ಗುರುವಾರ , ನವೆಂಬರ್ 26, 2020
22 °C

ಆರ್‌ಆರ್‌ ನಗರ ಉಪಚುನಾವಣೆ: ಬೆಂಗಳೂರಿನ ಈ ಭಾಗದಲ್ಲಿ ನ.1-3, ನ.10ರಂದು ಮದ್ಯ ಇಲ್ಲ

ಎಎನ್‌ಐ‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಸ್ಥಳಗಳಲ್ಲಿ ನ.1 ರಿಂದ 3 ಮತ್ತು ಫಲಿತಾಂಶದ ದಿನವಾದ ನ. 10ರಂದು ಮದ್ಯ ನಿಷೇಧಿಸಲಾಗಿದೆ.

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಪ್ರಕಟಣೆ ನೀಡಿದ್ದು, ನಿಗದಿತ ಪ್ರದೇಶಗಳಲ್ಲಿ ಮದ್ಯ ಮತ್ತು ಅಮಲೇರಿಸುವ ಪದಾದರ್ಥಗಳ ಮಾರಾಟ, ಸೇವನೆ, ಸಂಗ್ರಹಣೆಯನ್ನು ನಿಷೇಧಿಸಿರುವುದಾಗಿ ಹೇಳಿದ್ದಾರೆ.

ನ.1ರ ಸಂಜೆ 5ರಿಂದ, ನ.3ರ ರಾತ್ರಿ 12ರ ವರೆಗೆ ಮತ್ತು ನ. 10ರ ಮುಂಜಾನೆ 6ರಿಂದ, 10ರ ರಾತ್ರಿ 12ರ ವರೆಗೆ ಮದ್ಯ ಮಾರಾಟ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಯಾವ ಸ್ಥಳಗಳಲ್ಲಿ ಮದ್ಯವಿಲ್ಲ?
ಯಶವಂತಪುರ, ಆರ್‌ಎಂಸಿ ಯಾರ್ಡ್‌, ರಾಜಗೋಪಾಲ ನಗರ, ಪೀಣ್ಯ, ನಂದಿನಿ ಲೇಔಟ್‌, ಮಹಾಲಕ್ಷ್ಮೀ ಲೇಔಟ್‌, ಜಾಲಹಳ್ಳಿ, ಗಂಗಮ್ಮನಗುಡಿ, ರಾಜರಾಜೇಶ್ವರಿ ನಗರ, ಕಾಮಾಕ್ಷಿಪಾಳ್ಯ, ಜ್ಞಾನಭಾರತಿ, ಬ್ಯಾಟರಾಯನಪುರ, ಅನ್ನಪೂರ್ಣೇಶ್ವರಿ ನಗರ, ಗಿರಿನಗರ ಪೊಲೀಸ್‌ ಠಾಣೆ ಪ್ರದೇಶ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು