ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ಮೂರನೇ ದಿನ ಪ್ರಯಾಣಿಕರಿಗೆ ಹೆಚ್ಚಾಗಿ ಬಿಸಿ ಮುಟ್ಟುವ ಸಾಧ್ಯತೆ ಇದೆ. ಯುಗಾದಿ ಹಿಂದಿನ ಮತ್ತು ಮುಂದಿನ ದಿನಗಳಲ್ಲಿ ಸಾಲು–ಸಾಲು ರಜೆಗಳಿದ್ದು, ಊರಿಗೆ ಹೋಗುವವರು ಶುಕ್ರವಾರ ಮತ್ತು ಶನಿವಾರ ಪರದಾಡುವ ಸಾಧ್ಯತೆ ಇದೆ.

ಏ.13 ರಂದು ಯುಗಾದಿ ಇದ್ದರೂ ಹಿಂದಿನ ಎರಡು ದಿನ ಮತ್ತು ಮುಂದಿನ ಒಂದು ದಿನ ಸರ್ಕಾರಿ ರಜೆಗಳಿವೆ. ಏ.10 ರಂದು ಎರಡನೇ ಶನಿವಾರ, ಭಾನುವಾರ ರಜೆಗಳಿವೆ. ಮಧ್ಯದಲ್ಲಿ ಸೋಮವಾರ ರಜೆ ಇಲ್ಲ. ಮಂಗಳವಾರ ಯುಗಾದಿ ಮತ್ತು ಬುಧವಾರ ಅಂಬೇಡ್ಕರ್ ಜಯಂತಿ ರಜೆ ಇದೆ.

ಸೋಮವಾರ ಒಂದು ದಿನದ ರಜೆಯನ್ನು ನೌಕರರು ಪಡೆದುಕೊಂಡರೆ ಐದು ದಿನ ಒಟ್ಟಿಗೆ ರಜೆ ಸಿಗಲಿದೆ. ವಾರಾಂತ್ಯ ಮತ್ತು ಯುಗಾದಿ ಆಚರಣೆಗೆ ಬೆಂಗಳೂರಿನ ಜನರು ತಮ್ಮ ಊರುಗಳಿಗೆ ಹೊರಡುವ ಸಾಧ್ಯತೆ ಇದೆ.

ಕಳೆದ ವರ್ಷ ಯುಗಾದಿ ವೇಳೆಗೆ ಕೋವಿಡ್ ಕಾರಣ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅದರ ಹಿಂದಿನ ವರ್ಷದ ಚ್ಚುವರಿಯಾಗಿ 600 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿತ್ತು. ಈ ವರ್ಷ ನಿತ್ಯ ಬಸ್‌ಗಳು ಇಲ್ಲದ ಕಾರಣ ಜನರು ಪರದಾಡುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.