ಬುಧವಾರ, ಸೆಪ್ಟೆಂಬರ್ 23, 2020
26 °C
ಎರಡು ದಿನಗಳಲ್ಲೇ ಜಲಾಶಯಕ್ಕೆ ಹರಿದು ಬಂತು ಆರುವರೆ ಅಡಿ ನೀರು

ಹೊಸಪೇಟೆ: ಮತ್ತಷ್ಟು ಹೆಚ್ಚಿದ ತುಂಗಭದ್ರಾ ಒಳಹರಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಸತತ ಹೆಚ್ಚಾಗುತ್ತಲೇ ಇದೆ.

ಭಾನುವಾರ 1,08,915 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಶನಿವಾರ 1,01,002 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಏಳುವರೆ ಸಾವಿರ ಕ್ಯುಸೆಕ್‌ ಒಳಹರಿವು ಹೆಚ್ಚಾಗಿದೆ. ಅಷ್ಟೇ ಅಲ್ಲ, ಕಳೆದ 24 ಗಂಟೆಗಳಲ್ಲಿ ಜಲಾಶಯಕ್ಕೆ ಮೂರು ಅಡಿ ನೀರು ಹರಿದು ಬಂದಿದೆ. ಅದಕ್ಕೂ ಹಿಂದಿನ ದಿನ ಮೂರುವರೆ ಅಡಿ ನೀರು ಬಂದಿತ್ತು. ಎರಡು ದಿನಗಳಲ್ಲೇ ಆರುವರೆ ಅಡಿ ನೀರು ಅಣೆಕಟ್ಟೆಗೆ ಬಂದಿದೆ.

1,633 ಅಡಿ (101 ಟಿಎಂಸಿ) ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಭಾನುವಾರ 1,621.05 ಅಡಿ (63.102 ಟಿಎಂಸಿ) ನೀರಿನ ಸಂಗ್ರಹವಿದೆ. 9,357 ಕ್ಯುಸೆಕ್‌ ನೀರು ಕಾಲುವೆಗಳಿಗೆ ಹರಿಸಲಾಗುತ್ತಿದೆ.

ತಗ್ಗಿದ ತುಂಗಾ ಹೊರಹರಿವು

ಕಳೆದ ಎರಡು ದಿನಗಳಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಶಿವಮೊಗ್ಗದ ತುಂಗಾ ಜಲಾಶಯದಿಂದ ಹೊರ ಬಿಡಲಾಗುತ್ತಿತ್ತು. ಭಾನುವಾರ ಅದರ ಪ್ರಮಾಣ ತಗ್ಗಿದ್ದು, 70,876 ಕ್ಯುಸೆಕ್‌ ನೀರು ಸದ್ಯ ಹೊರಬಿಡಲಾಗುತ್ತಿದೆ.

‘ಮಲೆನಾಡಿನ ಬಹುತೇಕ ಕೆರೆ, ಕಟ್ಟೆ, ನದಿ ಹಾಗೂ ಜಲಾಶಯಗಳು ತುಂಬಿವೆ. ಆದರೆ, ಕೆಲವು ಭಾಗಗಳಲ್ಲಿ ಮಳೆ ಸ್ವಲ್ಪ ತಗ್ಗಿದೆ.  ತುಂಗಾ ಜಲಾಶಯದ ಒಳಹರಿವು ಸ್ವಲ್ಪ ತಗ್ಗಿದ್ದು, ಸಹಜವಾಗಿಯೇ ಹೊರಹರಿವು ಕಡಿಮೆಯಾಗಿದೆ. ಆದರೆ, ತುಂಗಭದ್ರಾ ಜಲಾಶಯಕ್ಕೆ ನಿತ್ಯ ಸರಾಸರಿ 8ರಿಂದ 9 ಟಿಎಂಸಿ ಅಡಿ ನೀರು ಹರಿದು ಬರುತ್ತಿದೆ. ಇನ್ನೂ ಕೆಲವು ದಿನಗಳ ವರೆಗೆ ಇದೇ ರೀತಿ ಒಳಹರಿವು ಇರಲಿದ್ದು, ನಾಲ್ಕರಿಂದ ಐದು ದಿನಗಳಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗುವುದು ಖಚಿತ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು