ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ಹಿಜಾಬ್‌ ಅಲ್ಲ; ಕೇಸರಿ ಶಾಲು ಸಮಸ್ಯೆ: ಪ್ರಭಾಕರ್‌ ಭಟ್‌ ಕಲ್ಲಡ್ಕ

Last Updated 20 ಮಾರ್ಚ್ 2022, 19:01 IST
ಅಕ್ಷರ ಗಾತ್ರ

ಮಂಗಳೂರು: ‘ಸಿದ್ದರಾಮಯ್ಯ ಅವರಿಗೆ ‘ಹಿಜಾಬ್‌ ವಿವಾದ’ ದೊಡ್ಡ ವಿಷಯ ಆಗಲಿಲ್ಲ. ಬದಲಿಗೆ ಕೇಸರಿ ಶಾಲು ಧರಿಸಿ ಹುಡುಗರು ಕಾಲೇಜಿಗೆ ಬಂದಿದ್ದು ದೊಡ್ಡ ವಿಷಯ ಆಯಿತು. ಹಿಜಾಬ್‌ ಬಗ್ಗೆ ಮಾತನಾಡಿದರೆ ಮತ ಬ್ಯಾಂಕ್‌ ನಷ್ಟವಾಗಬಹುದೆಂಬ ಭಯದಿಂದ, ಅದರ ನೆಪದಲ್ಲಿ ಗೋಧ್ರಾ ಘಟನೆ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರು ಆರೋಪಿಸಿದರು.

ಗೋಧ್ರಾ ಹಿಂಸಾಚಾರದ ಬಗ್ಗೆ ಸಿದ್ದರಾಮಯ್ಯ ಅವರು ಈಚೆಗೆ ನೀಡಿದ್ದ ಹೇಳಿಕೆಗೆ, ಪ್ರತಿಕ್ರಿಯಿಸಿದ ಅವರು, ‘ಗೋಧ್ರಾದಲ್ಲಿ ರೈಲು ಬೋಗಿಗೆ ಬೆಂಕಿ ಹಾಕಿದ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಹಿಂದೂಗಳ ಮನೆಗೊಮ್ಮೆ ಸಿದ್ದರಾಮಯ್ಯ ಭೇಟಿ ನೀಡಿ ಬರಲಿ. ಅಲ್ಲಿ ಮುಸ್ಲಿಮರು ಮಾಡಿದ ಅತ್ಯಾಚಾರವನ್ನು ನಾಗರಿಕ ಸಮಾಜಒಪ್ಪಿಕೊಳ್ಳಲು ಸಾಧ್ಯವಿಲ್ಲ. ಗೋಧ್ರಾದಲ್ಲಿ ‘ಆ್ಯಕ್ಷನ್‌’ಗೆ ಆನಂತರ ‘ರಿಯಾಕ್ಷನ್‌’ ನಡೆದಿತ್ತು’ ಎಂದು ಅವರು ಹೇಳಿದರು.

‘ಹಿಂದೂಗಳು ಈವರೆಗೆ ರಿಯಾಕ್ಷನ್‌ ನೀಡಿದ್ದಾರೆಯೇ ಹೊರತು ಆ್ಯಕ್ಷನ್‌ ಮಾಡಿಲ್ಲ. ಆದರೆ, ನಮ್ಮ ಬದುಕಿಗಾಗಿ ಹೋರಾಟ
ಮಾಡುವುದು ಈಗ ಅನಿವಾರ್ಯವಾಗಿದೆ. ಅವರು ಆ್ಯಕ್ಷನ್‌ ನಿಲ್ಲಿಸಿದರೆ ರಿಯಾಕ್ಷನ್‌ ತಾನಾಗಿಯೇ ನಿಲ್ಲುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT