ಸಿಂಗಪುರಕ್ಕೆ ಸಫಾಯಿ ಕರ್ಮಚಾರಿ ಆಯೋಗ ಅಧ್ಯಯನ ಪ್ರವಾಸ: ಕೋಟೆ ಎಂ.ಶಿವಣ್ಣ

ಕೋಲಾರ: ಸ್ವಚ್ಛತೆ ಹಾಗೂ ತಂತ್ರಜ್ಞಾನ ಕುರಿತು ಅಧ್ಯಯನ ನಡೆಸಲು ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ನ.23ರಿಂದ ಸಿಂಗಪುರ ಪ್ರವಾಸ ಕೈಗೊಳ್ಳಲಿದೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ‘ನಾನು, ಇಬ್ಬರು ಪೌರಕಾರ್ಮಿಕರು, ನಾಲ್ವರು ಐಎಎಸ್ ಅಧಿಕಾರಿಗಳು ಹಾಗೂ ತಜ್ಞರು ಸೇರಿದಂತೆ ಒಟ್ಟು 18 ಮಂದಿ ಸಿಂಗಪುರಕ್ಕೆ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ 350 ಪೌರಕಾರ್ಮಿಕರನ್ನು ಸಿಂಗಪುರಕ್ಕೆ ಕಳುಹಿಸುವ ಯೋಜನೆ ಇದೆ’ ಎಂದು ತಿಳಿಸಿದರು.
‘ರಾಜ್ಯದ ಎಲ್ಲಾ ಪೌರಕಾರ್ಮಿಕರಿಗೆ ಗುರುತಿನ ಚೀಟಿ, ಸಮವಸ್ತ್ರ ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಶಾಲೆಗೆ ಹೋದ ಮೊದಲ ದಿನವಾದ ನ.7 ರಂದು ಪ್ರತಿವರ್ಷ ಪೌರಕಾರ್ಮಿಕರ ಮಕ್ಕಳ (ವಿದ್ಯಾರ್ಥಿ) ದಿನವನ್ನಾಗಿ ಆಚರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು ತಿಳಿಸಿದರು. ‘ರಾಜ್ಯದಾದ್ಯಂತ ಬಸ್, ರೈಲು ನಿಲ್ದಾಣ, ಮಾಲ್, ಅಪಾರ್ಟ್‌ಮೆಂಟ್, ಆಸ್ಪತ್ರೆ, ಕಾರ್ಖಾನೆಗಳಲ್ಲಿ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರ ಸಮೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಅವರೂ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಬಳ್ಳಾರಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಸಮೀಕ್ಷೆ ಆರಂಭವಾಗಿದೆ’ ಎಂದು ತಿಳಿಸಿದರು.
ಖಾಲಿ ಹುದ್ದೆ ಭರ್ತಿ ಹಾಗೂ ರಾಜ್ಯದಲ್ಲಿರುವ ಎಲ್ಲಾ ಪೌರಕಾರ್ಮಿಕರ ಸೇವೆಯನ್ನು ಹಂತಹಂತವಾಗಿ ಕಾಯಂ ಮಾಡಲು ಸರ್ಕಾರ ಬದ್ಧವಾಗಿದೆ. 2–3 ತಿಂಗಳಲ್ಲಿ ಪೌರಕಾರ್ಮಿಕರಿಗೆ ಎಲ್ಲಾ ಸೌಲಭ್ಯ ದೊರೆಯಲಿದೆ. ಈಗಾಗಲೇ ಸಮಿತಿ ರಚಿಸಿದ್ದು, ಪೌರಕಾರ್ಮಿಕರ ಭದ್ರತೆಗಾಗಿ ನೀತಿ ರೂಪಿಸಲಾಗುತ್ತಿದೆ ಎಂದು ಎಂ.ಶಿವಣ್ಣ ಹೇಳಿದರು.
*
ಖಾಲಿ ಹುದ್ದೆ ಭರ್ತಿ ಹಾಗೂ ರಾಜ್ಯದಲ್ಲಿರುವ ಎಲ್ಲಾ ಪೌರಕಾರ್ಮಿಕರ ಸೇವೆಯನ್ನು ಹಂತಹಂತವಾಗಿ ಕಾಯಂ ಮಾಡಲು ಸರ್ಕಾರ ಬದ್ಧವಾಗಿದೆ. 2–3 ತಿಂಗಳಲ್ಲಿ ಪೌರಕಾರ್ಮಿಕರಿಗೆ ಎಲ್ಲಾ ಸೌಲಭ್ಯ ದೊರೆಯಲಿದೆ. ಈಗಾಗಲೇ ಸಮಿತಿ ರಚಿಸಿದ್ದು, ಪೌರಕಾರ್ಮಿಕರ ಭದ್ರತೆಗಾಗಿ ನೀತಿ ರೂಪಿಸಲಾಗುತ್ತಿದೆ.
– ಕೋಟೆ ಎಂ.ಶಿವಣ್ಣ, ಅಧ್ಯಕ್ಷ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.