ಬೆಂಗಳೂರು: ಡಿಸೆಂಬರ್ 15ರಂದು ನಡೆದ ಅಧಿವೇಶನದಲ್ಲಿ ಕರ್ತವ್ಯಲೋಪ ಎಸಗಿದ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿದ ಆರೋಪದ ಮೇಲೆ ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಶೋಕಾಸ್ ನೋಟಿಸ್ ನೀಡಿದ್ದಾರೆ.

ಬುಧವಾರವೇ ನೋಟಿಸ್ ನೀಡಿರುವ ಸಭಾಪತಿ, ದಾಖಲೆಗಳೊಂದಿಗೆ 48 ಗಂಟೆಗಳೊಳಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

‘ಡಿ.15ರಂದು ಕೋರಂ ಬೆಲ್ ಮುಗಿಯುವ ಮುನ್ನವೇ ಉಪ ಸಭಾಪತಿ ಪೀಠ ಏರಿದ್ದರು. ನಾನು ಸದನಕ್ಕೆ ಬರದಂತೆ ಬಾಗಿಲು ಮುಚ್ಚಿ ಅಡ್ಡಿಪಡಿಸಲಾಗಿತ್ತು. ನಿಯಮಬಾಹಿರವಾಗಿ ಸಭಾಪತಿಯವರ ಪೀಠ ಏರಿದ್ದ ಉಪ ಸಭಾಪತಿಯವರಿಗೆ ಸರಿಯಾಗಿ ಮಾಹಿತಿ ನೀಡದೆ ಸದನ ಮುಂದುವರಿಸುವ ಚಿತಾವಣೆಯಂತೆ ದಾಖಲೆಗಳನ್ನು ಒದಗಿಸಿರುವುದು ಸೇರಿದಂತೆ ನಿಮ್ಮ ಕರ್ತವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾದ ಹಲವು ಅಂಶಗಳನ್ನು ಗಮನಿಸಿದ್ದೇನೆ’ ಎಂದು ಸಭಾಪತಿ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ನಿಮ್ಮ ವರ್ತನೆಯು ವಿಧಾನಮಂಡಲದ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿದೆ. ನಿಯಮಬಾಹಿರ ನಡವಳಿಕೆ, ಕರ್ತವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ಮತ್ತು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಅಧಿಕಾರ ವ್ಯಾಪ್ತಿ ಮೀರಿರುವ ನಿಮ್ಮ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ಅಡಿಯಲ್ಲಿ ಏಕೆ ಕ್ರಮ ಜರುಗಿಸಬಾರದು’ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಡಿ.15ರಂದು ನಾನು ಸದನಕ್ಕೆ ಬರದಂತೆ ತಡೆದಿರುವುದು ಮತ್ತು ಕಲಾಪಗಳ ನಿಯಮಾವಳಿಗಳನ್ನು ಗಾಳಿಗೆ ತೂರಿ ವ್ಯತಿರಿಕ್ತವಾಗಿ ವರ್ತಿಸಿರುವ ಘಟನೆ ಕುರಿತು ಸಮೂಹ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಶತಮಾನದ ಇತಿಹಾಸವುಳ್ಳ ವಿಧಾನ ಪರಿಷತ್ತಿನ ಗೌರವ, ಘನತೆ ಮತ್ತು ಸಂಪ್ರದಾಯಕ್ಕೆ ಈ ಘಟನೆಯಿಂದ ಧಕ್ಕೆಯಾಗಿದೆ’ ಎಂದು ಸಭಾಪತಿ ಪತ್ರದಲ್ಲಿ ಹೇಳಿದ್ದಾರೆ.

‘ಸಾರ್ವಜನಿಕ ಚರ್ಚೆ, ಟೀಕೆ, ಪತ್ರಿಕಾ ಸಂಪಾದಕೀಯಗಳು, ಸದನದ ಹಿಂದಿನ ಸಭಾಪತಿಯವರ ಅಭಿಪ್ರಾಯಗಳಿಗೆ ಸದನದ ಮುಖ್ಯಸ್ಥನಾದ ನಾನು ನೈಜ ಸಂಗತಿಗಳ ಆಧಾರದಲ್ಲಿ ವಿವರಣೆ ನೀಡಬೇಕಿದೆ. ನಾನು ಸದನಕ್ಕೆ ಬಂದು ಕಲಾಪವನ್ನು ಮುಂದೂಡುವವರೆಗೆ ನನ್ನ ಅನುಪಸ್ಥಿತಿಯಲ್ಲಿ ಮತ್ತು ಕಲಾಪ ಮುಂದೂಡಿ ನಿರ್ಗಮಿಸಿದ ಬಳಿಕ ನಡೆದ ಘಟನಾವಳಿಗಳಿಗೆ ಸದನದಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿ ನೀವು ಉಪಸ್ಥಿತರಿದ್ದೀರಿ. ಆ ದಿನ ನಡೆದ ಎಲ್ಲ ಘಟನಾವಳಿಗಳ ಸಂಕ್ಷಿಪ್ತ ವರದಿಯನ್ನು ತಕ್ಷಣ ಸಲ್ಲಿಸಬೇಕು' ಎಂದು ಪತ್ರದಲ್ಲಿ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಪರಿಷತ್ ಕಾರ್ಯದರ್ಶಿ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿರುವ ಮತ್ತು ಡಿ.15ರ ಘಟನೆ ಕುರಿತು ವರದಿ ಸಲ್ಲಿಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸ್ವಗ್ರಾಮದಲ್ಲಿರುವ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು, ಈ ಸಂಬಂಧ ತಮಗೆ ಇನ್ನೂ ಮಾಹಿತಿ ಇಲ್ಲ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.