ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋಡ್ಸೆಯೂ ಪಠ್ಯಪುಸ್ತಕ ಸೇರಬಹುದು’ -ಸರ್ಕಾರಕ್ಕೆ ಬಹಿರಂಗ ಪತ್ರ

ಪಠ್ಯ ಪುಸ್ತಕ ಮರು ಪರಿಷ್ಕರಣೆಗೆ ಆಕ್ಷೇಪ: ಸರ್ಕಾರಕ್ಕೆ ಬಹಿರಂಗ ಪತ್ರ
Last Updated 20 ಮೇ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿಕ್ಷಣ ಇಲಾಖೆ ಪಠ್ಯಪುಸ್ತಕ ಮರು ಪರಿಷ್ಕರಣೆ ಪ್ರಕ್ರಿಯೆ ಪೂರ್ವಗ್ರಹಪೀಡಿತವಾಗಿದೆ. ಇದೇ ಪದ್ಧತಿ ಮುಂದುವರಿದರೆ ಮುಂದೆ ಗೋಡ್ಸೆ ಕುರಿತ ಅಧ್ಯಾಯವು ಪಠ್ಯಪುಸ್ತಕಗಳಲ್ಲಿ ಸೇರಿಸುವ ದಿನಗಳು ದೂರವಿಲ್ಲ’ ಎಂದು ಚಿಂತಕರು, ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿರುವ ಅವರು, ‘ಪಠ್ಯಪುಸ್ತಕ ರಚನೆಯಲ್ಲಿ ಯಾವುದೇ ರೀತಿಯ ಪಾರದರ್ಶಕತೆ ಕಂಡು ಬಂದಿಲ್ಲ’ ಎಂದು ತಿಳಿಸಿದ್ದಾರೆ.

‘ಆರ್‌ಎಸ್‌ಎಸ್‌ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದನ್ನು ಸಮರ್ಥಿಸಿಕೊಂಡಿರುವ ಸಚಿವರು, ಜವಾಬ್ದಾರಿಯುತ ಮತ್ತು ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಿಲ್ಲಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಉಡಾಫೆಯಿಂದ ಮಾತನಾಡಿದ್ದಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಪಠ್ಯಪುಸ್ತಕದಲ್ಲಿ ಬದಲಾವಣೆ ಮಾಡಬಾರದು’ ಎಂದು ಆಗ್ರಹಿಸಿದ್ದಾರೆ.

‘ಶಿಕ್ಷಣ ತಜ್ಞರಲ್ಲದ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಸಂಶೋಧನೆ ಕೈಗೊಳ್ಳದ ರೋಹಿತ್‌ ಚಕ್ರತೀರ್ಥ ಅವರನ್ನು ಯಾವ ಮಾನದಂಡದಲ್ಲಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ? ಈ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರ ನೀಡಿಲ್ಲ. ಈ ಸಮಿತಿ ಏಕಪಕ್ಷೀಯವಾಗಿ 10ನೇ ತರಗತಿಯ ಪಠ್ಯ ಪರಿಷ್ಕರಿಸಲಾಗಿದೆ’ ಎಂದಿದ್ದಾರೆ.

‘ಪಠ್ಯಪುಸ್ತಕಗಳ ರಚನೆ ಮತ್ತು ಪರಿಷ್ಕರಣೆ ಶಿಕ್ಷಣ ತಜ್ಞರ ಮೂಲಕವೇ ನಡೆಯಬೇಕು. ಚುನಾವಣಾ ಆಯೋಗದಂತೆ ಪಠ್ಯ ಪುಸ್ತಕಗಳ ರಚನೆ ಮತ್ತು ಪರಿಶೀಲನೆಗೆ ಒಂದು ಸ್ವಾಯತ್ತ ಆಯೋಗ ರಚಿಸಬೇಕು ’ ಎಂದು ಸಲಹೆ ನೀಡಿದ್ದಾರೆ.

ಈ ಪತ್ರಕ್ಕೆ ಕೆ.ಮರುಳಸಿದ್ದಪ್ಪ, ವಿಜಯಾ, ರಾಜೇಂದ್ರ ಚೆನ್ನಿ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಟಿ.ಆರ್.ಚಂದ್ರಶೇಖರ್, ಹಿ.ಶಿ.ರಾಮಚಂದ್ರೇಗೌಡ, ವಿ.ಪಿ. ನಿರಂಜನಾರಾಧ್ಯ, ಕಾಳೇಗೌಡ ನಾಗವಾರ, ಕುಂ.ವೀರಭದ್ರಪ್ಪ, ರಹಮತ್ ತರಿಕೆರೆ, ವಸಂತ ಬನ್ನಾಡಿ ಸೇರಿದಂತೆ 71 ಮಂದಿ ಒಪ್ಪಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT