ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.3 ರಿಂದ 15 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

Last Updated 31 ಡಿಸೆಂಬರ್ 2021, 15:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿನ 15ರಿಂದ 18 ವರ್ಷದವರಿಗೆ ‘ಕೋವ್ಯಾಕ್ಸಿನ್’ ಲಸಿಕೆಯ ವಿತರಣೆ 2022ರ ಜ.3ರಿಂದ ಪ್ರಾರಂಭವಾಗಲಿದೆ. ಶಾಲಾ–ಕಾಲೇಜುಗಳಲ್ಲಿ ಲಸಿಕೆ ನೀಡಲು ಕೆಲವು ನಿಬಂಧನೆಗಳನ್ನು ವಿಧಿಸಿ ಮಾರ್ಗಸೂಚಿ ಹೊರಡಿಸಲಾಗಿದೆ.

ಲಸಿಕೆ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಸೂಚಿಸಿದ್ದಾರೆ.‌

ಪ್ರಮುಖ ನಿಬಂಧನೆಗಳು

*2007 ಹಾಗೂ ಅದಕ್ಕೂ ಮೊದಲು ಜನಿಸಿದವರು ಲಸಿಕೆ ಪಡೆಯಲು ಅರ್ಹರು.

*ಲಸಿಕೆ ನೀಡುವ ಆಂದೋಲನಕ್ಕೆ ಮುನ್ನ ಮಕ್ಕಳ ಪೋಷಕರಿಗೆ ವಿಶೇಷ ಜಾಗೃತಿ ಸಭೆಗಳನ್ನು ಏರ್ಪಡಿಸಬೇಕು. ಲಸಿಕೆಯ ಮಹತ್ವ ತಿಳಿಸಿ, ಗೊಂದಲ ನಿವಾರಿಸಬೇಕು.

*ಫಲಾನುಭವಿಗಳು ಸ್ವಂತ ದೂರವಾಣಿ ಸಂಖ್ಯೆ ಬಳಸಿ ಅಥವಾ ಕೋವಿನ್‌ ಪೋರ್ಟಲ್‌ನಲ್ಲಿ ಈಗಾಗಲೇ ನೋಂದಣಿ ಮಾಡಿರುವ ತಂದೆ–ತಾಯಿಯಅಕೌಂಟ್‌ ಮೂಲಕ ಲಸಿಕೆ ಪಡೆಯಬಹುದು. ಶಾಲೆಯ ಮುಖ್ಯೋಪಾಧ್ಯಾಯರ ದೂರವಾಣಿ ಸಂಖ್ಯೆ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು.

* ಶಾಲೆಯ ಗುರುತಿನ ಚೀಟಿ ಅಥವಾ ಆಧಾರ್‌ ಗುರುತಿನ ಚೀಟಿ ಹಾಜರುಪಡಿಸಬೇಕು.

* ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ಲಸಿಕೆ ನೀಡಲು ಪೋಷಕರ ಸಹಮತ ಅಗತ್ಯ. ಆರೋಗ್ಯ ಕೇಂದ್ರಗಳಲ್ಲಿಯೇ ವೈದ್ಯರಿಂದ ಮೇಲ್ವಿಚಾರಣೆ ನಡೆಸಬೇಕು.

* ಟಿಡಿ ಅಥವಾ ಇನ್ನಾವುದೇ ಲಸಿಕೆ ಪಡೆದಿದ್ದವರಿಗೆ 15 ದಿನಗಳ ನಂತರ ಕೋವ್ಯಾಕ್ಸಿನ್‌ ಲಸಿಕೆ ನೀಡಬೇಕು.

* ಶಿಕ್ಷಣ ಸಂಸ್ಥೆಗಳಲ್ಲಿ ಲಸಿಕೆ ಪಡೆಯದವರನ್ನು ಗುರುತಿಸಿ,ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಬೇಕು.

* ಲಸಿಕೆ ನೀಡಲು ಸಾಕಷ್ಟು ಸ್ಥಳಾವಕಾಶವಿರುವ, 3 ಕೊಠಡಿಗಳುಳ್ಳ ಶಾಲೆಗಳನ್ನು ಗುರುತಿಸಬೇಕು. ಅಲ್ಲಿ ಸೂಕ್ತ ಮೂಲಸೌಕರ್ಯ ಇರಬೇಕು.

* ಶಾಲೆಗಳಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ ಮಕ್ಕಳಿಗೆ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಬೇಕು.

* ಖಾಸಗಿ ಶಾಲೆಗಳು ಇಷ್ಟಪಟ್ಟಲ್ಲಿಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಲಸಿಕಾ ಅಭಿಯಾನ ಕೈಗೊಳ್ಳಲು ಅವಕಾಶ ನೀಡಬಹುದು.

ಮೂರನೇ ಡೋಸ್‌ಗೆ ಸಂದೇಶ
ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಅಸ್ವಸ್ಥತೆ ಹೊಂದಿದ 60 ವರ್ಷ ಮೇಲ್ಪಟ್ಟವರು ಈಗಾಗಲೇ ಅಸ್ತಿತ್ವದಲ್ಲಿ ಇರುವ ತಮ್ಮ ಕೋವಿನ್ ಅಕೌಂಟ್ ಮೂಲಕ ಲಸಿಕೆ ಪಡೆಯಬಹುದು. ಮತ್ತೊಂದು ಡೋಸ್ ಪಡೆಯಲು ಅರ್ಹರಾದವರಿಗೆ ಕೋವಿನ್ ಪೋರ್ಟಲ್‌ ಮೂಲಕ ಸಂದೇಶ ರವಾನೆಯಾಗುತ್ತದೆ. ಹೆಸರು ಮತ್ತು ಸಮಯವನ್ನು ಆನ್‌ಲೈನ್ ಅಥವಾ ಸ್ಥಳದಲ್ಲಿನೋಂದಾಯಿಸಲು ಅವಕಾಶ ಇರಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT