ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಪರ ಪ್ರಣಾಳಿಕೆ: ಎಎಪಿ

Last Updated 23 ಮಾರ್ಚ್ 2023, 23:37 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಆಮ್ ಆದ್ಮಿ ಪಕ್ಷದ ಪ್ರಣಾಳಿಕೆ ಯಾವಾಗಲೂ ಬಡವರ, ಕಾರ್ಮಿಕರ ಹಾಗೂ ಜನಸಾಮಾನ್ಯರ ಪರವಾಗಿ ಇರುತ್ತದೆ. ರೋಸಿಹೋದ ಜನರು ಆಪ್‌ನತ್ತ ಒಲವು ತೋರುತ್ತಿದ್ದಾರೆ' ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೌಂದರ್ಯ ಪಿ. ಮಂಜಪ್ಪ ಹೇಳಿದರು.

‘ವಿರೋಧ ಪಕ್ಷಗಳು ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀವಿ ಎನ್ನುತ್ತಾ ಅಧಿಕಾರಕ್ಕೆ ಬಂದು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಅದಕ್ಕಾಗಿ ಜನರಿಗೆ ಪೊರಕೆಯೇ ಆಯ್ಕೆ ಎಂಬುದು ಮನದಟ್ಟಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ, ಕುಡಿಯುವ ನೀರು, ಉದ್ಯೋಗ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಆಮ್ ಆದ್ಮಿ ಪಕ್ಷ ಬೆಂಬಲಿಸಿ’ ಎಂದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂ. ಕೀರ್ತನ್ ಕುಮಾರ್ ಮಾತನಾಡಿ, 'ದೆಹಲಿ ಮಾದರಿ ಆಡಳಿತ, ಒಳ್ಳೆಯ ಸಮಾಜ ನಿರ್ಮಿಸಲು ರಾಜ್ಯದಲ್ಲಿ ಈಗಾಗಲೇ ಮೊದಲನೇ ಪಟ್ಟಿಯಲ್ಲಿ 80 ಅಭ್ಯರ್ಥಿಗಳ ಘೋಷಣೆಯಾಗಿದೆ. ಅದರಲ್ಲಿ ಡಾಕ್ಟರ್, ಲಾಯರ್, ಶಿಕ್ಷಣ ತಜ್ಞರು, ಯುವಕರು ಇದ್ದಾರೆ. ಭ್ರಷ್ಟಾಚಾರವನ್ನು ತೊಲಗಿಸಲು ಈ ಬಾರಿ ಒಂದು ಅವಕಾಶ ಕಲ್ಪಿಸಿ' ಎಂದು ಮನವಿ ಮಾಡಿದರು.

ಪಕ್ಷದ ಮುಖಂಡ ವರುಣ್ ಕುಮಾರ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸಂಜೀವ್ ಸಾಲಂಕೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಸೌಂದರ್ಯ ಪಿ. ಮಂಜಪ್ಪ, ಅಭ್ಯರ್ಥಿ ಎಂ ಕೀರ್ತನ್ ಕುಮಾರ್, ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ಭವ್ಯ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT