ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮದಿಂದ ಬಂದ ಕೋಟ್ಯಂತರ ರೂಪಾಯಿ ಹಣದಲ್ಲಿ ಎಡಿಜಿಪಿ ಅಮ್ರಿತ್ ಪೌಲ್ ಅವರಿಗೆ ಶೇ 20ರಷ್ಟು ಪಾಲು ಸಂದಾಯವಾಗಿರಬಹುದೆಂಬ ಮಾಹಿತಿ ಸಿಐಡಿ ಅಧಿಕಾರಿಗಳ ತನಿಖೆಯಿಂದ ಹೊರ ಬಿದ್ದಿದ್ದು, ಹಣ ವರ್ಗಾವಣೆಯ ದಾಖಲೆಗಳಿಗಾಗಿ ಶೋಧ ಆರಂಭವಾಗಿದೆ.

ಅವರನ್ನು ಬಂಧಿಸಿ ಕಸ್ಟಡಿಗೆ ಪಡೆದಿರುವ ಸಿಐಡಿ ಅಧಿಕಾರಿಗಳು, ಪುರಾವೆಗಳ ಸಮೇತ ವಿಚಾರಣೆ ಮುಂದುವರಿ
ಸಿದ್ದಾರೆ. ಆರೋಪಿ ಡಿವೈಎಸ್ಪಿ ಶಾಂತ ಕುಮಾರ್ ಹಾಗೂ ಇತರರು ನೀಡಿದ್ದ ಹೇಳಿಕೆ ಮುಂದಿಟ್ಟು ಪ್ರಶ್ನೆ ಹಾಕಿದ್ದಾರೆ.

ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಟೆಂಡರ್ನಲ್ಲಿ ಕಮಿಷನ್ ದಂಧೆ ನಡೆಯುತ್ತಿದ್ದ ರೀತಿಯಲ್ಲೇ ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲೂ ಕಮಿಷನ್ ದಂಧೆ ನಡೆದಿರುವ ಅನುಮಾನ ಸಿಐಡಿಗೆ ಬಂದಿದೆ.

‘ಹಿಂದೆ ಅಧಿಕಾರದಲ್ಲಿದ್ದವರ ಕುಟುಂಬದ ‘ಪ್ರಭಾವಿ’ಯೊಬ್ಬರ ಜೊತೆ ಸೇರಿಕೊಂಡು ಎಡಿಜಿಪಿ ಹಾಗೂ ಇತರೆ ಆರೋಪಿಗಳು, ಕಮಿಷನ್ ಆಧಾರದಲ್ಲಿ ಅಕ್ರಮ ಎಸಗಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕೆಲ ಪುರಾವೆಗಳು ಸಿಕ್ಕಿದ್ದು, ಮತ್ತಷ್ಟು ಪುರಾವೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮ್ರಿತ್ ಪೌಲ್, ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆದು 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದರು. ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನವೇ, ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಕಲಬುರಗಿ, ಬೆಂಗಳೂರು ಹಾಗೂ ಇತರೆ ಜಿಲ್ಲೆಗಳ ಅಭ್ಯರ್ಥಿಗಳು ಹಣ ನೀಡಿದ್ದರು. ಅವರಿಂದ ಸಂಗ್ರಹಿಸಿದ್ದ ಕೋಟ್ಯಂತರ ರೂಪಾಯಿ ಹಣದಲ್ಲಿ ಶೇ 20ರಷ್ಟು ಪಾಲು ಎಡಿಜಿಪಿ ಅವರ ಕೈ ಸೇರಿತ್ತು. ಬಳಿಕವೇ ಅವರು, ಒಎಂಆರ್ ತಿದ್ದುಪಡಿ ಮಾಡಿಸಿದ್ದರು. ಹಣ ಕೊಟ್ಟ ಅಭ್ಯರ್ಥಿಗಳ ಹೆಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿತ್ತು’ ಎಂದೂ ಸಿಐಡಿ ಮೂಲಗಳು ಹೇಳಿವೆ.

‘ಎಡಿಜಿಪಿ ಅಮ್ರಿತ್ ಪೌಲ್ ಅವರ ಸೂಚನೆಯಂತೆ ಭದ್ರತಾ ಕೊಠಡಿ ಕೀ ತೆರೆದು, ಅಭ್ಯರ್ಥಿಗಳ ಒಎಂಆರ್ ಪ್ರತಿ ತಿದ್ದುಪಡಿ ಮಾಡಲಾಗಿತ್ತು. ಅಕ್ರಮದಿಂದ ಬಂದ ಹಣದಲ್ಲಿ ಪ್ರಭಾವಿಗಳು, ಎಡಿಜಿಪಿ... ಎಲ್ಲರಿಗೂ ಪಾಲು ಹೋಗಿದೆ’ ಎಂಬುದಾಗಿ ಡಿವೈಎಸ್ಪಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯೇ ಅಮ್ರಿತ್ ಪೌಲ್ ಬಂಧಿಸಲು ಪ್ರಮುಖ ಸಾಕ್ಷ್ಯವಾಗಿತ್ತು’ ಎಂದೂ ತಿಳಿಸಿವೆ.

ಬಿಲ್ಡರ್ಗಳ ಬಳಿ ಹಣ?: ಅಮ್ರಿತ್ ಪೌಲ್ ಅವರಿಗೆ ಸಂದಾಯವಾದ ಹಣ ಎಲ್ಲಿದೆ? ಎಂಬ ಬಗ್ಗೆ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ನಾಲ್ವರು ಬಿಲ್ಡರ್ಗಳ ಜೊತೆ ಒಡನಾಟ ಹೊಂದಿದ್ದ ಪೌಲ್, ಅವರ ಬಳಿಯೇ ಹಣ ಇರಿಸಿರುವ ಅನುಮಾನವೂ ಸಿಐಡಿಗೆ ಬಂದಿದೆ.

‘ಬೆಂಗಳೂರು ಕಮಿಷನರ್ ಆಗಲು ಪ್ರಯತ್ನಿಸುತ್ತಿದ್ದ ಅಮ್ರಿತ್ ಪೌಲ್, ಹಣ ಕೊಟ್ಟಾದರೂ ಹುದ್ದೆ ಪಡೆಯಲು ಪೈಪೋಟಿ ನಡೆಸಿದ್ದರು. ಪಿಎಸ್ಐ ಅಕ್ರಮದಿಂದ ಬಂದ ಹಣವನ್ನೇ ಇದಕ್ಕೆ ಬಳಸಲು ಯೋಚಿಸಿದ್ದರು. ಆದರೆ, ಪ್ರತಾಪ್ ರೆಡ್ಡಿ ಅವರು ಕಮಿಷನರ್ ಆಗಿ ನಿಯೋಜನೆಗೊಂಡರು. ಪೌಲ್ ಆಸೆ ಈಡೇರಲಿಲ್ಲ. ಮಧ್ಯವರ್ತಿಗಳ ಮೂಲಕ ಬಂದ ಹಣವನ್ನು ಪೌಲ್ ಬಳಕೆ ಮಾಡಿಲ್ಲ. ಪರಿಚಯಸ್ಥರ ಮೂಲಕ ಬೇರೆಡೆ ನೀಡಿರುವ ಮಾಹಿತಿ ಇದೆ. ಈ ಬಗ್ಗೆ ಖಚಿತ ದಾಖಲೆಗಳನ್ನು ಸಂಗ್ರಹಿಸಿ, ಎಲ್ಲರಿಗೂ ನೋಟಿಸ್ ನೀಡಲು ಚಿಂತನೆ ನಡೆಸಲಾಗುತ್ತಿದೆ’ ಎಂದೂ ಸಿಐಡಿ ಮೂಲಗಳು ಹೇಳಿವೆ.

‘ಪ್ರಭಾವಿ’ಗೆ ಶೇ 30ರಷ್ಟು ಕಮಿಷನ್?

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಕುಟುಂಬದವರೊಬ್ಬರು, ಕೆಲ ಹಿರಿಯ ಐಪಿಎಸ್ ಅಧಿಕಾರಿಗಳ ಪಾತ್ರವಿರುವ ಅನುಮಾನ ಸಿಐಡಿಗೆ ಬಂದಿದೆ. ಅವರೆಲ್ಲರ ಬಗ್ಗೆಯೂ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

‘ಚಾಲ್ತಿಯಲ್ಲಿರುವ ಕಾನೂನು ಪ್ರಕಾರ, ಏಕಕಾಲದಲ್ಲಿ 545 ಪಿಎಸ್ಐ ಹುದ್ದೆ ನೇಮಕಕ್ಕೆ ಅವಕಾಶವಿರಲಿಲ್ಲ. ಆರಂಭದಲ್ಲಿ ನೇಮಕಾತಿ ಪ್ರಸ್ತಾವವನ್ನು ಸರ್ಕಾರ ತಿರಸ್ಕರಿಸಿತ್ತು. ಆದರೆ, ಸರ್ಕಾರದ ಮಟ್ಟದಲ್ಲಿ ತನ್ನದೇ ಹಿಡಿತ ಹೊಂದಿದ್ದ ‘ಪ್ರಭಾವಿ’ಯೊಬ್ಬರು ಒತ್ತಡ ಹೇರಿ ನೇಮಕಾತಿಗೆ ಒಪ್ಪಿಗೆ ಪಡೆದಿದ್ದರು. ಇದಕ್ಕಾಗಿ ಅವರು ಶೇ 30ರಷ್ಟು ಪಾಲು ಕೇಳಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ಪರಿಶೀಲಿಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಪಿಎಸ್ಐ ಹುದ್ದೆಗಳನ್ನು ಮಧ್ಯವರ್ತಿಗಳ ಮೂಲಕ ಮಾರಾಟಕ್ಕೆ ಇಟ್ಟಿದ್ದ ನೇಮಕಾತಿ ವಿಭಾಗ, ಅದರಿಂದ ಬಂದ ಹಣದಲ್ಲಿ ಶೇ 30ರಷ್ಟು ಪಾಲನ್ನು ಪ್ರಭಾವಿಗೆ ನೀಡಿರುವ ಅನುಮಾನವಿದೆ. ಉಳಿದ ಶೇ 50ರಷ್ಟು ಪಾಲನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿ, ಮಧ್ಯವರ್ತಿಗಳು, ಕೆಲ ಪೊಲೀಸ್ ಅಧಿಕಾರಿಗಳು, ಕೆಲ ನೌಕರರು ಹಾಗೂ ಇತರರು ಹಂಚಿಕೊಂಡಿರುವ ಶಂಕೆಯೂ ಇದೆ. ಈ ಪೈಕಿ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಕೆಲವರಿಂದ ಈಗಾಗಲೇ ₹ 2.16 ಕೋಟಿ ಹಣ ಜಪ್ತಿ ಸಹ ಮಾಡಲಾಗಿದೆ’ ಎಂದೂ ತಿಳಿಸಿವೆ.

ವಿಶೇಷ ಪ್ರಾಸಿಕ್ಯೂಟರ್ ನೇಮಕಕ್ಕೆ ಪ್ರಸ್ತಾವ

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ವಿಚಾರಣೆ ನಡೆಯುತ್ತಿರುವ ನ್ಯಾಯಾಲಯಗಳಲ್ಲಿ ಸೂಕ್ತ ವಾದ ಮಂಡಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ಗಳನ್ನು ನೇಮಕ ಮಾಡುವಂತೆ ಸಿಐಡಿ ಅಧಿಕಾರಿಗಳು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

‘ಪ್ರಕರಣದಲ್ಲಿ ಬಹುಕೋಟಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಪ್ರತ್ಯೇಕವಾಗಿ 8 ಎಫ್ಐಆರ್ಗಳು ದಾಖಲಾಗಿದ್ದು, ಅದರನ್ವಯ ತನಿಖೆ ಚುರುಕುಗೊಳಿಸಲಾಗಿದೆ. ಬಂಧಿತ ಆರೋಪಿಗಳಿಗೆ ಕಾನೂನಿನಡಿ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ, ಬೆಂಗಳೂರು ಹಾಗೂ ಕಲಬುರಗಿ ನ್ಯಾಯಾಲಯದಲ್ಲಿ ವಾದಿಸಲು ವಿಶೇಷ ಪ್ರಾಸಿಕ್ಯೂಟರ್ ನೇಮಿಸಬೇಕು’ ಎಂದು ಸಿಐಡಿ ಕೋರಿದೆ. ಸಿಐಡಿ ಸಲ್ಲಿಸಿರುವ ಪ್ರಸ್ತಾವಕ್ಕೆ ಗೃಹ ಇಲಾಖೆಯಿಂದ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ.

ಇ.ಡಿಗೆ ಪತ್ರ

ಪಿಎಸ್ಐ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಹಣ ಕೈ ಬದಲಾವಣೆ ಆಗಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಪತ್ರ ಬರೆಯಲು ಸಿಐಡಿ ಸಿದ್ಧತೆ ನಡೆಸುತ್ತಿದೆ.

‘ಅಭ್ಯರ್ಥಿಗಳಿಂದ ಮಧ್ಯವರ್ತಿಗಳ ಮೂಲಕ ಹಿರಿಯ ಅಧಿಕಾರಿಗಳಿಗೆ ಹಣ ಸಂದಾಯವಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಜೊತೆಗೆ, ತಮ್ಮ ಕೈ ಸೇರಿದ ಹಣವನ್ನು ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ. ಇದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಅಪರಾಧವಾಗುತ್ತದೆ. ಹೀಗಾಗಿ, ಇ.ಡಿ ಮಧ್ಯಪ್ರವೇಶಿಸಬಹುದು’ ಎಂದು ಸಿಐಡಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.