಂದರು.

ನಾಟಕಕಾರ ಸುಧಾಕರ ಬನ್ನಂಜೆ, ‘ಬರಹಕ್ಕೆ ಅಪಾರ ಶಕ್ತಿ ಇದೆ. ಒಂದು ಲೇಖನ ಸಮಾಜವನ್ನೇ ಬದಲಾವಣೆ ‌ಮಾಡಿದ ಉದಾಹರಣೆ ಇದೆ. ಡಿಜಿಟಲ್ ಮಾಧ್ಯಮ ಬಂದರೂ ಪುಸ್ತಕಗಳ ಬೇಡಿಕೆ ಕಡಿಮೆಯಾಗುವುದಿಲ್ಲ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.