ಬೆಂಗಳೂರು: ನಟ ಸಂಚಾರಿ ವಿಜಯ್ ತಮ್ಮ ಸ್ನೇಹಿತನ ಬೈಕ್‌ನಲ್ಲಿ ಹೋಗುವಾಗ ಹೆಲ್ಮೆಟ್ ಧರಿಸದಿರುವುದೇ ಅಪಾಯಕ್ಕೆ ಕಾರಣ ಎಂಬುದು ಗೊತ್ತಾಗಿದೆ.

‘ಬೈಕ್ ಚಲಾಯಿಸುತ್ತಿದ್ದ ಪಿ.ಎಸ್. ನವೀನ್ ಹಾಗೂ ಹಿಂಬದಿ ಕುಳಿತಿದ್ದ ನಟ ಸಂಚಾರಿ ವಿಜಯ್ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿಯೇ ಬೈಕ್‌ನಿಂದ ಬಿದ್ದ ವಿಜಯ್ ತಲೆಗೆ ತೀವ್ರ ಪೆಟ್ಟು ಬಿದ್ದು ಮಿದುಳು ನಿಷ್ಕ್ರಿಯವಾಗುವ ಹಂತಕ್ಕೆ ತಲುಪಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಜೆ.ಪಿ.ನಗರದ ನವೀನ್ ಜೊತೆಯಲ್ಲಿ ವಿಜಯ್ ಮನೆಯಿಂದ ಹೊರಬಂದಿದ್ದರು. ಸೌತ್ ಸಿಟಿ ಬಳಿಯ ರಸ್ತೆಯಲ್ಲಿ ಶನಿವಾರ (ಜೂ. 12) ರಾತ್ರಿ 11.45ರ ಸುಮಾರಿಗೆ ಬೈಕ್ ಉರುಳಿಬಿದ್ದಿತ್ತು. ರಸ್ತೆಯಲ್ಲೇ ಉಜ್ಜಿಕೊಂಡು ಹೋಗಿದ್ದ ಬೈಕ್, ಪಕ್ಕದ ವಿದ್ಯುತ್ ಕಂಬಕ್ಕೆ ಗುದ್ದಿ ಪುನಃ ಹಾರಿ ಬಿದ್ದಿದೆ. ತಲೆಗೆ ಪೆಟ್ಟಾಗಿ ವಿಜಯ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದರು. ನವೀನ್ ಬೆನ್ನು ಮೂಳೆಗೆ ಪೆಟ್ಟಾಗಿತ್ತು. ಅವರೇ ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದರು. ನಂತರ ಇಬ್ಬರನ್ನೂ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

‘ಸಂಚಾರಿ ವಿಜಯ್ ಹೆಲ್ಮೆಟ್ ಧರಿಸಿದ್ದರೆ ತಲೆಗೆ ಹೆಚ್ಚು ಪೆಟ್ಟಾಗುತ್ತಿರಲಿಲ್ಲ. ಸವಾರ ನವೀನ್, ಸಂಚಾರ ನಿಯಮಗಳನ್ನು ಪಾಲಿಸಿ ನಿಗದಿತ ವೇಗದಲ್ಲಿ ಬೈಕ್ ಚಲಾಯಿಸಿದ್ದರೂ ಅವಘಡ ಸಂಭವಿಸುತ್ತಿರಲಿಲ್ಲ’ ಎಂದೂ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.