ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ: ಯಕ್ಷಗಾನ ಸಾಹಿತ್ಯ ಪರಿಗಣನೆಗೆ ಒತ್ತಾಯ

Last Updated 29 ಜನವರಿ 2021, 19:29 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನ ಮತ್ತು ಅದರ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತ್ಯ ವಲಯ ಕಡೆಗಣಿಸುತ್ತಾ ಬಂದಿದೆ. ಈ ಬಾರಿಯ ಸಾಹಿತ್ಯ ಸಮ್ಮೇಳನಲ್ಲಾದರೂ ಯಕ್ಷಗಾನ ಸಾಹಿತ್ಯವನ್ನು ಪರಿಗಣಿಸಬೇಕು’ ಎಂದು ಕನ್ನಡ ಹಾಗೂ ಯಕ್ಷಗಾನ ಸಾಹಿತ್ಯ ಅಭಿಮಾನಿಗಳು ಒತ್ತಾಯಿಸಿದ್ದಾರೆ.

‘ಸುಮಾರು 800 ವರ್ಷಗಳ ಇತಿಹಾಸವಿರುವ ಯಕ್ಷಗಾನ ಸಾಹಿತ್ಯದಲ್ಲಿ ಸಾವಿರಕ್ಕೂ ಅಧಿಕ ಕವಿಗಳನ್ನು ಗುರುತಿಸಬಹುದು. ಆರು ಸಾವಿರಕ್ಕೂ ಅಧಿಕ ಪ್ರಸಂಗಗಳು ರಚನೆಯಾಗಿ, 10 ಲಕ್ಷಕ್ಕೂ ಅಧಿಕ ಪದ್ಯಗಳಿವೆ. 40ಕ್ಕೂ ಹೆಚ್ಚು ಪಿಎಚ್‌.ಡಿ ಪ್ರಬಂಧಗಳು ಮಂಡಿಸಲ್ಪಟ್ಟಿವೆ. ಶಿವರಾಮ ಕಾರಂತ, ಶತಾವಧಾನಿ ಆರ್. ಗಣೇಶ್, ರಾಘವ ನಂಬಿಯಾರ್, ಪ್ರಭಾಕರ ಜೋಷಿ, ನಾರಾಯಣ ಶೆಟ್ಟಿ, ಕಬ್ಬಿನಾಲೆ ವಸಂತ್ ಭಾರಧ್ವಾಜ್ ಸೇರಿದಂತೆ ಹಲವು ವಿದ್ವಾಂಸರು ಯಕ್ಷಗಾನದ ಬಗ್ಗೆ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ವಿಮರ್ಶೆ ಗಳು, ಚಿಂತನೆಗಳು ಸೇರಿದಂತೆ 10 ಸಾವಿರದಷ್ಟು ಕೃತಿಗಳು ರಚನೆಯಾಗಿವೆ. ಇಷ್ಟಾಗಿಯೂ ಸಾಹಿತ್ಯ ವಲಯ
ದಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಸೂಕ್ತ ಸ್ಥಾನವನ್ನು ನೀಡದೆ ಇರು ವುದು ಸೋಜಿಗ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕನ್ನಡವನ್ನು ತನ್ನದೇಯಾದ ರೀತಿಯಲ್ಲಿ ಬಳಸಿ, ಬೆಳೆಸುತ್ತಿರುವ ಯಕ್ಷಗಾನ ಮತ್ತು ಅದರ ಸಾಹಿತ್ಯದ ಪ್ರಯತ್ನವನ್ನು ಸಾಹಿತ್ಯ ಪರಿಷತ್ತು ಈಗಲಾದರೂ ಗುರುತಿಸಿ, ಪ್ರೋತ್ಸಾಹಿಸಬೇಕು. ಅದೇ ರೀತಿ, ನಿರಂತರವಾಗಿ ತನ್ನ ಕಾರ್ಯಚಟುವಟಿಕೆಯ ಭಾಗವಾಗಿ ಸ್ವೀಕರಿಸುವುದಕ್ಕೆ ಮನಸ್ಸು ಮಾಡಬೇಕು. ಮುಂಬರುವ ಸಮ್ಮೇಳನದಲ್ಲಿಯಾದರೂ ಅದ ಕ್ಕೊಂದು ನ್ಯಾಯ ಸಮ್ಮತ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT