ಹಾವೇರಿ (ಪಾಪು–ಚಂಪಾ ವೇದಿಕೆ): ‘ಕನ್ನಡದ ಅಸ್ಮಿತೆ ಉಳಿಸಲು ಯಕ್ಷಗಾನದ ಪಾತ್ರ ಬಹಳ ಪ್ರಮುಖವಾದುದು’ ಎಂದು ಲೇಖಕ ಡಾ. ಆನಂದರಾಮ ಉಪಾಧ್ಯ ಹೇಳಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನ ಎರಡನೇ ವೇದಿಕೆಯ ಹತ್ತನೇ ಗೋಷ್ಠಿಯಲ್ಲಿ ಭಾನುವಾರ ‘ಯಕ್ಷಗಾನ ಸಾಹಿತ್ಯ’ ಕುರಿತು ಮಾತನಾಡಿದ ಅವರು, ಯಕ್ಷಗಾನ ಜೀವನ ಮೌಲ್ಯ ಹೇಳಿಕೊಡುತ್ತದೆ. ಅದು ಕಾಲಕಾಲಕ್ಕೆ ತೆರೆದುಕೊಳ್ಳುತ್ತಿದೆ. ಪೌರಾಣಿಕ ಕಥನಗಳಿಗೆ ಸಮಕಾಲೀನ ವಿಷಯ ಸೇರಿಸಿ ಯಕ್ಷಗಾನ ಜೀವಂತವಾಗುಳಿದಿದೆ ಎಂದರು.

ಯಕ್ಷಗಾನದಲ್ಲಿ ಈಗ ಮಹಿಳಾ ಭಾಗವತಿಕೆ ಕೂಡ ಆರಂಭಗೊಂಡಿದೆ. ಮೂಡಲಪಾಯ, ಪಡುವಲಪಾಯ ಪ್ರಕಾರದ ಅನೇಕ ಕವಿಗಳು ಯಕ್ಷಗಾನ ಸಾಹಿತ್ಯ ಕೃಷಿ ಮಾಡಿದ್ದಾರೆ. ಕಳೆದ 70 ವರ್ಷಗಳಲ್ಲಿ ಯಕ್ಷಗಾನ ಕವಿಗಳು ಸಣ್ಣ ಸಣ್ಣ ಕಿರು ಪ್ರಸಂಗಗಳನ್ನು ಬರೆದಿದ್ದಾರೆ. ಐದು ಸಾವಿರ ಯಕ್ಷಗಾನ ಕೃತಿಗಳು ಹೊರಬಂದಿವೆ. ವಿಫುಲವಾದ ಸಾಹಿತ್ಯ ಪ್ರಕಾರವಾಗಿದ್ದರೂ ಜನರ ಗಮನಕ್ಕೆ ಬಂದಿಲ್ಲ. ವಿದ್ವತ್ ವಲಯ ಕೂಡ ಯಕ್ಷಗಾನ ಸಾಹಿತ್ಯದ ಕಡೆಗೆ ಗಮನಹರಿಸಲಿಲ್ಲ. ಆದರೆ, ಇಂದು 1,700ಕ್ಕೂ ಹೆಚ್ಚು ಯಕ್ಷಗಾನ ಸಾಹಿತ್ಯ ಕೃತಿಗಳು ಡಿಜಿಟಲೀಕರಣಗೊಂಡಿವೆ ಎಂದು ಹೇಳಿದರು.

ವೈದ್ಯ ಸಾಹಿತ್ಯ ನೆಲದ ಅಗತ್ಯ ಪೂರೈಸಲಿ:

'ವೈದ್ಯ ಸಾಹಿತ್ಯ’ದ ಕುರಿತು ಮಾತನಾಡಿದ ಡಾ.ಬಿ.ಟಿ. ರುದ್ರೇಶ್, ಹುಟ್ಟಿನಲ್ಲೇ ಸೃಜನಶೀಲತೆ ಇರುವುದರಿಂದ ವೈದ್ಯ ಸಾಹಿತ್ಯ ಕೂಡ ಸೃಜನಶೀಲವಾದುದು. ಒಬ್ಬ ವೈದ್ಯ ಸ್ನೇಹಿತ, ಮಾರ್ಗದರ್ಶಕ, ಚಿಕಿತ್ಸಕ ಆಗಿರಬೇಕು. ಯಾವುದೇ ವೈದ್ಯ ಸಾಹಿತ್ಯ ಆ ನೆಲದ ಅಗತ್ಯತೆ ಪೂರೈಸುವಂತಿರಬೇಕು ಎಂದು ಹೇಳಿದರು.

ವೈದ್ಯನಿಗೆ ರನ್ನ, ಪಂಪ ಏನು ಹೇಳಿದ ಎನ್ನುವುದು ತಿಳಿದಿರಬೇಕಿಲ್ಲ. ಜನರ ಭಾಷೆ ಗೊತ್ತಿರಬೇಕು. ವೈದ್ಯ ಸಾಹಿತ್ಯ ನಿಂತ ನೀರಲ್ಲ. ಬದುಕು ಒಳಿತೆನೆಡೆಯ ಧ್ಯಾನದಂತಿರಬೇಕೆಂಬುದು ವೈದ್ಯ ಸಾಹಿತ್ಯದ ಮುಖ್ಯ ತಿರುಳು. ಜೀವ–ಜೀವನ ನಮ್ಮ ಜಾತಿ, ಮತ, ಪಂಥ ವರ್ಗಕ್ಕಿಂತ ಮಿಗಿಲು ಎಂಬ ಅರಿವಿರಬೇಕು. ವೈದ್ಯ ಸಾಹಿತ್ಯ ಇಂದು ವಿಪುಲವಾಗಿ ಬೆಳೆಯುತ್ತಿದೆ. ಆದರೆ, ಚಿಕಿತ್ಸಕ ಭಾವನೆ ಬೆಳೆಯುತ್ತಿಲ್ಲ. ವೈದ್ಯಕೀಯ ಪರಿಕಲ್ಪನೆಗಳು ಸುಲಭವಾಗಿ ಜನರಿಗೆ ಅರ್ಥವಾಗುವಂತಿರಬೇಕು ಎಂದು ತಿಳಿಸಿದರು.

ಲೋಕದ ಡೊಂಕು ತಿದ್ದುತ್ತಿರುವ ಚುಟುಕುಗಳು:

‘ಚುಟುಕು ಸಾಹಿತ್ಯ’ದ ಕುರಿತು ಮಾತನಾಡಿದ ಕೃಷ್ಣಮೂರ್ತಿ ಕುಲಕರ್ಣಿ, ಇಂದಿನ ಸಮಕಾಲೀನ ಸಮಾಜದಲ್ಲಿ ಚುಟುಕು ಸಾಹಿತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ಲೋಕದ ಅಂಕು ಡೊಂಕು ತಿದ್ದುವಷ್ಟರ ಮಟ್ಟಿಗೆ ಚುಟುಕುಗಳು ಪ್ರಭಾವಶಾಲಿಯಾಗಿವೆ. ಹಾಸ್ಯದ ಹೊನಲು ಹರಿಸುವ ಶಕ್ತಿ, ವಿಡಂಬನೆಯ ತಾಕತ್ತು ಚುಟುಕುಗಳಿಗಿದೆ. ಅಂದಹಾಗೆ, ಚುಟುಕು ಸಾಹಿತ್ಯದ ಮೂಲ ತ್ರಿಪದಿಗಳು, ಬಸವಣ್ಣನವರ ವಚನಗಳು ಎಂದು ಹೇಳಿದರು.

ಚುಟುಕು ಸಾಹಿತ್ಯ ಹಸಿರು ಉಸಿರಾಗಿ ಬೆಳೆಯುತ್ತಿದೆ. ಸಮಗ್ರ ರಾಮಾಯಣ, ಭಾಗವತವನ್ನು ಚುಟುಕಾಗಿ ಹೇಳುವ ಪ್ರಯತ್ನಗಳು ಕವಿಗಳು ಮಾಡುತ್ತಿದ್ದಾರೆ. ನಾಲ್ಕು ಸಾಲುಗಳಲ್ಲಿ ರಾಮಾಯಣ ಕಥೆಯ ಅರ್ಥ ಹೇಳುವ ಶಕ್ತಿ ನಾಲ್ಕು ಸಾಲುಗಳ ಚುಟುಕಿನಲ್ಲಿದೆ. ಇದರಿಂದಲೇ ಅದರ ಮಹತ್ವ ಅರಿಯಬಹುದು. ಸರ್ವಜ್ಞನ ವಚನಗಳು ಚುಟುಕು ಸಾಹಿತ್ಯದ ಪ್ರಕಾರಗಳು. ಗ್ರೀಕ್, ಉರ್ದು ಸೇರಿದಂತೆ ಇತರೆ ಭಾಷೆಗಳ ಸಾಹಿತ್ಯದಲ್ಲೂ ಚುಟುಕುಗಳು ಜನಪ್ರಿಯವಾಗಿವೆ ಎಂದರು.

ಸಮಕಾಲೀನ ಸಮಸ್ಯೆಗಳಿಗೆ ಬಯಲಾಟ ಸ್ಪಂದನೆ:

‘ಬಯಲಾಟ ಸಾಹಿತ್ಯ’ದ ಬಗ್ಗೆ ಮಾತನಾಡಿದ ಡಾ. ಕೆ. ರುದ್ರಪ್ಪ, ಬಯಲಾಟ ಸಮಕಾಲೀನ ಸಮಸ್ಯೆಗಳನ್ನು ಇಟ್ಟುಕೊಂಡು ಕಥೆಗಳನ್ನು ಹೆಣೆಯುತ್ತಿದೆ. ಕಾಲಕಾಲಕ್ಕೆ ಬದಲಾಗುತ್ತಿರುವುದರ ಸಂಕೇತ ಇದು. ಬಯಲಾಟ, ದೊಡ್ಡಾಟದ ಪ್ರದರ್ಶನಗಳೆಲ್ಲ ಹೆಚ್ಚಾಗಿ ಹಳ್ಳಿಗಳಿಗೆ ಸೀಮಿತವಾಗಿವೆ. ಕಥೆಯೇ ಬಯಲಾಟಕ್ಕೆ ಪ್ರಧಾನ. ಪುರಾಣ, ರಾಮಾಯಣ, ಮಹಾಭಾರತದಿಂದ ಕಥೆಗಳನ್ನು ಆಯ್ದುಕೊಂಡು ಬಯಲಾಟ ಆಡಲಾಗುತ್ತದೆ. ಪೌರಾಣಿಕ ಕಥೆ ಆಧರಿಸಿ ಬಯಲಾಟ ಸಾಹಿತ್ಯವೂ ರಚನೆಯಾಗಿದೆ. ಕಾಲ್ಪನಿಕ ವಸ್ತುಗಳನ್ನು ಇಟ್ಟುಕೊಂಡು ಕೃತಿಗಳನ್ನೂ ರಚಿಸಲಾಗಿದೆ. ಬಸವರಾಜ ಮಲಶೆಟ್ಟಿ, ದುರ್ಗಾದಾಸ, ಪ್ರೊ. ಶ್ರೀಶೈಲ ಹೂದಾರ, ಎಂ.ಎಸ್. ಮಾಳವಾಡ ಅವರು ಬಯಲಾಟಕ್ಕೆ ಸಂಬಂಧಿಸಿದಂತೆ ಕೃತಿಗಳನ್ನು ಬರೆದಿದ್ದಾರೆ ಎಂದು ನೆನಪಿಸಿದರು.

ಬಯಲಾಟ ಅಂದರೆ ಜನಪದ ರಂಗಭೂಮಿಯ ಪ್ರದರ್ಶನ ಕಲೆಗಳಲ್ಲಿ ಒಂದು. ಬಯಲಾಟಕ್ಕೆ ಮೂಲ ನೆಲೆ ತಂದುಕೊಟ್ಟದ್ದು ಹಾವೇರಿ ಜಿಲ್ಲೆ. ಕರ್ನಾಟಕದಾದ್ಯಂತ ಬಯಲಾಟ ಅಸ್ತಿತ್ವ ಕಂಡುಕೊಂಡಿದೆ. ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ಇದರ ಪ್ರಭಾವ ಹೆಚ್ಚಿದೆ. ಭಾಗವತರ ಹಾಡುಗಾರಿಕೆ, ವೇಷಭೂಷಣ, ಮುಖವರ್ಣಿಕೆ, ಕಲಾವಿದರ ವೈವಿಧ್ಯಪೂರ್ಣವಾದ ಕುಣಿತ ಕಥೆಯ ಪ್ರದರ್ಶನವೇ ಬಯಲಾಟ. ಇದರಲ್ಲಿ ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣಪಾರಿಜಾತ, ತೊಗಲುಗೊಂಬೆ, ಸೂತ್ರಧಾರ ಇವುಗಳ ಪ್ರಮುಖ ಪ್ರಕಾರಗಳು ಎಂದು ವಿವರಿಸಿದರು.

ಅಮರೇಶ ಯತಗಲ್ ಸ್ವಾಗತಿಸಿದರು. ನಬಿಸಾಬ ಕುಷ್ಟಗಿ ನಿರೂಪಿಸಿದರು. ಜಿ.ಕೆ. ತಳವಾರ ವಂದಿಸಿದರು. ಬಿ.ಎಚ್. ಸತೀಶ್ಗೌಡ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.