ಮಂಗಳವಾರ, ಜೂನ್ 22, 2021
22 °C

ಇದು ಟ್ರಯಲ್‌, ಶನಿವಾರ ದೊಡ್ಡ ಬಾಂಬ್ ಸ್ಫೋಟ: ರಮೇಶ್ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಾಳೆ (ಶನಿವಾರ) ಸಂಜೆ 4 ರಿಂದ 6 ಗಂಟೆಯ ಒಳಗೆ ದೊಡ್ಡ ಬಾಂಬ್‌ ಸ್ಫೋಟವಾಗುತ್ತದೆ. ದೊಡ್ಡ ಮಟ್ಟದ ಬೆಳವಣಿಗೆ ಆಗಲಿದ್ದು, ನಾನೇ ಆಗ ಮಾತನಾಡುತ್ತೇನೆ’ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಓದಿ: 

‘ಇದು ಬರಿ ಟ್ರಯಲ್‌, ನಾಳೆ ಸಂಜೆಯವರೆಗೆ ಕಾಯಿರಿ ಬಾಂಬ್‌ ಸ್ಫೋಟವಾಗುತ್ತದೆ. ಆಡಿಯೊದಲ್ಲಿ ಡಿ.ಕೆ.ಶಿವಕುಮಾರ್‌ ಹೆಸರು ಪ್ರಸ್ತಾಪ ಆಗಿದೆ. ತನಿಖೆ ನಡೆಯಲಿ. ಆಡಿಯೊದಲ್ಲಿ ಹೆಸರು ಬಂದ ಮಾತ್ರಕ್ಕೆ ಡಿ.ಕೆ ಆರೋಪಿಯಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿ. ನನಗೆ ಆದ ರೀತಿ ಅನ್ಯಾಯ ಅವರಿಗೆ ಆಗಬಾರದು. ನನ್ನ ಹಾಗೆ ಅವರು ರಾಜಿನಾಮೆ ಕೊಡುವುದು ಬೇಡ’ ಎಂದರು.

‘ಶಿವಕುಮಾರ್‌ ಬಗ್ಗೆ ಆರೋಪ ಮಾಡುವುದಿಲ್ಲ. ಯಾವುದೇ ಪುರಾವೆ ಇಲ್ಲದೆ ಏನೂ ಹೇಳುವುದಿಲ್ಲ. ನಾನು ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ’ ಎಂದರು.

ಓದಿ: 

’ಸರ್ಕಾರವನ್ನೇ ತೆಗೆದವನು ನಾನು. ಇದೆಲ್ಲ ಯಾವ ಲೆಕ್ಕ. ಸಮ್ಮಿಶ್ರ ಸರ್ಕಾರ ಉರುಳಿಸಿ, ಬಿಜೆಪಿ ಸರ್ಕಾರ ತಂದಿದ್ದಕ್ಕೆ ಷಡ್ಯಂತ್ರ ನಡೆಸಿದ್ದಾರೆ. ಇಂತಹ ದೂರುಗಳಿಗೆಲ್ಲ ಅಂಜುವುದಿಲ್ಲ. ನನ್ನ ವಿರುದ್ಧ ನಡೆದ ಷಡ್ಯಂತ್ರದ ಎಲ್ಲ ವಿವರವನ್ನೂ ಸಂಗತಿಯನ್ನು ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು.

ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು