ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧಕ ರಾಜೇಗೌಡರ ಲೇಖನವೊಂದರಲ್ಲಿ ಉರಿಗೌಡ, ದೊಡ್ಡ ನಂಜೇಗೌಡರ ಹೆಸರು ಪ್ರಸ್ತಾಪ

ಸಂಶೋಧಕ ಹ.ಕ.ರಾಜೇಗೌಡರ ಲೇಖನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Last Updated 18 ಮಾರ್ಚ್ 2023, 13:46 IST
ಅಕ್ಷರ ಗಾತ್ರ

ಮಂಡ್ಯ: ಸಂಶೋಧಕ ಹ.ಕ.ರಾಜೇಗೌಡರು ಬರೆದಿರುವ ಲೇಖನವೊಂದರಲ್ಲಿ ಉರಿಗೌಡ, ದೊಡ್ಡ ನಂಜೇಗೌಡರ ಹೆಸರು ಪ್ರಸ್ತಾಪಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಂಡ್ಯ ಜಿಲ್ಲೆ ರಚನೆಯಾಗಿ 50 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಡಾ.ದೇಜಗೌ ಸಂಪಾದಕತ್ವದಲ್ಲಿ‘ಸುವರ್ಣ ಮಂಡ್ಯ’ ಸ್ಮರಣ ಸಂಚಿಕೆ ಪ್ರಕಟವಾಗಿದೆ. ಈ ಪುಸ್ತಕದಲ್ಲಿ ಹ.ಕ.ರಾಜೇಗೌಡರು ‘ಮಂಡ್ಯ ಐವತ್ತು; ಒಂದು ಪಕ್ಷ ನೋಟ’ ಲೇಖನ ಬರೆದಿದ್ದಾರೆ.

‘ದೊಡ್ಡನಂಜೇಗೌಡ, ಉರಿಗೌಡ ಮುಂತಾದವರು ಹೈದರಾಲಿ, ಟಿಪ್ಪು ವಿರುದ್ಧ ಸೆಟೆದು ನಿಂತವರು. ಇದಕ್ಕೆ ಟಿಪ್ಪುವಿನ ಧಾರ್ಮಿಕ ಹಾಗೂ ಭಾಷಾ ನೀತಿಯೂ ಕಾರಣವಿರಬೇಕು. ಟಿಪ್ಪು ಅಡಳಿತದ ಎಲ್ಲಾ ಅಂಗಗಳಲ್ಲಿಯೂ ಬರಿಯ ಮುಸಲ್ಮಾನರನ್ನೇ ನೇಮಿಸಿದುದು, ಪರ್ಷಿಯನ್‌ ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಣೆ ಮಾಡಿದ್ದು ಈ ನೆಲದ ಜನರಲ್ಲಿ ಅಭದ್ರತೆ ಮತ್ತು ಅನುಮಾನಗಳನ್ನು ಬಿತ್ತಿದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದ ಅನೇಕ ಗೌಡರುಗಳು ಟಿಪ್ಪು ವಿರುದ್ಧ ತಿರುಗಿಬಿದ್ದ ಮತ್ತು ಇಂಗ್ಲೀಷರಿಗೆ ಬೆಂಬಲ ಸೂಚಿಸಿದ ಉದಾರಣೆಗಳಿವೆ’ ಎಂಬ ಉಲ್ಲೇಖ ಲೇಖನದಲ್ಲಿದೆ.

ಆದರೆ, ಇಡೀ ಲೇಖನದಲ್ಲಿ ಉರಿಗೌಡ, ದೊಡ್ಡನಂಜೇಗೌಡರೇ ಟಿಪ್ಪುವನ್ನು ಕೊಂದರು ಎಂಬ ಪ್ರಸ್ತಾಪವಿಲ್ಲ. ‘ಉರಿಗೌಡ, ದೊಡ್ಡನಂಜೇಗೌಡರು ಟಿಪ್ಪು ಕೊಂದಿರುವುದಕ್ಕೆ ಇದೇ ಸಾಕ್ಷಿ’ ಎಂಬಂತೆ ಈ ಲೇಖನ ಬಿಂಬಿತವಾಗುತ್ತಿದ್ದು ಚರ್ಚೆಗೆ ಕಾರಣವಾಗಿದ್ದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT