ಶನಿವಾರ, ಮೇ 8, 2021
26 °C
ಉಷ್ಣಾಂಶ ಅಲ್ಪ ಇಳಿಕೆ: ಕಾಫಿ, ಅಡಿಕೆ ಫಸಲಿಗೆ ಅನುಕೂಲ

ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ವಿವಿಧೆಡೆ ಶುಕ್ರವಾರ ಮಳೆಯಾಗಿದ್ದು, ಬಿಸಿಲಿನಿಂದ ತತ್ತರಿಸಿದ ಜನತೆಗೆ ತಂಪೆರೆದಿದೆ.

ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಗದಗ, ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ಸಾಯಂಕಾಲ ಗುಡುಗು ಸಹಿತ ಮಳೆಯಾಗಿದೆ.

ಬೆಳಗಾವಿ ನಗರ ಮತ್ತು ರಾಮದುರ್ಗ, ಅಥಣಿ, ಗೋಕಾಕದಲ್ಲಿ ಕೆಲ ಕಾಲ ಜೋರು ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಯಿತು. ವಿಜಯಪುರ ಜಿಲ್ಲೆಯ ಹೊರ್ತಿ, ತಿಕೋಟಾ, ಕಲಕೇರಿ, ಸಿಂದಗಿಯಲ್ಲಿಯೂ ಗುಡುಗು, ಸಿಡಿಲಿನ ಮಳೆ ಬಿದ್ದಿದೆ.

ಹುಬ್ಬಳ್ಳಿ, ಧಾರವಾಡ ನಗರದಲ್ಲಿ ಕೆಲ ಸಮಯ ಧಾರಾಕಾರ ಮಳೆಯಾಗಿದೆ. ಹಾವೇರಿಯ ಹಾನಗಲ್‌ ಹಾಗೂ ಗದಗದಲ್ಲಿಯೂ ಮಳೆಯಾಗಿದೆ.

ಕಳಸ ಪಟ್ಟಣ ಮತ್ತು ಆಸುಪಾಸಿನ ಪ್ರದೇಶದಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿಯಿತು. ಎರಡು ದಿನಗಳಿಂದ ಮೋಡ ಕವಿದರೂ, ಮಳೆಯಾಗದೇ ರೈತರು ನಿರಾಶರಾಗಿದ್ದರು.

ಸಂಜೆ 4 ಗಂಟೆಗೆ ಭಾರಿ ಗಾಳಿ ಜೊತೆಗೆ ಸುಮಾರು ಅರ್ಧಗಂಟೆ ಉತ್ತಮ ಮಳೆಯಾಯಿತು. ತೇವಾಂಶದ ಕೊರತೆಯಿಂದ ಬಳಲುತ್ತಿದ್ದ ಅಡಿಕೆ, ಕಾಫಿ ಫಸಲಿಗೆ ಈ ಮಳೆ ಅನುಕೂಲವಾಗಿದೆ. ಗರಿಷ್ಠ ಪ್ರಮಾಣಕ್ಕೆ ಏರಿದ್ದ ಹಗಲಿನ ಉಷ್ಣಾಂಶ ಕೂಡ ಈ ಮಳೆಯಿಂದ ಕುಸಿದಿದೆ.

ಕಲಬುರ್ಗಿ ನಗರವೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ತುಂತುರು ಮಳೆ ಸುರಿಯಿತು.

ಒಂದು ವಾರದಿಂದ ನಗರದ ಗರಿಷ್ಠ ಉಷ್ಣಾಂಶ 40ರಿಂದ 42 ಡಿಗ್ರಿ ದಾಟಿದೆ. ಬಿಸಿಲಿನ ತಾಪಕ್ಕೆ ತತ್ತರಿಸಿದ ಜನರಿಗೆ ಶುಕ್ರವಾರ ಸುರಿದ ಮಳೆ ತುಸು ತಂಪೆರೆಯಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು