2025 ವರ್ಷಾಂತ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಚಳಿಗಾಲದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸ ಹೋಗಲು ಯೋಚಿಸುತ್ತಿದ್ದರೆ, ನಿಮಗಾಗಿ ಕೆಲವು ಸ್ಥಳಗಳ ಮಾಹಿತಿಯನ್ನು ನಾವು ಕೊಡುತ್ತೇವೆ.

ಕೆಲವರು ಹೊಸ ವರ್ಷದ ಪಾರ್ಟಿ ಮಾಡಲು ಬೀಚ್ಗೆ ಹೋಗಲು ಬಯಸುತ್ತಾರೆ. ಇನ್ನೂ ಕೆಲವರು ಪರಿಸರ ಹಾಗೂ ಬೆಟ್ಟ ಗುಡ್ಡಗಳನ್ನು ಇಷ್ಟಪಡುತ್ತಾರೆ. ಜನ ದಟ್ಟಣೆ ಇಲ್ಲದ ಸ್ಥಳಗಳು ಎಲ್ಲರಿಗೂ ಇಷ್ಟವಾಗುತ್ತವೆ.

ಗೋಕರ್ಣ:

ಕರ್ನಾಟಕದ ಧಾರ್ಮಿಕ ಕ್ಷೇತ್ರ ಹಾಗೂ ಕಡಲ ತೀರವಾದ ಗೋಕರ್ಣಕ್ಕೆ ಹೊಸ ವರ್ಷದ ಸಂಭ್ರಮಾಚರಣೆಗೆ ಹೋಗಬಹುದು. ಇಲ್ಲಿನ ಕಡಲತೀರ ಸುಂದರವಾಗಿಯೂ, ಜನದಟ್ಟಣೆ ರಹಿತವಾಗಿಯೂ ಇರುವುದರಿಂದ ಹೊಸ ವರ್ಷದ ಆಚರಣೆಗೆ ಆರಾಮದಾಯಕವಾಗಿದೆ. ನಿಶ್ಯಬ್ದವಾದ ಕಡಲತೀರ, ರಾತ್ರಿಯ ಚಂದ್ರ, ಹಾಗೂ ಸೂರ್ಯಾಸ್ತವು ಉಲ್ಲಾಸವನ್ನು ನೀಡುತ್ತದೆ.
.ಚಳಿಗಾಲದ ಪ್ರವಾಸ ಹೋಗುವ ಭಾರತೀಯರಿಗೆ ಈ ಸ್ಥಳಗಳೇ ‘ಹಾಟ್ ಫೇವರಿಟ್’! ವರದಿ ಬಹಿರಂಗ.ಚಳಿಗಾಲದ ಪ್ರವಾಸ: ರಾಜಸ್ಥಾನದ ಈ ಸ್ಥಳಗಳು ನೀಡುತ್ತೆ ಉತ್ತಮ ಅನುಭವ.
ಆರೋವಿಲ್ಲೆ:

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿರುವ ಈ ನಗರವನ್ನು 'ಮುಂಜಾವಿನ ನಗರಿ' ಎಂದು ಕರೆಯುತ್ತಾರೆ. ವರ್ಷಾಂತ್ಯದಲ್ಲಿ ಈ ನಗರದಲ್ಲಿ ಧ್ಯಾನ ಕೂಟ, ಕಾರ್ಯಾಗಾರಗಳು ಮತ್ತು ಶಾಂತವಾದ ಕೆಫೆಗಳೊಂದಿಗೆ ಕೂಡಿರುತ್ತದೆ. ಸ್ವಂತ್ರವಾಗಿ ಎಲ್ಲರೊಟ್ಟಿಗೆ ಸೇರಿ ಹೊಸವರ್ಷವನ್ನು ಇಲ್ಲಿ ಆಚರಿಸಬಹುದಾಗಿದೆ. ಪಾರ್ಟಿಯನ್ನು ಹೆಚ್ಚು ಇಷ್ಟ ಪಡುವವರಿಗೆ ಆರೋವಿಲ್ಲೆ ಸೂಕ್ತ ಸ್ಥಳವಾಗಿದೆ.

ಚಿಕ್ಕಮಗಳೂರು:

ಕರ್ನಾಟಕದ ಮತ್ತೊಂದು ಪ್ರಮುಖ ಸ್ಥಳವಾದ ಚಿಕ್ಕಮಗಳೂರಿಗೂ ವರ್ಷಾಚರಣೆಗೆ ಹೋಗಬಹುದು. ಇಲ್ಲಿನ ಕೆಲವು ರೆಸಾರ್ಟ್ಗಳು ಹೊಸ ವರ್ಷದ ಆಚರಣೆಗೆ ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಇಲ್ಲಿನ ಸುಂದರ ಗಿರಿಧಾಮಗಳು, ಕಾಫಿ ತೋಟಗಳಲ್ಲಿ ಹೊಸ ವರ್ಷದ ಸಂಭ್ರಮವನ್ನು ಆಚರಣೆ ಮಾಡಬಹುದಾಗಿದೆ. ಇಲ್ಲಿ ಹಲವು ಹೋಮ್ ಸ್ಟೇಗಳಿದ್ದು ಫ್ಯಾಮಿಲಿಯೊಂದಿಗೂ ಭೇಟಿ ನೀಡಬಹುದು.
.ಚಳಿಗಾಲದ ಪ್ರವಾಸಕ್ಕೆ ಹೇಳಿ ಮಾಡಿಸಿದ ದೇಶಗಳಿವು: ವೀಸಾ ಕೂಡ ಬೇಕಿಲ್ಲ!.
ಅರಕು ಕಣಿವೆ:

ಆಂಧ್ರಪ್ರದೇಶದ ವಿಶಾಖಪಟ್ಟಣಂದ ಪೂರ್ವ ಘಟ್ಟಗಳ ತಪ್ಪಲಿನಲ್ಲಿರುವಸುಂದರ ಗಿರಿಧಾಮವಾಗಿದೆ. ಇಲ್ಲಿನ ಸುಂದರವಾದ ಅರಣ್ಯ ಪ್ರದೇಶ, ಹಸಿರಿನಿಂದ ಕೂಡಿದ ಕಣಿವೆಗಳು, ಜಲಪಾತ, ಕಾಫಿತೋಟ ಹಾಗೂ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಪ್ರಕೃತಿ ಮಡಿಲಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡ ಬಯಸುವವರು ಇಲ್ಲಿಗೆ ಭೇಟಿ ನೀಡಬಹುದು. ಮ್ಯೂಸಿಯಂ ಹಾಗೂ ಬೊರಾ ಗುಹೆಗಳನ್ನು ನೋಡಬಹುದು. ಈ ಸ್ಥಳವನ್ನು ಆಂಧ್ರದ ಊಟಿ ಎಂದೇ ಕರೆಯಲಾಗುತ್ತದೆ.

ಖಜ್ಜಿಯಾರ್ ಮತ್ತು ಚಂಬಾ

ಹಿಮಾಚಲ ಪ್ರದೇಶದಲ್ಲಿರುವ ಸುಂದರ ತಾಣಗಳಾದ ಖಜ್ಜಿಯಾರ್ ಹಾಗೂ ಚಂಬಾ ಹೊಸವರ್ಷದ ಸಂಭ್ರಮಾಚರಣೆಗೆ ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಹಿಮದೊಂದಿಗೆ ಕಾಲ ಕಳೆಯಲು ಹಾಗೂ ಹಿಮದೊಂದಿಗೆ ಹೊಸ ವರ್ಷವನ್ನು ಭರ ಮಾಡಿಕೊಳ್ಳ ಬಯಸುವವರು ಇಲ್ಲಿಗೆ ಭೇಟಿ ನೀಡಬಹುದು. ದಟ್ಟವಾದ ಕಾಡು ಹಾಗೂ ಪರ್ವತಗಳ ಸೌಂದರ್ಯ ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.