ಮಂಗಳವಾರ, ಏಪ್ರಿಲ್ 20, 2021
29 °C

ಭಯೋತ್ಪಾದನಾ ಕೇಂದ್ರ ಎಂಬ ಅರ್ಹತೆ ಹೊಂದಲು ಮಾನದಂಡಗಳೇನು: ಪ್ರಿಯಾಂಕ್‌ ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭಯೋತ್ಪಾದನಾ ಕೇಂದ್ರ ಎಂಬ ಅರ್ಹತೆ ಪಡೆಯಲು ಇರುವ ಮಾನದಂಡಗಳು ಏನು’ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ.  

ಈ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ, ‘ಬೆಂಗಳೂರಿನಲ್ಲಿ ಎಷ್ಟು ಭಯೋತ್ಪಾದನಾ ಚಟುವಟಿಕೆಗಳು ನಡೆದಿವೆ? ಭಯೋತ್ಪಾದನಾ ಕೇಂದ್ರವೆಂಬ ಅರ್ಹತೆ ಪಡೆಯಲು ಇರುವ ಮಾನದಂಡಗಳು ಏನು ಎಂಬುದನ್ನು ಬಿಜೆಪಿಯವರಿಂದ ಕೇಳಲು ನಾನು ಇಷ್ಟಪಡುತ್ತೇನೆ,’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.  

 

ಅಲ್ಲದೆ, ‘ಇನ್ನು ಮುಂದೆ ಹೂಡಿಕೆದಾರರನ್ನು ‘ಭಯೋತ್ಪಾದನಾ ನಗರ’ಕ್ಕೆ ಕರೆತರಲು ಕೈಗಾರಿಕಾ ಸಚಿವ ‌ಜಗದೀಶ್ ಶೆಟ್ಟರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಕಷ್ಟು ಶ್ರಮಪಡಬೇಕಿದೆ,’ ಎಂದು ಪ್ರಿಯಾಂಕ್‌ ಟ್ವೀಟ್‌ ಮಾಡಿದ್ದಾರೆ. 

 

‘ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ, ನಗರದಲ್ಲಿ ಎನ್ಐಎ ಮಾಡಿರುವ ಹಲವು  ಬಂಧನಗಳು ಅದನ್ನು ಸಾಬೀತು ಮಾಡಿವೆ. ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಶಾಶ್ವತ ವಿಭಾಗವನ್ನು ಸ್ಥಾಪಿಸುವಂತೆ ನಾನು ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದೆ. ಶೀಘ್ರದಲ್ಲೇ ಎನ್‌ಐಎಯನ್ನು ಸ್ಥಾಪಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ,’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಹೇಳಿದ್ದರು.‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು