ಚಿಕ್ಕಬಳ್ಳಾಪುರ: ಮಹಿಳೆ ಮೇಲೆ ಪಿಎಸ್‌ಐ ಹಲ್ಲೆ, ವಿಡಿಯೊ ವೈರಲ್
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಪಾಪಣ್ಣ ಮಹಿಳೆಯೊಬ್ಬರಿಗೆ ಥಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಡಿಶಾದ ಮಹಿಳೆ ದಿಬ್ಬೂರಹಳ್ಳಿ ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಅನೈತಿಕ ಸಂಬಂಧ ಕುರಿತು ವಿಚಾರಣೆಗಾಗಿ ಮಹಿಳೆಯನ್ನು ಠಾಣೆಗೆ ಕರೆತರಲಾಗಿತ್ತು. ಈ ವೇಳೆ ನೆಲದಲ್ಲಿ ಮಹಿಳೆಯನ್ನು ಕೂರಿಸಿ ಅವರ ಪಾದಗಳಿಗೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆ.
ಮಹಿಳೆ ಬೇರೊಬ್ಬರ ಜತೆ ಸಂಬಂಧ ಹೊಂದಿದ್ದರು. ಅವರಿಗೆ ಕರೆಯಿಸಿ ತಿಳಿ ಹೇಳಿ ಎಂದು ಆಕೆಯ ಮನೆಯವರೇ ದೂರು ನೀಡಿದ್ದರು. ಈ ಕಾರಣದಿಂದ ಠಾಣೆಗೆ ಕರೆಯಿಸಲಾಗಿತ್ತು ಎಂದು ಪಾಪಣ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.