ಬುಧವಾರ, ಜುಲೈ 6, 2022
21 °C

ನಾಯಕನಹಟ್ಟಿ: ₹16 ಲಕ್ಷಕ್ಕೆ ಮುಕ್ತಿ ಬಾವುಟ ಹರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕನಹಟ್ಟಿ: ಪ್ರತಿ ವರ್ಷದಂತೆ ಈ ವರ್ಷವೂ ಗುರು ತಿಪ್ಪೇರುದ್ರಸ್ವಾಮಿಯ ವಾರ್ಷಿಕ ರಥೋತ್ಸವದಲ್ಲಿ ದೇವರ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು. ಚಳ್ಳಕೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಟಿ. ಪ್ರಕಾಶ್ ಅವರು ₹ 16 ಲಕ್ಷಕ್ಕೆ ಬಾವುಟವನ್ನು ಹರಾಜಿನಲ್ಲಿ ಪಡೆದರು.

ಕಳೆದ ವರ್ಷ ನಾಯಕನಹಟ್ಟಿ ವಕೀಲ ಎಸ್. ಉಮಾಪತಿ ಎಂಬುವರು ₹ 21 ಲಕ್ಷಕ್ಕೆ ಬಾವುಟವನ್ನು ಪಡೆದಿದ್ದರು. ಸಂಪ್ರದಾಯದಂತೆ ರಥ ಎಳೆಯುವ ಮೊದಲು ಮುಕ್ತಿ ಬಾವುಟ ಹರಾಜು ಮಾಡಲಾಗುತ್ತದೆ.

ಸ್ಥಳೀಯ ಮುಖಂಡರು ₹ 5 ಲಕ್ಷಕ್ಕೆ ಹರಾಜು ಕೂಗಿದ್ದರು. ಜಾತ್ರೆಯಲ್ಲಿ ಮುಕ್ತಿ ಬಾವುಟ ಪಡೆದರೆ ಒಳ್ಳೆಯದಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು