ಭಾನುವಾರ, ಜೂನ್ 20, 2021
28 °C

ಸಿ.ಡಿ.ಪ್ರಕರಣ: ವೈರಲ್ ಆದ ಆಡಿಯೊದಲ್ಲಿರುವುದೇನು? ಇಲ್ಲಿದೆ ಪೂರ್ಣಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿ.ಡಿ.ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ತನ್ನ ಕುಟುಂಬದವರ ಜತೆ ಮಾತನಾಡಿದ್ದು ಎನ್ನಲಾದ 6.59 ನಿಮಿಷದ ಆಡಿಯೊ ತುಣುಕು ಶುಕ್ರವಾರ ಬಹಿರಂಗಗೊಂಡಿದೆ.

ಈ ಆಡಿಯೊದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಹೆಸರು ಪ್ರಸ್ತಾಪವಾಗಿದೆ. ಅದರ ಪೂರ್ಣ ಪಾಠ ಇಲ್ಲಿದೆ.

ಯುವತಿಯ ತಮ್ಮ: ಏನ್‌ ಮಾಡಕ್ಕ ಹತ್ತಿದ್ದಿ?

ಯುವತಿ: ಇಲ್ಲೇ ನಾನು, ಆಕಾಶ್‌ ಇದ್ದೀವಿ.

ತಮ್ಮ: ಊಟ...?

ಯುವತಿ: ಊಟ ಆಯ್ತಲೇಪ್ಪಾ. ಚಿನ್ನಿ ನಿನ್ನ ಮೇಲೆ ಆಣಿ, ನಮ್ಮ ಮಮ್ಮಿ ಮೇಲೆ ಆಣಿ, ನಾನು ನಂಬುವ ಕೃಷ್ಣನ ಮೇಲೆ ಆಣಿ, ಅದು ನಾನಲ್ಲ. ನೀ ಆದರೂ ನನ್ನ ನಂಬಲೇ ಪಾ, ಯಾರೂ ನನ್ನ ನಂಬ್ತಿಲ್ಲ.

ತಮ್ಮ: ನಂಬಿದೀನಿಲೇಪ್ಪಾ

ಯುವತಿ: ಊಟ ಆಯ್ತು. ನ್ಯೂಸ್‌ನಾಗ ಅದೆಲ್ಲ ಏನ್‌ ತೋರ್ಸಾ ಹತ್ತೆರಾ ಅದೆಲ್ಲ ಗ್ರಾಫಿಕ್ಸ್‌ ಅದಾ ಚಿನ್ನಿ.

ತಮ್ಮ: ಗ್ರಾಫಿಕ್ಸಾ?

ಯುವತಿ: ಲೇಪಾ ನಾ ಯಾಕ್‌ ಅಂತಾ ಕೆಲ್ಸಕ್ ಹೋಕ್ಕೀನಿ ಹೇಳು? ಒಂದ್‌ ಸ್ವಲ್ಪ ನೀನೇ ಯೋಚ್ನೆ ಮಾಡು.

ತಮ್ಮ: ನಿಂದೆಲ್ಲ ವಾಯ್ಸ್‌ ಐತಲ್ಲ? ಆಡಿಯೊ ಎಲ್ಲ ಇದೆಯಲ್ಲ? ಬಿಯರ್‌ ಕುಡಿತಿಯಾ? ಅದು ಕುಡಿತಿಯಾ? ಎಲ್ಲ ಕೇಳ್ಯಾನಾ?

ಯುವತಿ: ಲೇ ಒಲ್ಲೆಪ್ಪಾ. ನಾ ವಾಯ್ಸ್‌ ಕೊಟ್ಟಿದ್ದು. ಬೇರೆ ಹುಡ್ಗಿ ಮಾತಾಡಿದ್ದು ವಿತ್‌ ವಿಡಿಯೊ ನಿಂಗೇನೋ ನಾ ಕಳಿಸ್ತೀನಿ ಇರು.

ಇದನ್ನೂ ಓದಿ... ಸಿ‌.ಡಿ.ಪ್ರಕರಣ: ಡಿಕೆಶಿ ಹೆಸರು ಪ್ರಸ್ತಾಪ, ವಿಡಿಯೊ ನನ್ನದಲ್ಲ ಎಂದ ಯುವತಿಯ ಆಡಿಯೊ

ತಮ್ಮ: ಕಳ್ಸ್ ನಮಗಾ

ಯುವತಿ: ಅವರು ಬರ್ಲಿ ತಡಿ. ನನ್ನ ಕಡೆ ಯಾವುದೂ ವಿಡಿಯೊ ಇಲ್ಲ. ಡಿ.ಕೆ. ಶಿವಕುಮಾರ್‌ದು ಯಾರೋ ಬರಾ ಹತ್ತಾರಾ. ಅವ್ರು ಎಲ್ಲ ಬಂದ ಮ್ಯಾಲೆ ಮಾತಾಡಿ ಕಳ್ಸ್‌ತೀನಿ.

ತಮ್ಮ: ಯಾಕ್‌ ಬೇಕ್‌ ಲೇ. ಶಿವಕುಮಾರ್‌, ಗಿವಕುಮಾರ್‌

ಮತ್ತೊಬ್ಬ ಯುವಕ: ಭಾಯಿ, ಭಾಯಿ, ಹಲೋ

ತಮ್ಮ: ಮೂರು ಹೊತ್ತು ಊಟ ಮಾಡೋನಾ ದಿವಸಕ್ಕೆ ಸಾಕು.

ಮತ್ತೊಬ್ಬ ಯುವಕ: ಭಾಯಿ ಟೆನ್ಷನ್ ತಗೋಬೇಡ, ಆರಾಮ್‌ ಇರು. ನಾವೀಗ ಅಲ್ಲೇ ಬಂದಿದೀವಿ. ನಿಂಗ್‌ ಹೇಳುದ್ಲಲ್ಲಾ ಯಾರೋ ಹೊಂಟರಾ ಅಂತಾ. ಅವರೇ ಯಾರ, ಒಂದು ಅರ್ಧ ಗಂಟೆ ಅವ್ರು ಬರ್ತಾರ. ನಿಂಗ್‌ ಫೋನ್‌ ಮಾಡ್ತೀನಿ ನಾನು. ಆಯ್ತು.

ತಮ್ಮ: ಬ್ರೋ ಪ್ಲೀಸ್‌ ಬ್ರೋ, ಇಲ್ಲಿ ಮನ್ಯಾಗ ಎಲ್ಲ ಟೆನ್ಷನ್‌ ಐತಿ

ಇದನ್ನೂ ಓದಿ... ರಮೇಶ ಜಾರಕಿಹೊಳಿ ವಿರುದ್ಧ ಎಫ್ಐಆರ್: ಲೈಂಗಿಕ ದೌರ್ಜನ್ಯ ದೂರು ದಾಖಲು

ಮತ್ತೊಬ್ಬ ಯುವಕ: ಟೆನ್ಷನ್‌ ಮಾಡ್ಕೋಬೇಡ

ತಮ್ಮ: ಲೇ ಅದು ನಾಳೆ ಸ್ಟೇಟ್‌ಮೆಂಟ್‌ ಕೊಡು ಅಂತಾರಾ:

ಯುವತಿ: ಲೇ ಅದೆಲ್ಲ ನಾನ್‌ ಹೋಗಲ್ಲಾ ಅಲ್ಲೀತನ.

ಮತ್ತೊಬ್ಬ ಯುವಕ: ಅಲ್ಲೀತನ ಹೋಗಲ್ಲ ಭಾಯಿ, ನೀನ್‌ ಟೆನ್ಷನ್‌ ಮಾಡ್ಕೋಬೇಡ.

ತಮ್ಮ: ಇಲ್ಲಾ ಬ್ರೋ, ನಾಳೆ ಕೊಡ್ಬೇಕಾಗುತ್ತೆ. ನಾಳೆ ಅಂವ ರಾಜೀನಾಮೆ ಕೊಡ್ಬೇಕ್‌ ಅಲ್ಲಿ.

ಯುವತಿ: ನಾನಂತೂ ಅದೆಲ್ಲ ಇಲ್ಲಾ

ತಮ್ಮ: ಮತ್‌ ನೀ ಮೀಡಿಯಾದಾಗೆ ಎಲ್ಲ ಫೋನ್‌ ಹಚ್ಚಿ ಮಾತಾಡಿದ್ಯಲ್ಲ?

ಮತ್ತೊಬ್ಬ ಯುವಕ: ಮೀಡಿಯಾದಾಗ್‌ ಫೋನ್‌ ಮಾಡಿದ್ ಅಲ್ಲ ಭಾಯಿ.

ಯುವತಿ: ಮೀಡಿಯಾಕ್ಕ್ ಫೋನ್‌ ಮಾಡಿದ್ದ್ ಅಲ್ಲ ಅದು. ಅವನ ಸರಿ ಯಾರೋ ಮಾತಾಡಿರೋದು, ವಾಯ್ಸ್‌ ನಂದು ಕೊಟ್ಟಿರೋದು. ಮಾಡ್ಯುಲೇಷನ್‌ ಮಾಡೋಕ್ ಬರ್ತೈತಿ ವಾಯ್ಸ್‌. ಮಾಡ್ಯುಲೇಷನ್‌ ವಾಯ್ಸ್‌ ಅದು ಅಷ್ಟೇ. ನಾನು ಎಲ್ಲೂ ಬರೋಲ್ಲ. ದಟ್‌ ಈಸ್‌ ನಾಟ್‌ ಮಿ. ನನ್ಗಿ ಯಾರ್‌ ಅಂತಾನೂ ಗೊತ್ತಿಲ್ಲ.

ಇದನ್ನೂ ಓದಿ... ಸಿಡಿ ಪ್ರಕರಣದ ಷಡ್ಯಂತ್ರ ಕುರಿತು ಬೆಚ್ಚಿ ಬೀಳಿಸುವ ಮಾಹಿತಿ ಸಿಕ್ಕಿದೆ: ಜಾರಕಿಹೊಳಿ

ತಮ್ಮ: ಹೊರಗ್‌ ಎಲ್ಲೂ ಅಡ್ಯಾಡ್‌ಬಡಾ ಲೇ.

ಯುವತಿ: ಇಲ್ಲ ಇಲ್ಲ ಎಲ್ಲೂ ಇಲ್ಲ. ಜಸ್ಟ್‌ ಏನೂ ಇಲ್ಲೇ ಬಂದೀವಿ, ಅವ್ರ್‌ ಬರ್ತಾರಾ, ಅವ್ರ್‌ ಜತೆ

ತಮ್ಮ: ಲೇ... ಮ್ಯಾಟ್ರು ಭಾಳಾ ಕೆಟ್ಟ್‌ ಸೀರಿಯಸ್‌ ಐತಿ. ನಾಳೆ ಅವ್ನ್ ಶಾಸಕ. ಅವ್ನು ನಾಳೆ ರಾಜೀನಾಮೆ ಕೊಡ್ಬೇಕಂತೆ.

ಯುವತಿ: ನಾನೂ ಆಕಾಶ್‌ ಇಬ್ರೂ ಹೊಂಟೀವಿ. ನನ್‌ ಜೊತೆ ಆಕಾಶ್‌ ಇರ್ತಾನಾ, ಅಷ್ಟರೆ ನಂಬ್ತಿ.

ಯುವತಿ: ಮಮ್ಮಿ ನೀ ಆರೆ ನನ್‌ ನಂಬೇ ಮಮ್ಮಿ.

ತಾಯಿ: ನಂಬೀನಾ. ನಾ ಇಷ್ಟು ದಿನ ನಂಬೀನೆ

ಯುವತಿ: ಆಕಾಶ್‌, ನನ್‌ ಫ್ರೆಂಡ್ಸ್‌ ಎಲ್ಲ ಸಪೋರ್ಟ್‌ ಮಾಡಾ ಹತ್ಯಾರಾ. ನೀವೇ ಮಾಡ್ತಿಲ್ಲ. ನಂಗ್‌ ಅಂಜ್ಕಿ ಬರಾ ಹತ್ಯಾದಾ.

ತಾಯಿ: ನಾನ್‌ ನಂಬೀನೆ ಬೆಂಗ್ಳೂರ್ನಾಗಾ ಬಿಟ್ಟೀನಿ. ನೀನ್‌ ಊರಿಗ್‌ ಬಂದ್‌ ಬಿಡು. ರಾಜಕೀಯದವ್ರ್ ಜತೆ ಹೋಗ್‌ಬ್ಯಾಡಾ ಅಂತ ನಾನ್‌ ಹೇಳಿರ್ಲಿಲ್ಲಾ?

ಇದನ್ನೂ ಓದಿ... ಸಿ.ಡಿ. ಪ್ರಕರಣ: ರಮೇಶ ಜಾರಕಿಹೊಳಿ ವಿರುದ್ಧ ಯುವತಿ ದೂರು –ಇಲ್ಲಿದೆ ವಿವರ

ಯುವತಿ: ನೀನ್‌ ತಲೆ ಕೆಡಿಸ್ಕೋಬೇಡ.

ತಾಯಿ: ನಿನ್‌ ಡ್ಯಾಡಿಗ್‌ ಹೇಳಿದ್ರೆ ಸತ್ತ್ ಹೋಕ್ಕಾನಾ.

ಯುವತಿ: ಡ್ಯಾಡಿಗ್‌ ಏನ್‌ ಹೇಳಿರಿ?

ತಾಯಿ: ಏನೂ ಗೊತ್ತಿಲ್ಲ, ನಾಳೆಗೆ ನ್ಯೂಸ್‌ ಏನಾರು ನೋಡಿದ್ರಾ ಗ್ಯಾರಂಟಿ ಸೂಸೈಡ್‌ ಕತೆಯಾ. ದಯವಿಟ್ಟು ನೀನ್‌ ಅದನ್‌ ಬಿಟ್ಟೇ ಊರಿಗ್‌ ಬಂದ್‌ ಬಿಡು.

ತಮ್ಮ: ಅಂವ ಬಂದು ಎಲ್ಲ ಫುಲ್‌ ವಿಡಿಯೊ ತೋರ್ಸಿದಾ. ನಿಂದೆಲ್ಲ ಫೇಸ್‌ ಕ್ಲಿಯರ್‌, ನೀ ಮಾತಾಡೋದು ಎಲ್ಲ ಐತಿ ಅಲ್ಲಿ.

ಯುವತಿ: ಲೇ ಅದು ನಾ ಅಲ್ಲಪ್ಪಾ. ಅದೆಲ್ಲ ಗ್ರಾಫಿಕ್ಸ್‌.

ತಮ್ಮ: ಏನ್‌ ಗ್ರಾಫಿಕ್ಸ್‌? ಯಾರಾರು ನಂಬ್ತಾರಾ?

ಯುವತಿ: ಆಯ್ತು ನಾ ಎಲ್ಲ ಕ್ಲಿಯರ್‌ ಮಾಡಿಸ್ತೀನಿ ಅವಾಗಾರ ನಂಬ್ತೀಯಾ?

ತಮ್ಮ: ನೀ ಈಗ್‌ ಯಾರ ಜೋಡಿ ಮಾತಾಡ್ತೀಯ?

ಯುವತಿ: ನಾನು ಡಿ.ಕೆ. ಶಿವಕುಮಾರ್‌ ಮನೆ ಬಳಿ ಬಂದೀನಿ.

ತಮ್ಮ: ಲೊಕೇಷನ್‌ ಎಲ್ಲ ಕಳ್ಸು ನಾಲ್ಕ್ ಜನ್ರಿಗೆ. ಇದು ಭಾಳಾ ಡೇಂಜರ್‌. ನಾಳೆ ಅವ್ರ್‌ ಸರ್ಕಾರ ಬೀಳಿಸ್ತಾರಾ, ಅವ್ರ್‌ ಅಷ್ಟೇನ್‌ ಈಸಿಯಾಗಿ ಬಿಡೊಲ್ಲ.

ಯುವತಿ: ಆಯ್ತು

ತಮ್ಮ: ಏನೇ ಡಿಸಿಷನ್‌ ತಗೊಳ್ಳೊದಾದ್ರೂ ಭಾಳಾ ಯೋಚ್ನೆ ಮಾಡು. ಸ್ಟೇಟ್ಮೆಂಟ್‌ಗೆ ಕರೆದರೆ ನೂರು ಸರಿ ಯೋಚ್ನೆ ಮಾಡು. ಅವನ ವಿರುದ್ಧ ಕೊಟ್ಟರೆ ಏನಾಗುತ್ತೆ? ಅವನ ಪರವಾಗಿ ಕೊಟ್ಟರೆ ಏನಾಗುತ್ತೆ? ಭಾಳಾ ಯೋಚನೆ ಮಾಡಿ ಕೊಡು.

ಇದನ್ನೂ ಓದಿ... ಸಿಡಿ ಪ್ರಕರಣದ ಷಡ್ಯಂತ್ರ ಕುರಿತು ಬೆಚ್ಚಿ ಬೀಳಿಸುವ ಮಾಹಿತಿ ಸಿಕ್ಕಿದೆ: ಜಾರಕಿಹೊಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು