ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌–ರಷ್ಯಾ ಸಂಘರ್ಷ: ಬೆಂಗಳೂರಿಗೆ ಬಂದಿಳಿದ 12 ವಿದ್ಯಾರ್ಥಿಗಳು

Last Updated 27 ಫೆಬ್ರುವರಿ 2022, 20:54 IST
ಅಕ್ಷರ ಗಾತ್ರ

ದೇವನಹಳ್ಳಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ತೊಂದರೆಗೆ ಸಿಲುಕಿದ್ದ ರಾಜ್ಯದ 12 ವಿದ್ಯಾರ್ಥಿಗಳ ಮೊದಲ ತಂಡಭಾನುವಾರ ಬೆಳಿಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಉಕ್ರೇನ್‌ನಲ್ಲಿದ್ದ 219 ಭಾರತೀಯ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಕರೆತರಲಾಯಿತು. ಶನಿವಾರ ರಾತ್ರಿ ಮುಂಬೈಗೆಬಂದಿಳಿದ ರಾಜ್ಯದ ವಿದ್ಯಾರ್ಥಿಗಳು ಬೆಳಿಗ್ಗೆ ಬೆಂಗಳೂರಿಗೆ ಬಂದರು.

ವಾರದಿಂದ ಆತಂಕದಲ್ಲಿ ಕಾಲಕಳೆಯುತ್ತಿದ್ದ ಪೋಷಕರು, ಮಕ್ಕಳನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರು.

ತ್ರಿವರ್ಣ ಧ್ವಜ ಹಿಡಿದು ‘ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತಾ ಬಂದ ವಿದ್ಯಾರ್ಥಿಗಳು ತವರಿಗೆ ಕಾಲಿಡುತ್ತಲೇ ಭಾವುಕರಾದರು. ಪೋಷಕರನ್ನು ಕಂಡ ಅವರ ಕಣ್ಣಾಲಿಗಳು ತೇವಗೊಂಡವು.

ಪೋಷಕರು ಓಡೋಡಿ ಹೋಗಿ ಮಕ್ಕಳನ್ನು ಬಿಗಿದಪ್ಪಿ, ಮುದ್ದಾಡಿದರು. ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರು, ಅಧಿಕಾರಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾದರು. ಸರ್ಕಾರದ ಪರವಾಗಿ ಸಚಿವ ಆರ್‌. ಅಶೋಕ, ಐಎಎಸ್‌ ಅಧಿಕಾರಿ ಡಾ. ಆರ್‌. ಮನೋಜ್‌ ಅವರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT